Monday, 14th October 2024

ರಾಣಿ ಚೆನ್ನಮ್ಮ ವಿವಿಯಿಂದ ಸಿಎಂ ಪರಿಹಾರ ನಿಧಿಗೆ ದೇಣಿಗೆ

ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳ ಒಂದು ದಿನದ ವೇತನದ ಮೊತ್ತ .8,29,551 (ಎಂಟು ಲಕ್ಷದ ಇಪ್ಪತೊಂಬತ್ತು ಸಾವಿರದ ಐದುನೂರ ಐವತ್ತೊಂದು) ರುಪಾಯಿಗಳ ಡಿ.ಡಿ.ಯನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ. ರಾಮಚಂದ್ರ ಗೌಡ ಅವರು ಮಾನ್ಯ ಮುಖ್ಯಮಂತ್ರಿಯವರಿಗೆ ಹಸ್ಥಾಂತರಿಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಶ್ರೀ ಶಂಕರಗೌಡ ಪಾಟೀಲ ಹಾಗೂ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಡಾ|| ಎ. ಜಯಪ್ಪ ಅವರುಗಳು ಉಪಸ್ಥಿತರಿರುವರು.