Friday, 13th December 2024

ಎರಡನೇ ಟೆಸ್ಟ್: ಯಶಸ್ವಿ ಜೈಸ್ವಾಲ್ ಭರ್ಜರಿ ಶತಕ

ವಿಶಾಖಪಟ್ಟಣ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಭಾರತದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರು ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ.

ನಿಧಾನವಾಗಿ ಇನ್ನಿಂಗ್ಸ್ ಆರಂಭಿಸಿದ ಜೈಸ್ವಾಲ್ ನಂತರ ತುಸು ವೇಗವಾಗಿ ಬ್ಯಾಟ್ ಬೀಸಿದರು. 151 ಎಸೆತಗಳಲ್ಲಿ ಅವರು ಎರಡನೇ ಟೆಸ್ಟ್ ಶತಕ ಪೂರೈಸಿ ದರು. ಅದರಲ್ಲಿ 11 ಬೌಂಡರಿ ಮತ್ತು ಮೂರು ಸಿಕ್ಸರ್ ಸಿಡಿಸಿದರು.

ಜೈಸ್ವಾಲ್ ನಾಯಕ ರೋಹಿತ್ ಜತೆ 40 ರನ್ ಜತೆಯಾಟ ಮತ್ತು ಗಿಲ್ ಜತೆಗೆ 49 ರನ್ ಜತೆಯಾಟವಾಡಿದರು. ಮೂರನೇ ವಿಕೆಟ್ ಗೆ ಶ್ರೇಯಸ್ ಅಯ್ಯರ್ ಅವರ ಜತೆಗೆ 90 ರನ್ ಜತೆಯಾಟವಾಡಿದರು. ರೋಹಿತ್ 14 ರನ್, ಗಿಲ್ 34 ರನ್ ಮತ್ತು ಅಯ್ಯರ್ 27 ರನ್ ಮಾಡಿ ಔಟಾದರು.