Sunday, 13th October 2024

ದೇಶದಾದ್ಯಂತ ಲಾಕ್‌ಡೌನ್-3 ಜಾರಿ

ಮುಂಬೈ:

ಮಹಾಮಾರಿ ಕರೋನಾ ನಿಗ್ರಹಿಸಲು ಕೇಂದ್ರ ಸರಕಾರ ಜಾರಿಗೊಳಿಸಿರುವ ಮೂರನೇ ಹಂತದ ಲಾಕ್ ಡೌನ್ ಕೆಲವು
ನಿರ್ಬಂಧ ಮತ್ತು ಅನೇಕ ಸಡಿಲಿಕೆಗಳೊಂದಿಗೆ ಮೇ.4 ರಿಂದ ಜಾರಿಗೆ ಬಂದಿದೆ. 40 ದಿನಗಳ ಭಾರತ ದಿಗ್ಬಂಧನದ ನಂತರ ಇಂದಿನಿಂದ 17ವರೆಗೆ 14 ದಿನಗಳ ಲಾಕ್ ಡೌನ್-3 ಮುಂದುವರಿಯಲಿದೆ.

ಕೇಂದ್ರ ಮತ್ತು ರಾಜ್ಯ ಸರಕಾರಗಳು ಕರೋನಾ ನಿಗ್ರಹಕ್ಕಾಗಿ ಶತ ಪ್ರಯತ್ನಗಳನ್ನು ಮುಂದುವರಿಸಿದ್ದರೂ, ಸಾವು ಮತ್ತು ಸೋಂಕು ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಒಂದೇ ದಿನ ದೇಶದ ವಿವಿಧೆಡೆ 2 ಸಾವಿರಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಪತ್ತೆಯಾಗಿರುವುದು ಕಳವಳಕಾರಿ. ಭಾರತದಲ್ಲಿ ಸಾಂಕ್ರಾಮಿಕ ರೋಗಗಳ ಸಂಖ್ಯೆ 42 ಸಾವಿರ ದಾಟಿದೆ.

ಒಂದೆಡೆ ಚೇತರಿಕೆ ಪ್ರಮಾಣದಲ್ಲಿ ಸರಾಸರಿ ಶೇ.25ಕ್ಕಿಿಂತ ಹೆಚ್ಚಾಗಿದ್ದು, 11,706 ಮಂದಿಗೆ ಸುಧಾರಣೆ ಕಂಡುಬಂದಿದ್ದರೂ,
ಮತ್ತೊೊಂದೆಡೆ ದಿನನಿತ್ಯ ಮರಣ ಮತ್ತು ಸಾಂಕ್ರಾಮಿಕ ರೋಗ ಪ್ರಕರಣಗಳು ಹೆಚ್ಚಾಗುತ್ತಲೇ ಇರುವುದು ದೇಶದ ಜನರನ್ನು ಚಿಂತಾಕ್ರಾಾಂತವನ್ನಾಗಿ ಮಾಡಿದೆ.

ಆರೋಗ್ಯ ಇಲಾಖೆ  ಪ್ರಕಾರ, ಭಾರತದಲ್ಲಿ ಮೃತರ ಸಂಖ್ಯೆ 1,373ಕ್ಕೇರಿದೆ. ಮತ್ತೊೊಂದಡೆ ಸೋಂಕು ಪೀಡಿತರ ಸಂಖ್ಯೆ 42,533ರಷ್ಟಿದೆ. ಕರೋನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ ಸಹ ಹೆಚ್ಚಾಗುತ್ತಿದ್ದು, 29,453ರಷ್ಟಿದೆ. ಈವರೆಗೆ 11,706 ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲಿ ಕರೋನಾ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ವೃದ್ದಿ ಕಂಡು ಬಂದಿರುವುದು ಸಮಾಧಾನಕರ ಸಂಗತಿಯಾದರೂ ಮತ್ತೊೊಂದಡೆ ಸೋಂಕು ಮತ್ತು ಸಾವು ಹೆಚ್ಚಾಗುತ್ತಿರುವುದು ಕಳವಳಕಾರಿ.