Saturday, 14th December 2024

ವಿಲ್ ಪುಕೋಸ್ಕಿ ಗಾಯಾಳು: ಅಂತಿಮ ಟೆಸ್ಟ್ ಪಂದ್ಯಕ್ಕೆ ಮಾರ್ಕಸ್ ಹ್ಯಾರಿಸ್

ಸಿಡ್ನಿ: ಆಸ್ಟ್ರೇಲಿಯಾ ಆಟಗಾರರು ಕೂಡ ಗಾಯದ ತೊಂದರೆಗೆ ಸಿಲುಕಿದ್ದಾರೆ. ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ವಿಲ್ ಪುಕೋಸ್ಕಿ ಗುರುವಾರ ನಡೆದ ಫಿಟ್ನೆಸ್ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದು, ಅಂತಿಮ ಟೆಸ್ಟ್ ಪಂದ್ಯಕ್ಕೆ ಲಭ್ಯವಿರುವುದಿಲ್ಲ. ವಿಲ್ ಪುಕೋಸ್ಕಿ ಸ್ಥಾನಕ್ಕೆ ಮಾರ್ಕಸ್ ಹ್ಯಾರಿಸ್ ಬರಲಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಟೆಸ್ಟ್ ಸರಣಿಯಲ್ಲಿ, ಭಾರತ ಮತ್ತು ಆಸ್ಟ್ರೇಲಿಯಾ 1-1 ಸಮಬಲ ಸಾಧಿಸಿವೆ. ಶುಕ್ರವಾರ ಆರಂಭ ವಾಗಲಿರುವ ಸರಣಿಯ ಕೊನೆಯ ಪಂದ್ಯದಲ್ಲಿ ಉಭಯ ತಂಡಗಳು ಕೂಡ ಗೆಲುವು ಸಾಧಿಸುವ ಉತ್ಕಟ ಇಚ್ಛೆ ಹೊಂದಿವೆ.

ವಿಲ್ ಪುಕೋಸ್ಕಿ ಮೊದಲ ಇನ್ನಿಂಗ್ಸ್‌ನಲ್ಲಿ 62 ರನ್ ಗಳಿಸಿ ಗಮನ ಸೆಳೆದಿದ್ದರು. ಆದರೆ ನಂತರದಲ್ಲಿ ಭುಜದ ನೋವಿಗೆ ಸಿಲುಕಿ ದ್ದಾರೆ. ಆರಂಭಿಕ ಮತ್ತು ಭರವಸೆಯ ಬ್ಯಾಟ್ಸ್‌ಮನ್ ವಿಲ್ ಪುಕೋಸ್ಕಿ ಅನುಪಸ್ಥಿತಿ ಆಸ್ಟ್ರೇಲಿಯಾ ತಂಡವನ್ನು ಕಾಡಲಿದೆ.