Friday, 13th December 2024

ಅಕ್ರಮ‌ ಮಧ್ಯ ಮಾರಾಟ: ನಾಲ್ವರ ಬಂಧನ

ವಿಶ್ವವಾಣೆ ಸುದ್ದಿಮನೆ
ಬೆಂಗಳೂರು:

ಲಾಕ್​ಡೌನ್ ನಡುವೆಯೂ ಕಾನೂನು ಉಲ್ಲಂಘನೆ ಮಾಡಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತಿದ್ದ 4 ಜನರನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ.

ನರಸಮ್ಮ, ವಿಶ್ವನಾಥ್, ವರುಣೇಶ್ ಮತ್ತು ರಘು ಬಂಧಿತ ಆರೋಪಿಗಳು. ಇವರು ನಗರದ ಅಮೃತಹಳ್ಳಿ ವ್ಯಾಪ್ತಿಯಲ್ಲಿ ಮದ್ಯ ಪ್ರಿಯರಿಗೆ ಹೆಚ್ಚಿನ ಹಣಕ್ಕೆ ಮದ್ಯ ಮಾರಾಟ ಮಾಡುತ್ತಿದ್ದು, ಲಾಕ್​ಡೌನ್ ಹೇರಿಕೆಯಾದ ದಿನದಿಂದ ಗಸ್ತಿನಲ್ಲಿದ್ದ ಅಬಕಾರಿ ಅಧಿಕಾರಿಗಳಿಗೆ ಮದ್ಯ ಮಾರಟದ ಸುಳಿವು ಸಿಕ್ಕಿ ಆರೋಪಿಗಳ ಮಾಹಿತಿ ತಿಳಿದು ದಾಳಿ ಮಾಡಿದ್ದಾರೆ.

ದಾಳಿ ವೇಳೆ ಆರೋಪಿಗಳ ಬಳಿ ಮದ್ಯದ ಬಾಟಲಿಗಳು ಇದ್ದು, ಸದ್ಯ ಆರೋಪಿಗಳ ವಿರುದ್ಧ ಎರಡು ಪ್ರತ್ಯೇಕ ಪ್ರಕರಣ ದಾಖಲು‌ ಮಾಡಿ 1 ಲಕ್ಷದ 22 ಸಾವಿರ ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದಾರೆ.