Tuesday, 5th November 2024

ಕಪಾಲಿ ಮೋಹನ್ ಆತ್ಮಹತ್ಯೆ

ಬೆಂಗಳೂರು: ಹಲವು ಕನ್ನಡ ಚಿತ್ರಗಳಿಗೆ ಫೈನ್ಸ್‌ ಮಾಡಿದ್ದ ಉದ್ಯಮಿ ಕಪಾಲಿ ಮೋಹನ್ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣದ ಬಳಿ ಇರುವ ಹೋಟೆಲ್ವೊಂದರಲ್ಲಿ ಆತ್ಮಹತ್ಯೆೆಗೆ ಶರಣಾಗಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಡಿಸಿಪಿ ಶಶಿಕುಮಾರ್ ಹಾಗೂ ಗಂಗಮ್ಮನಗುಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಆತ್ಮಹತ್ಯೆಗೆ ಆರ್ಥಿಕ ಸಮಸ್ಯೆ ಕಾರಣ ಎನ್ನುವುದು ಮೇಲ್ನೋಟಕ್ಕೆೆ ಕಂಡು ಬಂದಿದೆ. ಇವರು ಅಣ್ಣಾವ್ರ ಕುಟುಂಬದೊಂದಿಗೆ ಒಳ್ಳೆಯ ಸಂಬಂಧ ಹೊಂದಿದ್ದರು. ಸಿನಿಮಾ ನಿರ್ಮಾಪಕ, ವಿತರಕ, ಧಾರಾವಾಹಿ ನಿರ್ಮಾಪಕ ಹಾಗೂ ಹೋಟೆಲ್ ಉದ್ಯಮಿಯೂ ಆಗಿದ್ದರು.

ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ವಕ್ವಾಡಿ ಗ್ರಾಮದವರಾಗಿದ್ದು, ಹಲವು ವರ್ಷಗಳಿಂದ ನಗದಲ್ಲಿ ವಾಸವಾಗಿದ್ದಾರೆ. ಕಳೆದೊಂದು ವರ್ಷದ ಹಿಂದೆ ಹೈದ್ರಾಬಾದ್‌ನಿಂದ ವಿಮಾನದಲ್ಲಿ ಕೆಲವರನ್ನು ಕರೆಸಿಕೊಂಡು ಜೂಟಾಟ ನಡೆಸುತ್ತಿದ್ದ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಸದಾಶಿವನಗರದ ಮನೆ ಹಾಗೂ ಕಚೇರಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು.