Tuesday, 5th November 2024

ನೂತನ ಡಿಸಿ ಕಛೇರಿ ನಿರ್ಮಾಣಕ್ಕೆ ಸ್ವಾಗತ ರೆಸಾರ್ಟ್-ಹೋಂ ಸ್ಟ್ಯೇ ನಿಲ್ಲಿಸಲು ಎಚ್.ಕೆ. ಕುಮಾರಸ್ವಾಮಿ ಒತ್ತಾಯ.

ಹಾಸನ: ಜಿಲ್ಲೆಯಲ್ಲಿ ನೂತನ ಜಿಲ್ಲಾಧಿಕಾರಿ ಕಛೇರಿ ನಿರ್ಮಾಣ ಮಾಡುತ್ತಿರುವುದಕ್ಕೆ ನಾನು ಸ್ವಾಗತ ಬಯಸುತ್ತೇನೆ. ಅದೆ ರೀತಿ ರೆಸಾರ್ಟ್ ಮತ್ತು ಹೋಮ್ ಸ್ಟ್ಯೇಗಳನ್ನು ತಕ್ಷಣದಲ್ಲಿ ಮುಚ್ಚಲು ಆದೇಶಹೊರಡಿಸಲಿ ಎಂದು ಆಲೂರು-ಸಕಲೇಶಪುರ ತಾಲೂಕು ಕ್ಷೇತ್ರದ ಶಾಸಕರಾದ ಹೆಚ್.ಕೆ. ಕುಮಾರಸ್ವಾಮಿ ಒತ್ತಾಯಿಸಿದರು.

ನಗರದ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದುವರೆಗೂ ನಮ್ಮ ಸಕಲೇಶಪುರ ತಾಲೂಕು ಕೊರೋನಾ ಮುಕ್ತವಾಗಿರುವುದು ಸಂತೋಷವಿತ್ತು. ಆದರೇ ಸರಕಾರದ ಸ್ಪಷ್ಟ ನಿಲುವು, ಬದ್ದತೆಯಿಲ್ಲದೆ ಇರುವ ಕಾರಣ ಇಂದು ಇಡೀ ಜಿಲ್ಲೆಗೆ ಸೋಂಕು ಹರಡಿದ್ದು, ರಾಜ್ಯದಲ್ಲೆ ಇರುವುದನ್ನು ನೋಡುತ್ತಿದ್ದೇವೆ. ಕಂದಾಯ ಸಚಿವ ಆರ್. ಅಶೋಕ್ ರವರು ಹಾಸನ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಗಳ ಕಟ್ಟಡವನ್ನು 25 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸುವುದಾಗಿ ಪ್ರಕಟಣೆ ಮಾಡಿರುವುದನ್ನು ನಾನು ಸ್ವಾಗತ ಮಾಡುತ್ತೇನೆ ಎಂದರು. ಈ ಚಿಂತನೆ ಹೊಸದಲ್ಲ. ನಮ್ಮ ಜೆಡಿಎಸ್ ಸರಕಾರ ಇದ್ದಾಗಲೇ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಹಾಗೂ ಹೆಚ್.ಡಿ. ರೇವಣ್ಣನವರು ಸಚಿವರು ಆಗಿದ್ದಾಗಲೇ ಮಾಡಿದಂತಹ ಚಿಂತನೆಯಾಗಿದೆ. ಇಂದು ಮುಂದುವರೆದ ಭಾಗವಾಗಿದ್ದು, ನೂತನ ಜಿಲ್ಲಾಡಳಿತ ಕಟ್ಟಡ ನಿರ್ಮಾಣವಾದರೇ ಹಾಸನ ತಾಲೂಕಿಗೆ ಸೇರುವುದಿಲ್ಲ ಇಡೀ ಜಿಲ್ಲೆಯ ಆಸ್ತಿಯಾಗುತ್ತದೆ ಎಂದು ಹೇಳಿದರು.
ರೆಸಾರ್ಟ್ ಮತ್ತು ಹೋಮ್ ಸ್ಟ್ಯೇಗಳನ್ನು ಕಡ್ಡಾಯವಾಗಿ ತಕ್ಷಣದಲ್ಲಿ ಮುಚ್ಚಬೇಕು. ಆದರೇ ಮತ್ತೆ ಒಂದು ವಾರ ಸಮಯ ಕೊಡುವುದು ಸರಿಯಲ್ಲ. ಇವುಗಳ ಬಾಗಿಲು ತೆರೆದಿರುವುದರಿಂದಲೇ ರಸ್ತೆಯಲ್ಲಿ ವಾಹನಗಳು ಹೆಚ್ಚು ಓಡಾಡುತ್ತಿದೆ. ಇದರಿಂದಲೇ ಕೊರೋನಾ ಪಾಸೀಟಿವ್ ಹೆಚ್ಚಾಗುತ್ತಿದ್ದು, ಇಂದೆ ಆದೇಶ ಮಾಡಿ ರೆಸಾರ್ಟ್ ಮತ್ತು ಹೋಂ ಸ್ಟ್ಯೇ ಗಳನು ನಿಲ್ಲಿಸಬೇಕಾಗಿದೆ ಎಂದರು. ಕೊರೋನಾದ ಬಗ್ಗೆ ಸರಕಾರದ ನಿಲುವು ಇನ್ನು ಕೂಡ ಅಸ್ಪಷ್ಟತೆ ಕಾಣುತ್ತಿದೆ. ಸ್ಪಷ್ಟ ನಿಲುವು ಇರುವುದಿಲ್ಲ. ಇಷ್ಟೆಲ್ಲಾ ಕೊರೋನಾ ಪಾಸೀಟಿವ್ ಪ್ರಕರಣ ಬರುತ್ತಿದ್ದರೂ ನಿಯಮವನ್ನು ಕಟ್ಟು ನಿಟ್ಟು ಮಾಡುತ್ತೀನಿ ಎನ್ನುತ್ತಾರೆ ಆದರೇ ಲಾಕ್ ಡೌನ್ ಮಾಡಲು ಮುಂದಾಗುತ್ತಿಲ್ಲ ಎಂದು ಆತಂಕವ್ಯಕ್ತಪಡಿಸಿದರು.