ಪರ್ತ್: ಆಸೀಸ್ ವಿರುದ್ಧದ ಮೊದಲ ಟೆಸ್ಟ್ನ ಮೊದಲ ಇನಿಂಗ್ಸ್ನಲ್ಲಿ ಶೂನ್ಯ ಸಂಕಟಕ್ಕೆ ಸಿಲುಕಿದ್ದ ಟೀಮ್ ಇಂಡಿಯಾದ ಯುವ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್(Yashasvi Jaiswal) ದ್ವಿತೀಯ ಇನಿಂಗ್ಸ್ನಲ್ಲಿ ಅಮೋಘ ಬ್ಯಾಟಿಂಗ್ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಕ್ಯಾಲೆಂಡರ್ ವರ್ಷದಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ವಿಶ್ವದ ಮೊದಲ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ.
ಜೈಸ್ವಾಲ್ಗೂ ಮುನ್ನ ಈ ದಾಖಲೆ ಈ ದಾಖಲೆ ನ್ಯೂಜಿಲ್ಯಾಂಡ್ನ ಮಾಜಿ ನಾಯಕ ಬ್ರೆಂಡನ್ ಮೆಕಲಮ್ ಹೆಸರಿನಲ್ಲಿತ್ತು. ಮೆಕಲಮ್ 2014 ರಲ್ಲಿ 33 ಸಿಕ್ಸರ್ ಬಾರಿಸಿದ್ದರು. ಜೈಸ್ವಾಲ್ 2024ರಲ್ಲಿ 34* ಸಿಕ್ಸರ್ ಬಾರಿಸಿ ದಾಖಲೆ ತನ್ನ ಹೆಸರಿಗೆ ಬರೆದಿದ್ದಾರೆ. ನಥಾನ್ ಲಿಯೋನ್ ಎಸೆತಕ್ಕೆ ಸಿಕ್ಸರ್ ಬಾರಿಸುವ ಮೂಲಕ ಜೈಸ್ವಾಲ್ ಈ ಮೈಲುಗಲ್ಲು ನೆಟ್ಟರು. ಸದ್ಯ 80 ರನ್ ಗಡಿ ದಾಟಿರುವ ಜೈಸ್ವಾಲ್ ಶತಕ ಬಾರಿಸುವತ್ತ ದಾಪುಗಾಲಿಟ್ಟಿದ್ದಾರೆ.
ಟೆಸ್ಟ್ ಕ್ಯಾಲೆಂಡರ್ ವರ್ಷದಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿ ಆಟಗಾರರು
ಜೈಸ್ವಾಲ್-34 ಸಿಕ್ಸರ್ (2024)
ಬ್ರೆಂಡನ್ ಮೆಕಲಮ್ 33 ಸಿಕ್ಸರ್ (2014)
ಬೆನ್ ಸ್ಟೋಕ್ಸ್ 26 ಸಿಕ್ಸರ್ (2022)
ಆ್ಯಡಂ ಗಿಲ್ ಕ್ರಿಸ್ಟ್ 22 ಸಿಕ್ಸರ್ (2005)
ವೀರೇಂದ್ರ ಸೆಹವಾಗ್ 22 ಸಿಕ್ಸರ್ (2008)
ದಾಖಲೆ ಬರೆದ ಜೈಸ್ವಾಲ್-ರಾಹುಲ್
2004 ರ ನಂತರ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಶತಕದ ಜತೆಯಾಟ ನಡೆಸಿದ ಭಾರತದ ಮೊದಲ ಆರಂಭಿಕ ಜೋಡಿ ಎಂಬ ಹಿರಿಮೆಗೆ ಜೈಸ್ವಾಲ್ ಮತ್ತು ರಾಹುಲ್ ಪಾತ್ರರಾಗಿದ್ದಾರೆ. ಜತೆಗೆ ಈ ಸಾಧನೆ ಮಾಡಿದ ಭಾರತದ ಆರನೇ ಜೋಡಿ ಎನಿಸಿಕೊಂಡರು. 2004ರ ಸರಣಿಯಲ್ಲಿ ಸಿಡ್ನಿಯಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ವೀರೇಂದ್ರ ಸೆಹ್ವಾಗ್ ಮತ್ತು ಆಕಾಶ್ ಚೋಪ್ರಾ 123 ರನ್ ಜತೆಯಾಟ ನಡೆಸಿದ್ದರು.
ಆಸ್ಟ್ರೇಲಿಯಾ ನೆಲದಲ್ಲಿ ಆರಂಭಿಕ ವಿಕೆಟ್ಗೆ ನೂರು ರನ್ಗಳ ಜತೆಯಾಟ ನಡೆಸಿದ ಮೊದಲ ಜೋಡಿ ಎಂಬ ದಾಖಲೆ ಸುನೀಲ್ ಗವಾಸ್ಕರ್ ಮತ್ತು ಕೆ. ಶ್ರೀಕಾಂತ್ ಹೆಸರಿನಲ್ಲಿದೆ. ಈ ಜೋಡಿ 1986ರಲ್ಲಿ ಸಿಡ್ನಿಯಲ್ಲಿ ನಡೆದಿದ್ದ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 191 ರನ್ ಬಾರಿಸಿದ್ದರು.