Wednesday, 11th December 2024

ಸೋತ ಐರ್ಲೆಂಡ್: ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಮಹಿಳಾ ಹಾಕಿ ತಂಡ

ಟೋಕಿಯೊ: ಮತ್ತೊಂದು ತಂಡದ ಸೋಲು-ಗೆಲುವಿನ ಲೆಕ್ಕಚಾರದಲ್ಲಿದ್ದ ಭಾರತದ ಮಹಿಳಾ ಹಾಕಿ ತಂಡಕ್ಕೆ ಐರ್ಲೆಂಡ್ ಸೋಲು ಅದೃಷ್ಟ ತಂದಿಟ್ಟಿದೆ. ಈ ಮೂಲಕ ಟೋಕಿಯೊ ಒಲಂಪಿಕ್ಸ್ ನಲ್ಲಿ ಅದೃಷ್ಟ ಭಾರತ ಮಹಿಳಾ ಹಾಕಿ ತಂಡದ ಕೈಹಿಡಿದಿದೆ.

ಶನಿವಾರ ನಡೆದ ಗ್ರೇಟ್ ಬ್ರಿಟನ್ ಮತ್ತು ಐರ್ಲೆಂಡ್ ನಡುವಿನ ಪಂದ್ಯದಲ್ಲಿ ಐರ್ಲೆಂಡ್ ಸೋಲು ಭಾರತ ಮಹಿಳಾ ಹಾಕಿ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸಲು ಸಾಧ್ಯವಾಗಿದೆ.

ಕ್ವಾರ್ಟರ್ ಫೈನಲ್ ನಲ್ಲಿ ಭಾರತ ತಂಡ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಭಾರತ ಮಹಿಳಾ ಹಾಕಿ ತಂಡ ಮೂರನೇ ಬಾರಿಗೆ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದು ಇದೇ ಮೊದಲ ಬಾರಿಗೆ ಕ್ವಾರ್ಟರ್ ಫೈನಲ್ ಗೆ ಪ್ರವೇಶಿಸಿದೆ. ಗ್ರೇಟ್ ಬ್ರಿಟನ್ ತಂಡ ಐರ್ಲೆಂಡ್ ವಿರುದ್ಧ 2-0 ಗೋಲುಗಳಿಂದ ಮಣಿಸಿದೆ.