Friday, 3rd February 2023

ಶ್ರೀ ಶಿರಡಿ ಸಾಯಿನಾಥ ಸೇವಾ ಸಮಿತಿಯ 9ನೇ ವಾರ್ಷಿಕೋತ್ಸವ

ತುಮಕೂರು:  ನಗರದ ರಾಮಕೃಷ್ಣ ನಗರದಲ್ಲಿರುವ ಶ್ರೀ ಶಿರಡಿ ಸಾಯಿನಾಥ ಸೇವಾ ಸಮಿತಿಯ 9ನೇ ವಾರ್ಷಿಕೋತ್ಸವವು ಫೆಬ್ರವರಿ 1 ಮತ್ತು 2 ರಂದು ನಡೆಯಲಿದೆ.

ಫೆಬ್ರವರಿ 1ರಂದು ಬೆಳಿಗ್ಗೆ 9ಕ್ಕೆ ಬಾಬಾ ಅವರ ದಿವ್ಯ ಸಾನಿಧ್ಯದಿಂದ ಬಾಬಾ ಭಕ್ತ ಮಂಡಳಿಯವರಿಂದ ಶಿರಡಿ ಸಂಸ್ಥಾನದ ಸಂಪ್ರದಾಯದಂತೆ ಭಿಕ್ಷಾಟನಾ ಕಾರ್ಯಕ್ರಮ ಜರುಗಲಿದೆ. ಅಮರಜ್ಯೋತಿ ನಗರ, ಗಾಂಧಿನಗರ ಮತ್ತು ಬನಶಂಕರಿ ನಗರಗಳಲ್ಲಿ ನಡೆಯುವ ಭಿಕ್ಷಾಟನಾ ಕಾರ್ಯಕ್ರಮವನ್ನು ತುಮಕೂರು ಲೋಕಸಭೆ ಸಂಸತ್ ಸದಸ್ಯರಾದ ಜಿ.ಎಸ್. ಬಸವರಾಜ್ ರವರು ಉದ್ಘಾಟಿಸಲಿದ್ದು, ಕೆ.ಎಸ್. ಗುರುಸಿದ್ದಪ್ಪ, ಪ್ರಧಾನ ಕಾರ್ಯದರ್ಶಿ ಮತ್ತು ಸಾಹಿತಿ ಕವಿತಾ ಕೃಷ್ಣ ಉಪಸ್ಥಿತರಿರುತ್ತಾರೆ.

ಅಂದು ಸಂಜೆ 6-30ಕ್ಕೆ ಮಹದೇವಯ್ಯ ಬಳಗದಿಂದ ಸಾಯಿ ಭಜನೆ ನಡೆಯುವುದಲ್ಲದೆ ಉದಯ 7 ರಿಂದ ಸಂಜೆ 6ರವರೆಗೆ ನಿರಂತರವಾಗಿ ಮಹಿಳಾ ಮಂಡಲಗಳಿಂದ ವಿಷ್ಣು ಸಹಸ್ರ ನಾಮ ಪಠಣ ಕಾರ್ಯ ಜರುಗಲಿದೆ. ಫೆಬ್ರವರಿ 2ರಂದು ಬಾಬಾ ಸನ್ನಿಧಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಬೆಳಿಗ್ಗೆ 6ಕ್ಕೆ ಕಾಕಡ ಆರತಿ, 7ಕ್ಕೆ ಕ್ಷೀರಾಭಿಷೇಕ, 8ಕ್ಕೆ ಅರ್ಚಕ ಪಿ.ಕೆ. ನಟರಾಜು ಬಳಗದೊಂದಿಗೆ ಲೋಕ ಶಾಂತಿ ಹೋಮ ಜರುಗಲಿದೆ.

ಮಧ್ಯಾಹ್ನ 12.30ಕ್ಕೆ ಮಹಾ ಮಂಗಳಾರತಿ, 1ಕ್ಕೆ ಮಹಾಪ್ರಸಾದ ವಿನಿಯೋಗ ನಡೆಯಲಿದ್ದು, 20 ಸಾವಿರ ಭಕ್ತಾದಿಗಳನ್ನು ನಿರೀಕ್ಷಿಸಲಾಗಿದೆ. ಸಂಜೆ 6.30ಕ್ಕೆ ನೃತ್ಯೋತ್ಸವ ನೀಲಾಲಯ ನೃತ್ಯ ಕೇಂದ್ರ, ತುಮಕೂರು ಇವರಿಂದ ನಡೆಯಲಿದೆ. ರಾತ್ರಿ 10ಕ್ಕೆ ಶೇಜಾರತಿ ನಡೆಯಲಿದೆ.

ವಾರ್ಷಿಕೋತ್ಸವ ವೈಭವೋಪೇತವಾಗಿ ನಡೆಯಲಿದ್ದು, ಆಗಮಿಸುವ ಭಕ್ತಾದಿಗಳಿಗೆ ನಿರಂತರ ದಾಸೋಹ ವ್ಯವಸ್ಥೆ ಮಾಡಲಾಗಿದೆ. ಬಾಬಾ ಭಕ್ತರು ಆಗಮಿಸಬೇಕೆಂದು ಪ್ರಧಾನ ಕಾರ್ಯದರ್ಶಿ ಶ್ರೀ ಕೆ.ಎಸ್. ಗುರುಸಿದ್ದಪ್ಪ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

error: Content is protected !!