Saturday, 14th December 2024

ಟ್ರಯಲ್ ‌ಬ್ಲೇಸರ್ಸ್ ಮತ್ತು ಸೂಪರ್ ನೋವಾಸ್ ನಡುವಿನ ಪಂದ್ಯ ಇಂದು

ಶಾರ್ಜಾ: ವನಿತೆಯರ ಟಿ20 ಚಾಲೆಂಜ್ ತೃತೀಯ ಪಂದ್ಯದಲ್ಲಿ ಟ್ರಯಲ್ ‌ಬ್ಲೇಸರ್ಸ್ ಮತ್ತು ಸೂಪರ್ ನೋವಾಸ್ ತಂಡಗಳು ಮುಖಾಮುಖಿಯಾಗಲಿವೆ. ಶನಿವಾರ ಈ ಪಂದ್ಯ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಟೂರ್ನಿಯ ಮೊದಲ ಪಂದ್ಯದಲ್ಲಿ ಸೂಪರ್ ನೋವಾಸ್ ವಿರುದ್ಧ ವೆಲಾಸಿಟಿ 5 ವಿಕೆಟ್‌ನಿಂದ ಗೆದ್ದಿತ್ತು. ದ್ವಿತೀಯ ಪಂದ್ಯದಲ್ಲಿ ವೆಲಾಸಿಟಿ ವಿರುದ್ಧ ಟ್ರಯಲ್‌ಬ್ಲೇಸರ್ಸ್ 9 ವಿಕೆಟ್‌ಗಳ ಗೆಲುವಾಚರಿಸಿತ್ತು. ಅಂಕಪಟ್ಟಿಯಲ್ಲಿ ಅಗ್ರ 2ರಲ್ಲಿ ಉಳಿಯುವ ತಂಡಗಳು ಫೈನಲ್‌ನಲ್ಲಿ ಸ್ಪರ್ಧಿಸಲಿವೆ. ಫೈನಲ್‌ ಪಂದ್ಯ ನ.9ರಂದು ನಡೆಯಲಿದೆ.

ಸೂಪರ್ ನೋವಾಸ್ ಸಂಭಾವ್ಯ ತಂಡ: ಪ್ರಿಯಾ ಪುನಿಯಾ, ಚಮರಿ ಅತಪಟ್ಟು, ಜೆಮಿಮಾ ರೋಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಶಶಿಕಲಾ ಸಿರಿವರ್ಧನೆ, ತಾನಿಯಾ ಭಾಟಿಯಾ, ರಾಧಾ ಯಾದವ್, ಪೂನಂ ಯಾದವ್, ಅರುಂಧತಿ ರೆಡ್ಡಿ, ಶಕೇರಾ ಸೆಲ್ಮನ್ ಮತ್ತು ಅಯಬೊಂಗಾ ಖಕಾ.

ಟ್ರಯಲ್‌ಬ್ಲೇಸರ್ಸ್ ಸಂಭಾವ್ಯ ತಂಡ: ಸ್ಮೃತಿ ಮಂದಾನಾ (ನಾಯಕಿ), ದಿಯಾಂಡ್ರಾ ಡೊಟಿನ್, ರಿಚಾ ಘೋಷ್, ಹಾರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ದಯಾಲನ್ ಹೇಮಲತಾ, ನಟ್ಟಕನ್ ಚಾಂಟಮ್, ಸೋಫಿ ಎಕ್ಲೆಸ್ಟೋನ್, ಸಲ್ಮಾ ಖತುನ್, ರಾಜೇಶ್ವರಿ ಗಾಯಕ್ವಾಡ್ ಮತ್ತು ಜೂಲಾನ್ ಗೋಸ್ವಾಮಿ.