Sunday, 1st December 2024

ಸಾಮಾಜಿಕ ಅಂತರ ಕಾಯ್ದುಕೊಳ್ಳದ ಟೆಕ್ಕಿಗಳು: ಪೊಲೀಸರ‌ ಕ್ಲಾಸ್

ವಿಶ್ವವಾಣಿ ಸುದ್ದಿಮನೆ ಬೆಂಗಳೂರು:

ಸಾಮಾಜಿಕ ಅಂತರ ಕಾಪಾಡದ ಟೆಕ್ಕಿಗಳಿಗೆ ಪೊಲೀಸರು ತರಾಟೆ ತೆಗೆದುಕೊಂಡ ಘಟನೆ ನಡೆದಿದೆ.

ಕುರಿಗಳು ಹೋದ ಹಾಗೆ ಹೋಗಿದ್ದೀರಿ. ನೀವು ಟಿವಿ, ಪೇಪರ್ ನೋಡಲ್ವಾ?ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಒಟ್ಟಿಗೆ ಕುಳಿತು ಪ್ರಯಾಣ ಮಾಡುತ್ತಿದ್ದೀರಾ ಎಂದು ಪೋಲಿಸರು ಕೋಪದಿಂದ ಗದರಿಸಿದ ಘಟನೆ ನಾಗಸಂದ್ರ ಚೆಕ್ ಪೋಸ್ಟ್ ಬಳಿ ನಡೆದಿದೆ.

ಕರೋನಾ ಸೋಂಕು ನಿಯಂತ್ರಣದಲ್ಲಿರುವ ಪ್ರದೇಶಗಳಿಗೆ ಲಾಕ್ ಡೌನ್ ನಿಂದ ವಿನಾಯಿತಿ ನೀಡಲಾಗಿದೆ. ಖಾಸಗಿ ಕಂಪನಿಗಳು ತಮ್ಮ ಸಿಬ್ಬಂದಿ ಕರೆತರಲು ಬಸ್ ವ್ಯವಸ್ಥೆ ಮಾಡಿದೆ. ಆದರೆ ಬಸ್ ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಟೆಕ್ಕಿಗಳಿಗೆ ಪೋಲಿಸರು ತರಾಟೆಗೆ ತಗೆದುಕೊಂಡಿದ್ದಾರೆ.

ನಗರದ ನಾಗಸಂದ್ರದ ಚೆಕ್ ಪೋಸ್ಟ್ ಬಳಿ ಖಾಸಗಿ ವಾಹನಗಳನ್ನು ಪೋಲಿಸರು ಪರಿಶೀಲನೆ ನಡೆಸುತ್ತಿದ್ದರು. ಖಾಸಗಿ ಕಂಪನಿಯ ಪಿಟಿ ವ್ಯಾನ್ ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕುಳಿತಿರುವವರನ್ನು ನೋಡಿದ ಪೋಲಿಸರು ತರಾಟೆಗೆ ತೆಗೆದುಕೊಂಡರು.

ಕುರಿಗಳು ಹೋದ ಹಾಗೆ ಹೋಗುತ್ತಿದ್ದೀರಿ. ನೀವೇನು ಟಿವಿ, ಪೇಪರ್ ನೋಡಲ್ವಾ,ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಎಷ್ಟೇ ಮನವಿ ಮಾಡಿದರು ನಿಮ್ಮ ಬುದ್ದಿ ಮಾತ್ರ ಬದಲಾಗಿಲ್ಲ. ನಿಮ್ಮಂಥ ವ್ಯಕ್ತಿಗಳಿಂದಲೇ ಕರೋನಾ ಸೋಂಕು ಹೆಚ್ಚಾಗಲು ಕಾರಣವಾಗಿದೆ ಎಂದು ಗದರಿಸಿದರು.

ಪಿಟಿ ವಾಹನಗಳಲ್ಲಿ ಹೆಚ್ಚಾವರಿಯಾಗಿ ಕುಳಿತಿದ್ದ ಸಿಬ್ಬಂದಿಯನ್ನು ಕೆಳಗಿಳಿಸಿದ ಪೋಲಿಸರು ಕೆಲವೇ ಮಂದಿಯನ್ನು ಕುಳ್ಳಿರಿಸಿಕೊಂಡು ವಾಹನ ಹೋಗಲು ಅವಕಾಶ ನೀಡಿದರು. ನೀವು ಮತ್ತೊಂದು ಸಾರಿ ಬಂದು ಉಳಿದ ಸಿಬ್ಬಂದಿಯನ್ನು ಕರೆದುಕೊಂಡು ಹೋಗಬೇಕು. ನಾಳೆಯೂ ಸಹ ಇದೇ ರೀತಿ ಸಾಮಾಜಿಕ ಅಂತರವಿಲ್ಲದೆ ಸಿಬ್ಬಂದಿಯನ್ನು ಕರೆತಂದರೆ ವಾಹನವನ್ನು ‌ಸೀಜ್ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.