Monday, 30th January 2023

ದಶಕದಲ್ಲಿ ಮುದುಕರ ರಾಜ್ಯ !

ಫಲವತ್ತತೆ, ಜನನ ಪ್ರಮಾಣದಲ್ಲಿ ಭಾರಿ ಕುಸಿತ: ಸರಕಾರಕ್ಕೆ ಆಘಾತಕಾರಿ ವರದಿ ಸಲ್ಲಿಸಿದ ಮೋಹನ್ ದಾಸ್ ಪೈ

ಬೆಂಗಳೂರು: ‘ಯುವ ಭಾರತ’ ಎನ್ನುವ ಬ್ರಾಂಡ್‌ನಲ್ಲಿ ದೇಶ ಮುನ್ನಡೆಯುತ್ತಿದ್ದರೆ, ಮುಂದಿನ ಒಂದು ದಶಕದಲ್ಲಿ ಕರ್ನಾಟಕ ದಲ್ಲಿ ಯುವಕರ ಕೊರತೆ ಎದ್ದು ಕಾಣಲಿದೆ ಎನ್ನುವ ಆಘಾತಕಾರಿ ವರದಿ ಸರಕಾರಕ್ಕೆ ತಲುಪಿದೆ.

ಹೌದು, ೨೦೩೦ರ ವೇಳೆಗೆ ಕರ್ನಾಟಕದಲ್ಲಿ ವೃದ್ಧರ ಸಂಖ್ಯೆ ಗಣನೀಯವಾಗಿ ಏರಿಕೆ ಯಾಗುವ ಜತೆ ಜತೆಗೆ, ಯುವಕರ ಸಂಖ್ಯೆ ಕಡಿಮೆಯಾಗಲಿದೆ. ಜನನ ಪ್ರಮಾಣ ಕ್ಷೀಣಿಸುವುದರೊಂದಿಗೆ ಮರಣ ಪ್ರಮಾಣ ಹೆಚ್ಚಾಗುವ ಆತಂಕಕಾರಿ ಅಂಶಗಳನ್ನು ವರದಿ ಯಲ್ಲಿ ನಮೂದಿಸಲಾಗಿದೆ.

‘ಯುವಕರ ಸಂಪದ್ಭರಿತ ರಾಜ್ಯ’ ಎನ್ನುವ ಟ್ಯಾಗ್ ಹೊಂದಿರುವ ಕರ್ನಾಟಕಕ್ಕೆ ಈ ರೀತಿ ಮಾನವ ಸಂಪನ್ಮೂಲ ಕೊರತೆ ಯಾಗಲಿದೆ ಎನ್ನುವ ಆತಂಕಕಾರಿ ಅಂಶಗಳಿರುವುದು, ಇನೋಸಿಸ್ ಸಹ ಸಂಸ್ಥಾಪಕ ಮೋಹನ್ ದಾಸ್ ಪೈ ಹಾಗೂ ನಿಶಾ ಹೊಳ್ಳ ಅವರು ಸರಕಾರಕ್ಕೆ ಸಲ್ಲಿಸಿರುವ ‘ಕರ್ನಾಟಕ; ೧ ಟ್ರಿಲಿಯನ್ ಜಿಡಿಪಿಯ ಗುರಿ’ ಎನ್ನುವ ವರದಿ ಯಲ್ಲಿ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಈ ವರದಿಯನ್ನು ಮಂಗಳ ವಾರ ಸಲ್ಲಿಸಲಾಗಿದ್ದು, ಇದರಲ್ಲಿ ನಾನಾ ಆಯಾಮಗಳನ್ನು ವರದಿಯಲ್ಲಿ ಮಾಹಿತಿ ನೀಡಲಾಗಿದೆ.

ಪ್ರಮುಖವಾಗಿ ಫಲವತ್ತತೆ ಪ್ರಮಾಣ (ಫರ್ಟಿಲಿಟಿ ರೇಟ್), ೧೮ರಿಂದ ೨೩ ವರ್ಷದ ವಯೋಮಾನದವರ ಸಂಖ್ಯೆ, ಜನನ ಪ್ರಮಾಣ
ಕ್ಷೀಣಿಸುವುದು, ಮರಣ ಪ್ರಮಾಣ ಹೆಚ್ಚುವುದು, ವಯೋವೃದ್ಧರ ಸಂಖ್ಯೆ ಹಾಗೂ ಜನಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆ ಯಾಗಲಿದೆ… ಮುಂತಾದ ಆತಂಕವನ್ನು ವರದಿಯಲ್ಲಿ ಹೇಳಲಾಗಿದೆ.

ವರದಿಯಲ್ಲಿ ೨೦೨೧ರ ಅಂಕಿ-ಅಂಶಗಳೊಂದಿಗೆ ೨೦೩೦ರ ಅಂಕಿ-ಅಂಶಗಳನ್ನು ಹೋಲಿಕೆ ಮಾಡಲಾಗಿದೆ. ಅದರಲ್ಲಿ ರಾಜ್ಯದಲ್ಲಿ ೨೦೨೧ರಲ್ಲಿ ೬.೬೬ ಕೋಟಿ ಜನಸಂಖ್ಯೆಯಿದ್ದರೆ, ೨೦೩೦ರ ವೇಳೆಗೆ ಏಳು ಕೋಟಿ ದಾಟಲಿದೆ ಎಂದು ಅಂದಾಜಿಸಲಾಗಿದೆ. ಆದರೆ, ೧೮ರಿಂದ ೨೩ ವಯೋಮಾನದವರ ಸಂಖ್ಯೆ ೬೭.೮ ಲಕ್ಷದಿಂದ ೬೨ ಲಕ್ಷಕ್ಕೆ ಕುಸಿಯಲಿದೆ ಎಂದು ಅಂದಾಜಿಸಲಾಗಿದೆ. ಈ ರೀತಿ ಯುವಕರ ಸಂಖ್ಯೆ ಕಡಿಮೆಯಾಗುವುದರಿಂದ ಮಾನವ ಸಂಪನ್ಮೂಲದ ಕೊರತೆ ಭವಿಷ್ಯದಲ್ಲಿ ಕಾಡಲಿದೆ ಎನ್ನುವ ಆತಂಕ
ವರದಿಯಲ್ಲಿದೆ.

ಹಲವು ಸವಾಲುಗಳಿವೆ
ಒಂದು ಟ್ರಿಲಿಯನ್ ಗುರಿ ಹೊಂದಿರುವ ಕರ್ನಾಟಕದಲ್ಲಿ ಐಟಿ-ಬಿಟಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ  ಪೂರಕ ವಾತಾವರಣ ವಿದ್ದರೂ, ಹಲವು ಸಮಸ್ಯೆಗಳಿವೆ. ಪ್ರಮುಖವಾಗಿ ಉತ್ತರ ಹಾಗೂ ದಕ್ಷಿಣ ಕರ್ನಾಟಕದಲ್ಲಿರುವ ವ್ಯತ್ಯಾಸವಿದ್ದು, ಕೃಷಿ ಹಾಗೂ ಗ್ರಾಮೀಣ ಆರ್ಥಿಕತೆ ತೀರಾ ಕಡಿಮೆಯಿದೆ. ದಕ್ಷಿಣ ಭಾರತದಲ್ಲಿಯೇ ಕರ್ನಾಟಕ ಉನ್ನತ ಶಿಕ್ಷಣ ಪ್ರಮಾಣದಲ್ಲಿ ಹಿಂದುಳಿದಿರು ವುದು ಇದಕ್ಕೆಪ್ರಮುಖ ಸಮಸ್ಯೆಯಾಗಲಿದೆ ಎಂದು ಹೇಳಿದೆ.

ಶೇ.೧೧.೫ರಷ್ಟು ೬೦ ವರ್ಷ ದಾಟಿದವರು
ಇನ್ನು ಯಾವುದೇ ದೇಶ ಅಭಿವೃದ್ಧಿ ಪಥದಲ್ಲಿ ಇರಬೇಕು ಎಂದರೆ, ಆ ದೇಶದಲ್ಲಿ ಯುವಕ ಸಂಖ್ಯೆ ಹೆಚ್ಚಿರಬೇಕು ಎನ್ನುವುದು ಆರ್ಥಿಕ ತಜ್ಞರ ವಾದ. ೬೦ ವರ್ಷ ದಾಟಿದವರು ಹೆಚ್ಚಾದಂತೆ, ಅವರಿಂದ ಹೆಚ್ಚು ಉತ್ಪಾದನೆಯನ್ನು ನಿರೀಕ್ಷೆ ಮಾಡಲು ಆಗುವು ದಿಲ್ಲ. ಆದರೆ ಮೋಹನ್ ದಾಸ್ ಅವರು ನೀಡಿರುವ ವರದಿಯಲ್ಲಿ, ಸದ್ಯ ಕರ್ನಾಟಕದಲ್ಲಿ ೭೬.೬ ಲಕ್ಷ ಅಂದರೆ ಶೇ.೧೧.೫ ರಷ್ಟು ೬೦ ವರ್ಷ ದಾಟಿರುವವರಿದ್ದಾರೆ. ಆದರೆ ೨೦೩೦ರ ವೇಳೆಗೆ ೧.೦೫ ಕೋಟಿ ಅಂದರೆ ಶೇ.೧೫ರಷ್ಟು ಮಂದಿ ಹಿರಿಯ ನಾಗರಿಕ ರಿರುತ್ತಾರೆ ಎಂದು ಹೇಳಿದೆ.

ಆರ್ಥಿಕ ಅಭಿವೃದ್ಧಿಗೆ ‘ನವ’ಸೂತ್ರ
ಕೃಷಿ ವಲಯವನ್ನು ತಂತ್ರಜ್ಞಾನ, ಬ್ರಾಂಡಿಂಗ್, ಮಾರುಕಟ್ಟೆ ಮತ್ತು ರಪ್ತು ಮೂಲಕ ಉತ್ತೇಜನ ಕಾರ್ಮಿಕ ಆಧಾರಿತ ಕೈಗಾರಿಕೆಗಳ ಮೂಲಕ ಉತ್ಪಾದನೆ ಮತ್ತು ರಫ್ತುಗಳನ್ನು ಹೆಚ್ಚಿಸುವುದು ಮೂಲ ಸೌಕರ್ಯಕ್ಕೆ ಹೆಚ್ಚು ಅನುದಾನದ ಮೂಲಕ ನಿರ್ಮಾಣ ವಲಯದ ಮೌಲ್ಯವರ್ಧನೆಗೆ ಉತ್ತೇಜನ ಬೆಂಗಳೂರು ಹೊರತುಪಡಿಸಿ – ೨೦೦ ಸಣ್ಣಪಟ್ಟಣಗಳಲ್ಲಿ ವ್ಯವಸ್ಥಿತ ನಗರೀಕರಣ ನೀತಿ ಆಯೋಗದ ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮವನ್ನುವಿಸ್ತರಿಸುವುದು ಉತ್ಪಾದನೆ, ರಫ್ತು ಕೈಗಾರಿಕೆಗಳ ಮೌಲ್ಯ ವರ್ಧನೆ ಹೆಚ್ಚಿಸಲು ವಿಶೇಷ ಹೈಟೆಕ್ ಉದ್ಯಮಗಳ ಸೃಜನೆ ಬೆಂಗಳೂರನ್ನು ಗ್ಲೋಬಲ್ ಹೈಟೆಕ್ ಸಿಟಿ ಆಗಿಸಲು ಹೆಚ್ಚಿನ ಹೂಡಿಕೆ ಮಾಡುವುದು ಫೀಡ್ ಫಾರ್ವರ್ಡ್ ಸಾಮರ್ಥ್ಯ, ಬೆಳವಣಿಗೆಯ ಚಾಲಕಗಳನ್ನು ನಿರ್ಮಿಸಲು ಐಟಿ ವಲಯ ತ್ವರಿತಗೊಳಿಸುವುದು ನವೋದ್ಯಮಗಳ ಇಕೋಸಿಸ್ಟಮ್ ಅನ್ನು ಬಲಪಡಿಸಲು ಹೂಡಿಕೆ ಮಾಡುವುದು.

error: Content is protected !!