Monday, 14th October 2024

ಕರೋನಾ ವಾರಿಯರ್ಸ್‌ಗೆ ತೊಂದರೆ ಕೊಟ್ಟರೆ ಜೋಕೆ

ವಿಶ್ವವಾಣಿ ಸುದ್ದಿಮನೆ, ಬೆಂಗಳೂರು

ಕರೋನಾ ವೈರಸ್ ವಿರುದ್ದ ಹೋರಾಟದಲ್ಲಿ ಕೈಜೋಡಿಸಿರುವ ವೈದ್ಯರು, ದಾದಿಯರು, ಪೌರಕಾರ್ಮಿಕರು ಹಾಗೂ ಪೊಲೀಸರಿಗೆ
ಯಾವುದೇ ತೊಂದರೆಗಳನ್ನು ನೀಡಿದಲ್ಲಿ ಅಂತಹವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕಾದೀತು ಎಂದು ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ಎಚ್ಚರಿಕೆ ನೀಡಿದ್ದಾಾರೆ.

ಕರೋನಾ ವಾರಿಯರ್‌ಸ್‌‌ಗೆ ಗೌರವ ಕೊಡುವುದು ನಿಮ್ಮ ಆದ್ಯ ಕರ್ತವ್ಯವಾಗಿದ್ದು, ಅವರ ಕರ್ತವ್ಯಗಳಿಗೆ ಅಡ್ಡಿಪಡಿಸುವುದು ಅಕ್ಷಮ್ಯವಾಗುತ್ತದೆ ಎಂದು ಟ್ವೀಟ್ ಮಾಡಿ ತಿಳಿಸಿದ್ದಾರೆ. ಕೆಲವು ಅಪಾರ್ಟ್‌ಮೆಂಟ್‌ಗಳಲ್ಲಿ ಕರೋನಾ ವಾರಿಯರ್‌ಸ್‌‌ಗೆ ಲಿಫ್‌ಟ್‌‌ನಲ್ಲಿ ಅವಕಾಶ ನೀಡದಿರುವುದು, ಇಲ್ಲಿ ಬರಬೇಡಿ ಎಂದು ಆಜ್ಞೆ ವಿಧಿಸುವುದು, ಇಲ್ಲಿ ಬರಬೇಡಿ ಎಂದು ಆಜ್ಞೆ ವಿಧಿಸುವುದು  ಮುಂತಾದ ತಪ್ಪುಗಳನ್ನು ನಿವಾಸಿಗಳು ಮಾಡಿದ್ದಾರೆ ಎಂಬ ದೂರುಗಳ ಹಿನ್ನೆಲೆ ಈ ಎಚ್ಚರಿಕೆ ನೀಡಿದ್ದಾರೆ.