Saturday, 14th December 2024

ಪಾಕಿಸ್ತಾನ ಕ್ರಿಕೆಟ್‌ ತಂಡಕ್ಕೆ ಯಾಸಿರ್‌ ಅರಾಫತ್‌ ‘ಹೈ ಪರ್ಫಾರ್ಮೆನ್ಸ್‌ ‘ ಕೋಚ್

ರಾಚಿ: ಮಾಜಿ ಆಲ್‌ರೌಂಡರ್‌ ಯಾಸಿರ್‌ ಅರಾಫತ್‌ ಅವರನ್ನು ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ಪಾಕಿಸ್ತಾನ ಕ್ರಿಕೆಟ್‌ ತಂಡಕ್ಕೆ ‘ಹೈ ಪರ್ಫಾರ್ಮೆನ್ಸ್‌ ‘ ಕೋಚ್ ಆಗಿ ಪಾಕ್‌ ಕ್ರಿಕೆಟ್‌ ಮಂಡಳಿ ನೇಮಿಸಿದೆ.

ನ್ಯೂಜಿಲೆಂಡ್‌ನಲ್ಲಿ ನಡೆಯುವ ಟಿ20 ಸರಣಿಗೆ 17 ಸದಸ್ಯರ ಪಾಕ್‌ ತಂಡವನ್ನು ಈಗಾಗಲೇ ಪ್ರಕಟಿಸಲಾಗಿದೆ. ಈ ಸರಣಿಯು ಮುಂದಿನ ವರ್ಷ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ ಪಾಕ್‌ ಪಾಲಿಗೆ ಪೂರ್ವಸಿದ್ಧತೆಯಾಗಿದೆ.

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಗೆ ಪಾಕಿಸ್ತಾನ ತಂಡದ ಹೈ ಪರ್ಫಾರ್ಮೆನ್ಸ್‌ ಪ್ರದರ್ಶನದ ಕೋಚ್ ಆಗಿರುವ ಸೈಮನ್ ಹೆಲ್ಮಟ್ ಅವರ ಸ್ಥಾನಕ್ಕೆ ಯಾಸಿರ್ ಅವರನ್ನು ನೇಮಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮೂರು ಟೆಸ್ಟ್‌ ಮತ್ತು 11 ಏಕದಿನ ಪಂದ್ಯಗಳಲ್ಲಿ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸಿದ್ದ ಯಾಸಿರ್‌ ಅವರು, 2009ರ ಐಸಿಸಿ ಟಿ20 ವಿಶ್ವಕಪ್‌ ಗೆದ್ದ ಪಾಕ್‌ ತಂಡದ ಭಾಗವಾಗಿದ್ದರು.