Saturday, 10th April 2021

ರಾಜ್ಯ ಬಜೆಟ್: ಯಾರು ಏನಂತಾರೆ?

ಬಜೆಟ್ ಅಭಿವೃದ್ದಿಗೆ ಪೂರಕವಾಗಿದೆ. ಕರೋನಾದಿಂದಾಗಿ ನಲುಗಿರುವ ಆರ್ಥಿಕ ಕ್ಷೇತ್ರದ ಬೆಳವಣಿಗೆಗೆ ಸಹಕಾರಿಯಾಗಿದೆ.

-ಸೊಗಡು ಶಿವಣ್ಣ, ಮಾಜಿ ಸಚಿವ

***

ರಾಜ್ಯ ಸರಕಾರ ಉತ್ತಮ ಬಜೆಟ್ ಮಂಡಿಸಿದೆ. ಎಲ್ಲಾ ಕ್ಷೇತ್ರದ ಸಮರ್ಪಕ ಅಭಿವೃದ್ದಿಗೆ ಪೂರಕವಾಗಿದೆ.

ಜ್ಯೋತಿಗಣೇಶ್, ಶಾಸಕ, ತುಮಕೂರು ನಗರ

***

ಎಲ್ಲಾ ರೀತಿಯ ಮುನ್ನೋಟದೊಂದಿಗೆ ಬಿಜೆಪಿ ಸರಕಾರ ಬಡವರ ಅಭಿವೃದ್ದಿಗಾಗಿ ಕ್ರಿಯಾತ್ಮಕ ಬಜೆಟ್ ಮಂಡಿಸಿದೆ. ಜಿ.ಎಸ್.ಬಸವರಾಜು, ಸಂಸದ

***

ಕರೋನಾದಿಂದ ನಲುಗಿರುವವರಿಗೆ ಆರ್ಥಿಕ ಚೈತನ್ಯ ನೀಡಲು ಬಜೆಟ್ ಸಹಕಾರಿಯಾಗಿದೆ.

ಪ್ರಭಾಕರ್, ಮಾಜಿ ನಿರ್ದೇಶಕ, ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ

***

ಜನಸಾಮಾನ್ಯರು ಈಗಾಗಲೇ ಸಂಕಷ್ಟದಲ್ಲಿದ್ದಾರೆ. ಈ ಬಜೆಟ್‌ನಿಂದಾಗಿ ಮತ್ತಷ್ಟು ಸಂಕಷ್ಟಕ್ಕೀಡಾಗುತ್ತಾರೆ. ಇದೊಂದು ದರ್ಬಲ ಬಜೆಟ್.

ಡಾ.ರಫೀಕ್ ಅಹಮದ್, ಮಾಜಿ ಶಾಸಕ

***

ಯಾವುದೇ ಉಪಯೋಗವಿಲ್ಲದ ಆಶಾದಾಯಕವಲ್ಲದ ಬಜೆಟ್. ಇದೊಂದು ಸುಂದರವಾಗಿರುವ ಪೊಳ್ಳು ಆಯವ್ಯಯ. ಮುರುಳೀಧರ ಹಾಲಪ್ಪ, ಕೆಪಿಸಿಸಿ ವಕ್ತಾರ

***

ರಾಜ್ಯ ಬಜೆಟ್ ತಿರುಳಿಲ್ಲದ, ಅಭಿವೃದ್ದಿಗೆ ಪೂರಕವಲ್ಲದ ಅರ್ಥಹೀನ ಬಜೆಟ್.

ಜೆ.ಕುಮಾರ್, ಪಾಲಿಕೆ ಸದಸ್ಯ

***

ರಾಜ್ಯ ಸರಕಾರ ನೀರಸ ಬಜೆಟ್ ಮಂಡಿಸಿದೆ. ಜಿಲ್ಲೆಗಂತೂ ಯಾವುದೇ ಪ್ರಯೋಜನವಿಲ್ಲ. ಬಜೆಟ್‌ನಿಂದ ಯಾವುದೇ ಉಪಯೋಗವಿಲ್ಲ.

***

ಗೌರಿಶಂಕರ್,ಶಾಸಕ, ತುಮಕೂರು ಗ್ರಾಮಾಂತರ

ಕರೋನಾದಿಂದ ಸಂಕಷ್ಟಕ್ಕೊಳಗಾಗಿರುವವರಿಗೆ ಚೇತನ ನೀಡಬೆಕಾದ ಬಜೆಟ್ ಮತ್ತೆ ಕಷ್ಟಕ್ಕೆ ತಳ್ಳುತ್ತದೆ. ಹೀಗಾದರೇ ಜನರು ಜೀವನ ಮಾಡುವುದು ಹೇಗೆ.

ಆಂಜಿನಪ್ಪ, ಜಿಲ್ಲಾಧ್ಯಕ್ಷ, ಜೆಡಿಎಸ್

***

ಸರಕಾರ ಕಾರ್ಪೋರೇಟ್ ಕಂಪನಿಗಳ ನಡುವವೆ ರೈತರ ಅಭಿವೃದ್ದಿಗಾಗಿ ಮಹತ್ವದ ಯೋಜನೆಗಳನ್ನು ಕೈಗೊಂಡಿಲ್ಲ.

ಜಗದೀಶ್, ಜಿಲ್ಲಾಧ್ಯಕ್ಷ, ಕೃಷಿಕ ಸಮಾಜ

**
ಶಿಕ್ಷಣ ಕ್ಷೇತ್ರವನ್ನು ಬಲಗೊಳಿಸಲು ಬಜೆಟ್‌ನಲ್ಲಿ ಸಾಕಷ್ಟು ಅನುದಾನ ಮತ್ತು ಯೋಜನೆಗಳನ್ನು ರೂಪಿಸಿಲ್ಲ.

ಜಗದೀಶ್, ಎಂಜಿನಿಯರ್

Leave a Reply

Your email address will not be published. Required fields are marked *