Wednesday, 6th November 2024

ರೈತರನ್ನು ಕಾಪಾಡುವಂತೆ ಪ್ರಧಾನಿಗೆ ಡಿಕೆಶಿ‌ ಮನವಿ

ಬೆಂಗಳೂರು:

ಸದ್ಯದ ಸಂಕಷ್ಟದ ಸಂದರ್ಭದಲ್ಲಿ ವಿರೋಧ ಪಕ್ಷದಲ್ಲಿರುವ ನಾವು ರಾಜಕೀಯ ಬದಿಗಿಟ್ಟು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ. ಆದರೆ ಸರ್ಕಾರಗಳು ರೈತರನ್ನು ಕೈಬಿಡಬಾರದು. ಅವರ ನೆರವಿಗೆ ನಿಲ್ಲಬೇಕು ಎಂದು ಕೈ ಮುಗಿದು ಪ್ರಧಾನಿ ಹಾಗೂ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇನೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈಗಾಗಲೇ ರೈತರು, ಪೌರ ಕಾರ್ಮಿಕರಿಗೆ ಘೋಷಣೆ ಮಾಡಿರುವ ಯೋಜನೆಗಳು ತಲುಪಿಲ್ಲ ಅದನ್ನು ಆದಷ್ಟು ಬೇಗ ತಲುಪಿಸಬೇಕು. ಮದುವೆ ಸೀಸನ್ ಇದು. ತರಕಾರಿ, ಹಣ್ಣು, ಸೊಪ್ಪು ಬೆಳೆಗಾರರು ತಮ್ಮ ಬೆಳೆಯನ್ನು ಮಾರುವಂತಹ ಸಮಯ. ಈ ವೇಳೆ ಅವರ ಬೆಳೆಗೆ ಬೇಡಿಕೆಯೂ ಇಲ್ಲ, ಮಾರುಕಟ್ಟೆಯೂ ಇಲ್ಲ, ಬೆಲೆಯೂ ಇಲ್ಲ. ಹೀಗಾಗಿ ರೈತ ಆತಂಕಕ್ಕೆ ಒಳಗಾಗಿದ್ದಾನೆ. ಇವರನ್ನು ದಯಮಾಡಿ ಸರ್ಕಾರ ರಕ್ಷಿಸಬೇಕು.

ಈ ರೈತರು ಬೆಳೆದಿರುವ ತರಕಾರಿಗಳನ್ನು ಮುಖ್ಯಮಂತ್ರಿಗಳು, ತೋಟಗಾರಿಕೆ, ಕೃಷಿ ಸಚಿವರು ಮತ್ತು ರಾಜ್ಯ ಮುಖ್ಯ ಕಾರ್ಯದರ್ಶಿಗಳ ಮನೆಗೆ ಕಳುಹಿಸಲು ಸ್ಥಳೀಯ ಶಾಸಕ ಶಿವಣ್ಣ ಅವರಿಗೆ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ.