Friday, 13th December 2024

ಡಬ್ಲ್ಯುಟಿಸಿ ಫೈನಲ್’ ಗಳ ದಿನಾಂಕ ಘೋಷಣೆ

ವದೆಹಲಿ: ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ದಿ ಓವಲ್’ನಲ್ಲಿ ನಡೆಯಲಿರುವ ಡಬ್ಲ್ಯುಟಿಸಿ ಫೈನಲ್’ ಗಳ ದಿನಾಂಕಗಳನ್ನ ಬಹಿರಂಗಪಡಿಸಿದೆ.

ಭಾರತ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಪ್ರಮುಖ ಸ್ಪರ್ಧಿಗಳಾಗಿದ್ದು, ಫೆಬ್ರವರಿ 9, 2023 ರಂದು ನಾಗ್ಪುರದಲ್ಲಿ ಪ್ರಾರಂಭ ವಾಗುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತವು ಆಸ್ಟ್ರೇಲಿಯಾವನ್ನ ಎದುರಿಸಲಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಮುಗಿದ ನಂತರ ಡಬ್ಲ್ಯುಟಿಸಿ ಫೈನಲ್ಸ್ 2023 ರ ಜೂನ್ 7 ರಿಂದ 11 ರವರೆಗೆ ಲಂಡನ್’ನ ದಿ ಓವಲ್’ನಲ್ಲಿ ನಡೆಯಲಿದೆ. ನ್ಯೂಜಿಲೆಂಡ್ ಪ್ರಶಸ್ತಿಯ ಹಾಲಿ ಚಾಂಪಿಯನ್ ಆದರೆ ಫೈನಲ್ನಲ್ಲಿ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಅವಕಾಶ ವನ್ನ ಸಹ ಪಡೆಯುವುದಿಲ್ಲ. ಕಿವೀಸ್ 2021ರಲ್ಲಿ ಭಾರತವನ್ನ ವಿಕೆಟ್’ಗಳ ಅಂತರದಿಂದ ಸೋಲಿಸಿತು. ಈ ಪಂದ್ಯವನ್ನ ಸೌತಾಂಪ್ಟನ್’ನಲ್ಲಿ ಆಡಲಾಯಿತು.

ಆಸೀಸ್ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನದಲ್ಲಿದ್ದು, ನಂತರ ಭಾರತ 58.93 ರಷ್ಟಿದೆ. ಜೂನ್ 7, 2023 ರಂದು ಪ್ರಾರಂಭ ವಾಗುವ ಫೈನಲ್ನಲ್ಲಿ ಯಾರು ಆಡುತ್ತಾರೆ ಎಂಬುದನ್ನ ಫಲಿತಾಂಶದ ಸರಣಿ ನಿರ್ಧರಿಸುತ್ತದೆ.