Saturday, 12th October 2024

ರಷ್ಯಾದ ಟೆನ್ನಿಸ್ ಆಟಗಾರ್ತಿ ಯಾನಾ ಸಿಝಿಕೋವಾ ಬಂಧನ

ಪ್ಯಾರೀಸ್: ರಷ್ಯಾದ ಟೆನ್ನಿಸ್ ಆಟಗಾರ್ತಿ ಯಾನಾ ಸಿಝಿಕೋವಾ ಅವರನ್ನು ಬಂಧಿಸಲಾಗಿದೆ. ಅವರ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿಬಂದಿದೆ ಎಂದು ಮೂಲಗಳು ತಿಳಿಸಿವೆ.

2020ರ ಸೆಪ್ಟೆಂಬರ್‌ನಲ್ಲಿ, ಫ್ರೆಂಚ್ ಓಪನ್‌ನಲ್ಲಿ ನಡೆದ ಮಹಿಳೆಯರ ಡಬಲ್ಸ್ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ಕುರಿತು ಫ್ರೆಂಚ್ ಪ್ರಾಸಿಕ್ಯೂಟರ್‌ಗಳು ತನಿಖೆ ಪ್ರಾರಂಭಿಸಿದರು. ತನಿಖೆ ರೊಮೇನಿಯನ್ ಜೋಡಿ ಆಂಡ್ರಿಯಾ ಮಿತು ಮತ್ತು ಪೆಟ್ರೀಷಿಯಾ ಮಾರಿ ಮತ್ತು ಸಿಝಿಕೋವಾ ಮತ್ತು ಅಮೇರಿಕನ್ ಮ್ಯಾಡಿಸನ್ ಬ್ರೆಂಗಲ್ ನಡುವಿನ ಡಬಲ್ಸ್ ಪಂದ್ಯಕ್ಕೆ ಸಂಬಂಧಿಸಿದೆ.

ರಷ್ಯಾದ ಟೆನ್ನಿಸ್ ಫೆಡರೇಶನ್‌ನ ಅಧ್ಯಕ್ಷ ಶಮೀಲ್ ಟಾರ್ಪಿಶೆವ್ , ಸಿಝಿಕೋವಾ ಬಂಧನದ ಬಗ್ಗೆ ತನಗೆ ತಿಳಿಸಲಾಗಿದ್ದು ಪ್ಯಾರಿಸಿ ನಲ್ಲಿರುವ ರಷ್ಯಾದ ರಾಯಭಾರ ಕಚೇರಿಯ ಪರಿಸ್ಥಿತಿಯ ಕುರಿತು ತಿಳಿದಿದೆ. ನಾವು ಯಾವುದೇ ದಾಖಲೆಗಳನ್ನು (ಪ್ರಕರಣಕ್ಕೆ ಸಂಬಂಧಿಸಿದಂತೆ) ಸ್ವೀಕರಿಸಿಲ್ಲ ಎಂದು ಟಾರ್ಪಿಶೆವ್ ಹೇಳಿದ್ದಾರೆ

ಕ್ರೀಡೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ವ್ಯವಹರಿಸುವ ಅಂತರರಾಷ್ಟ್ರೀಯ ಟೆನ್ನಿಸ್ ಸಮಗ್ರತೆ ಸಂಸ್ಥೆ(ಐಟಿಐಎ) ಇದಕ್ಕೆ ತಾನು ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದೆ. ಐಟಿಐಎ ಟೆನಿಸ್ ಆಡಳಿತ ಮಂಡಳಿಗಳು ಸ್ಥಾಪಿಸಿದ ಸ್ವತಂತ್ರ ಸಂಸ್ಥೆಯಾಗಿದೆ.