Tuesday, 26th October 2021

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಂಕಾ ಉಗ್ರರ ಇರುವಿಕೆ: ಹೈ ಅಲರ್ಟ್‌

ದಕ್ಷಿಣ ಕನ್ನಡ : ಶ್ರೀಲಂಕಾ ಉಗ್ರರು ಕೇರಳ ಹಾಗೂ ಕರ್ನಾಟಕದ ಕರಾವಳಿ ಜಿಲ್ಲೆಗಳಿಗೆ ನುಸುಳಿರುವ ಕುರಿತು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈ ಹಿನ್ನಲೆಯಲ್ಲಿ, ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ.

ಕೇರಳದ ಕರಾವಳಿ ಪ್ರದೇಶಕ್ಕೆ 12 ಶ್ರೀಲಂಕಾ ಮೂಲಕ ಉಗ್ರರು 2 ಯಾಂತ್ರಿಕ ದೋಣಿಗಳಲ್ಲಿ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಪೊಲೀಸರು ಹದ್ದಿನ ಕಣ್ಣು ನೆಟ್ಟಿದ್ದಾರೆ.

ಕೇರಳ ಇಲ್ಲವೇ ಕರ್ನಾಟಕದಿಂದ ಪಾಕಿಸ್ತಾನಕ್ಕೆ ತೆರಳುವ ಯೋಜನೆಯಿಂದ ಉಗ್ರರು ಬಂದಿರುವ ಶಂಕೆ ವ್ಯಕ್ತವಾಗಿದೆ. ಈ ಉಗ್ರರ ಬಗ್ಗೆ ಕರಾವಳಿ ಕಾವಲು ಪಡೆ, ಭಾರತೀಯ ತಟ ರಕ್ಷಣಾ ಪಡೆಗಳಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. 

Leave a Reply

Your email address will not be published. Required fields are marked *