ಹರಾರೆ: ಇಲ್ಲಿನ ಹರಾರೆ ಸ್ಪೋರ್ಟ್ಸ್ ಕ್ಲಬ್ ಸ್ಟೇಡಿಯಂನಲ್ಲಿ ನಡೆದಿದ್ದ ಎರಡನೇ ಏಕದಿನ ಪಂದ್ಯದಲ್ಲಿ (ZIM vs AFG) ಜಿಂಬಾಬ್ವೆ ವಿರುದ್ದ ಅಫ್ಘಾನಿಸ್ತಾನ ತಂಡ 232 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಇತಿಹಾಸವನ್ನು ಬರೆಯಿತು. ಏಕದಿನ ಕ್ರಿಕೆಟ್ ಇತಿಹಾಸದಲ್ಲಿಯೇ ಅಫ್ಘಾನಸ್ತಾನ ತಂಡದ ಅತ್ಯಂತ ದೊಡ್ಡ ಗೆಲುವು ಇದಾಗಿದೆ. ಇದಕ್ಕೂ ಮುನ್ನ ಸೆಪ್ಟಂಬರ್‌ನಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧ ಅಫಘಾನಿಸ್ತಾನ ತಂಡ 177 ರನ್‌ಗಳ ಗೆಲುವನ್ನು ಪಡೆದಿತ್ತು. ಇದೀಗ 232 ರನ್‌ಗಳ ಗೆಲುವು ಪಡೆಯುವ ಮೂಲಕ ತನ್ನದೇ ದಾಖಲೆಯನ್ನು ಉತ್ತಮಪಡಿಸಿಕೊಂಡಿದೆ.
ಅಂದ ಹಾಗೆ ಎರಡನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಅಫ್ಘಾನಿಸ್ತಾನ ತಂಡ 286 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಜಿಂಬಾಬ್ವೆ ತಂಡ 17.5 ಓವರ್‌ಗಳಿಗೆ ಕೇವಲ 54 ರನ್‌ಗಳಿಗೆ ಆಲ್‌ಔಟ್ ಆಯಿತು. ಸೆಡಿಕುಲ್ಹಾ ಅಟಲ್ ಅವರ ಚೊಚ್ಚಲ ಶತಕದ ಬಲದಿಂದ ಅಫ್ಘಾನಿಸ್ತಾನ ಗೆಲುವು ಪಡೆಯಿತು. ನಂತರ ಜಿಂಬಾಬ್ವೆ ತಂಡವನ್ನು ಘಝನಫರ್, ನವೀದ್ ಝರ್ಡಾನ್ ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿ ಬಹುಬೇಗ ಕಟ್ಟಿ ಹಾಕಿದರು. ಇವರ ಜೊತೆಗೆ ಫಝಲಕ್ ಫಾರೂಕಿ ಎರಡು ವಿಕೆಟ್ ಕಿತ್ತಿದ್ದರು. ಮೊದಲನೇ ಪಂದ್ಯ ಮಳೆಯಿಂದ ರದ್ದಾಗಿತ್ತು. ಇದೀಗ ಆಫ್ಘನ್ ತಂಡ ಏಕದಿನ ಸರಣಿಯಲ್ಲಿ 1-0 ಮುನ್ನಡೆಯನ್ನು ಪಡೆದಿದೆ.
RESULT | AFGHANISTAN WON BY 232 RUNS 🚨
— Afghanistan Cricket Board (@ACBofficials) December 19, 2024
AM Ghazanfar 3/9, Naveed Zadran (3/13), @fazalfarooqi10 (2/15) and @AzmatOmarzay (1/17) put on a dominant bowling effort to help #AfghanAtalan beat Zimbabwe by 232 runs and take a 1-0 lead in the series. 🙌
This is Afghanistan's biggest… pic.twitter.com/jvPpMSFD6j
286 ರನ್‌ಗಳನ್ನು ಕಲೆ ಹಾಕಿದ್ದ ಅಫ್ಘಾನಿಸ್ತಾನ
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಅಫ್ಘಾನಿಸ್ತಾನ ತಂಡ ತನ್ನ ಪಾಲಿನ 50 ಓವರ್‌ಗಳಿಗೆ 6 ವಿಕೆಟ್‌ಗಳ ನಷ್ಟಕ್ಕೆ 286 ರನ್‌ಗಳನ್ನು ಕಲೆ ಹಾಕಿತ್ತು. ಸೆಡಿಕುಲ್ ಅಟಲ್ ಹಾಗೂ ಅಬ್ದುಲ್ ಮಲಿಕ್ ಮೊದಲನೇ ವಿಕೆಟ್‌ಗೆ 35 ಓವರ್‌ಗಳಲ್ಲಿ 191 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಆಫ್ಘನ್ ತಂಡ ಭರ್ಜರಿ ಆರಂಭವನ್ನು ಪಡೆದಿತ್ತು. ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಅಬ್ದುಲ್ ಮಲಿಕ್ ಅವರು 101 ಎಸೆತಗಳಲ್ಲಿ 84 ರನ್ ಗಳಿಸಿ ಕೂದಲೆಳೆಯ ಅಂತರದಲ್ಲಿ ಶತಕ ವಂಚಿತರಾದರು. ಆದರೆ, ಮತ್ತೊಂದು ತುದಿಯಲ್ಲಿ ಅತ್ಯುತ್ತಮ ಬ್ಯಾಟ್ ಮಾಡಿದ್ದ ಸೆಡಿಕುಲ್ಹಾ ಅಟಲ್ ಅವರು 128 ಎಸೆತಗಳಲ್ಲಿ 104 ರನ್‌ಗಳಿಸಿ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಏಕದಿನ ಶತಕವನ್ನು ಪೂರ್ಣಗೊಳಿಸಿದರು.
ಇನ್ನು ಅಟಿಲ್ ಅವರ ಚೊಚ್ಚಲ ಶತಕದ ಇನಿಂಗ್ಸ್‌ನಲ್ಲಿ ಎಂಟು ಬೌಂಡರಿಗಳು ಹಾಗೂ ನಾಲ್ಕು ಸಿಕ್ಸರ್‌ಗಳು ಒಳಗೊಂಡಿವೆ. ಇನ್ನು ಕೊನೆಯ ಹಂತದಲ್ಲಿ ಹಸಮತ್‌ವುಲ್ಲಾ 29 ರನ್‌ಗಳ ನಿರ್ಣಾಯಕ ಕೊಡುಗೆಯನ್ನು ನೀಡಿದ್ದರು. ಜಿಂಬಾಬ್ವೆ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದ ಎನ್‌ಯಾಮುರಿ 10 ಓವರ್‌ಗಳಿಗೆ 53 ರನ್ ನೀಡಿ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಇವರಿಗೆ ಸಾಥ್ ನೀಡಿದ್ದ ಟ್ರೆವೋರ್ ಗ್ವಾಂಡು 70 ರನ್ ನೀಡಿ ಎರೆಡು ವಿಕೆಟ್ ಪಡೆದಿದ್ದರು.
A Hundred of the highest class for the young top-order batter, Sediqullah Atal. 👏💯#AfghanAtalan | #ZIMvAFG | #GloriousNationVictoriousTeam pic.twitter.com/YpH16mDaG9
— Afghanistan Cricket Board (@ACBofficials) December 19, 2024
54 ರನ್‌ಗಳಿಗೆ ಜಿಂಬಾಬ್ವೆ ಆಲ್‌ಔಟ್
ಬಳಿಕ 287 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಜಿಂಬಾಬ್ವೆ ತಂಡದ ಇನಿಂಗ್ಸ್ ಆರಂಭಸಿದ ಬೆನ್ ಕರನ್ ರನ್ ಔಟ್ ಆದರು. ಶಾನ್ ಕರನ್ (16) ಹಾಗೂ ಸಿಕಂದರ್ ರಾಜಾ (19) ಅವರನ್ನು ಹೊರತುಪಡಿಸಿ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಎರಡಂಕಿ ವೈಯಕ್ತಿಕ ಮೊತ್ತವನ್ನು ಕಲೆ ಹಾಕುವಲ್ಲಿ ವಿಫಲರಾದರು. ಕರನ್ ಜೊತೆಗೆ ಬ್ರಿಯಾನ್ ಬೆನೆಟ್, ಗ್ವಾಂಡು ಮತ್ತು ಟಿನೊಟೆಂಡಾ ಮಪೋಸಾ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.ಮುಂಬೈ ಇಂಡಿಯನ್ಸ್‌ಗೆ ಸಹಿ ಹಾಕಿರುವ ಘಝಾಂಫರ್ ಅವರು ಮೂರು ವಿಕೆಟ್‌ಗಳನ್ನು ಕಬಳಿಸಿದರು. ಫಝಲಕ್ ಫಾರೂಕಿ ಎರಡು ವಿಕೆಟ್‌ಗಳನ್ನು ಪಡೆದರು.
ಈ ಸುದ್ದಿಯನ್ನು ಓದಿ: ಟಿ20 ಸರಣಿಗೆ ಅಫ್ಘಾನಿಸ್ತಾನ ತಂಡ ಪ್ರಕಟ