Friday, 13th December 2024

ಮಹಿಳಾ ಕ್ರಿಕೆಟರ್‌ ವೇದಾ ಕೃಷ್ಣಮೂರ್ತಿ ಕುಟುಂಬಕ್ಕೆ ಕರೋನಾ ಸೋಂಕು ದೃಢ

ಚಿಕ್ಕಮಗಳೂರು: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಕುಟುಂಬದ ಎಲ್ಲರಿಗೂ ಕೋವಿಡ್ ಪಾಸಿಟಿವ್ ದೃಢವಾಗಿದೆ.

ಚಿಕ್ಕಮಗಳೂರಿನ ಕಡೂರಿನ ವೇದ ಕೃಷ್ಣಮೂರ್ತಿ ತಾಯಿ ಕೋವಿಡ್ ಸೋಂಕಿನಿಂದಾಗಿ ಶುಕ್ರವಾರ ಮೃತಪಟ‍್ಟಿದ್ದರು.

ಬೆಂಗಳೂರಿನಲ್ಲೇ ವೇದಾ ಕೃಷ್ಣಮೂರ್ತಿ ಕುಟುಂಬದವರಿಗೆ ಪಾಸಿಟಿವ್ ಬಂದಿತ್ತು. ವೇದಾ ಅವರ ತಂದೆ, ಅಣ್ಣ-ಅತ್ತಿಗೆ, ಅಕ್ಕನಿಗೂ ಕೋವಿಡ್ ಸೋಂಕು ದೃಢವಾಗಿತ್ತು. ಕುಟುಂಬದವರಿಗೆ ಸೋಂಕು ತಗುಲಿದ್ದರೂ ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಚಿಕ್ಕಮಗಳೂರು ಡಿಹೆಚ್‌ಒ ಉಮೇಶ್ ಹೇಳಿದರು.

ವೇದಾ ಕೃಷ್ಣಮೂರ್ತಿ ಅವರು 2011ರಿಂದ ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.