Thursday, 14th November 2024

ಒಂದೇ ಠಾಣೆಯ 12 ಪೊಲೀಸರಿಗೆ ಕರೋನಾ ಸೋಂಕು ದೃಢ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ಸಿಲಿಕಾನ್ ಸಿಟಿ ಪೊಲೀಸರಿಗೆ ಕರೋನಾ ಬೆಂಬಿಡದೆ ಬೇತಾಳನಂತೆ  ಬೆನ್ನಟ್ಟಿಿದೆ. ಒಂದೇ ದಿನ ಪೊಲೀಸ್ ಠಾಣೆಯ 12 ಮಂದಿ ಪೊಲೀಸರಿಗೆ ಕರೋನಾ ಸೋಂಕು ದೃಢಪಟ್ಟಿಿದೆ.
ಒಂದೇ ಠಾಣೆಯ 12 ಮಂದಿಗೆ ಕರೋನಾ ದೃಢಪಟ್ಟ ಹಿನ್ನೆೆಲೆಯಲ್ಲಿ ಪೊಲೀಸರು ಬೆಚ್ಚಿಿ ಬಿದ್ದಿದ್ದಾರೆ. ನಗರದ  ಎಚ್‌ಎಎಲ್ ಪೊಲೀಸ್ ಠಾಣೆಯ ಇನ್‌ಸ್‌‌ಪೆಕ್ಟರ್, ಸಬ್ ಇನ್‌ಸ್‌ ಪೆಕ್ಟರ್ ಸೇರಿ 10 ಮಂದಿ  ಸಿಬ್ಬಂದಿಗೆ ಕರೋನಾ ಸೋಂಕು ಇರುವುದು ವೈದ್ಯಕೀಯ ವರದಿಯಿಂದ ದೃಢಪಟ್ಟಿಿದೆ.
ಈ ಹಿನ್ನೆೆಲೆಯಲ್ಲಿ ಸದ್ಯ ಇಡೀ ಠಾಣೆಯನ್ನು ಬಿಬಿಎಂಪಿ ಸಿಬ್ಬಂದಿ ಸೀಲ್ಡೌನ್  ಮಾಡಿ, ಸ್ಯಾಾನಿಟೈಸರ್ ಮಾಡಲು ನಿರ್ಧರಿಸಿದ್ದಾರೆ.
ದರೋಡೆ  ಪ್ರಕರಣಯೊಂದರಲ್ಲಿ   ಭಾಗಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.  ಆರೋಪಿ  ವಿಚಾರಣೆ ಬಳಿಕ ಆತನಿಗೆ ಕರೋನಾ ಸೋಂಕು ಇರುವುದು  ಪೊಲೀಸರಿಗೆ ತಿಳಿದು ಬಂದಿತ್ತು.  ತಕ್ಷಣವೇ ಆರೋಪಿಯ ಸಂಪರ್ಕದಲ್ಲಿದ್ದ ಪೊಲೀಸರು ಕರೋನಾ ಪರೀಕ್ಷೆಗೆ ಒಳಪಟ್ಟಿಿದ್ದರು. ಈ ಪೈಕಿ  12 ಜನ ಪೊಲೀಸರಿಗೆ ಕರೋನಾ ಸೋಂಕು ದೃಢಪಟ್ಟಿಿದ್ದು,  ಸೋಂಕಿತರು ನಿಗದಿತ ಆಸ್ಪತ್ರೆೆಯಲ್ಲಿ ಚಿಕಿತ್ಸೆೆ ಪಡೆಯುತ್ತಿಿದ್ದಾರೆ.
ರಾಜ್ಯದಲ್ಲಿ  370ಕ್ಕೂ ಹೆಚ್ಚು ಪೊಲೀಸರಿಗೆ ಕರೋನಾ ಸೋಂಕು ದೃಢಪಟ್ಟ ಹಿನ್ನೆೆಲೆಯಲ್ಲಿ ರಾಜ್ಯದ ಎಲ್ಲಾ  ಪೊಲೀಸರಿಗೂ ಕರೋನಾ ಪರೀಕ್ಷೆ ಮಾಡಿಸಲು ಪೊಲೀಸ್ ಇಲಾಖೆ ನಿರ್ಧರಿಸಿತ್ತು. ಸೋಮವಾರದವರೆಗೆ ಸುಮಾರು 10 ಸಾವಿರ ಪೊಲೀಸರಿಗೆ ಕರೋನಾ ತಪಾಸಣೆ ನಡೆದಿದೆ. ನಗರದಲ್ಲಿ ಈಗಾಗಲೇ ಕರೋನಾಗೆ 6 ಪೊಲೀಸರನ್ನು ಬಲಿಪಡೆದಿದೆ.