Saturday, 14th December 2024

ಅಭಿಮಾನಿಗಳಲ್ಲಿ ಉತ್ಸಾಹ ಮೂಡಿಸುತ್ತಿರುವ ಅಮೃತ ಮಹೋತ್ಸವ ಕಾರ್ಯಕ್ರಮ

ಸಿದ್ದರಾಮೋತ್ಸವ ಯಶಸ್ಸಿಗೆ ತಾಲೂಕಿನಿಂದ ೧೦ ಸಾವಿರ ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ
ಬಸವರಾಜ ಹುಲಗಣ್ಣಿ 

ಮುದ್ದೇಭಿಹಾಳ: ಅಗಷ್ಟ ೩ ರಂದು ದಾವಣಗೇರಿಯಲ್ಲಿ ನಡೆಯಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ೭೫ನೇ ಹುಟ್ಟು ಹಬ್ಬದ ಪ್ರಯುಕ್ತ ನಡೆಯಲಿರುವ ಅದ್ದೂರಿ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಮುದ್ದೇಬಿಹಾಳ ತಾಲೂಕಿನಿಂದ ಹಾಲುಮತ ಸಮಾಜ ಸೇರಿದಂತೆ ಸಿದ್ದರಾಮಯ್ಯನವರ ಅಭಿಮಾನಿ ಬಳಗದ ಕನಿಷ್ಟ ೧೦ ಸಾವಿರ ಜನ ಅಮೃತ ಮಹೋತ್ಸವದಲ್ಲಿ ಪಾಲ್ಗೋಳ್ಳಲಿದ್ದಾರೆ ಎಂದು ತಾಲೂಕಾ ಕುರುಬರ ಸಂಘದ ಅಧ್ಯಕ್ಷ ಉದ್ಯಮಿ ಮಲ್ಲಿಕಾರ್ಜುನ ಮದರಿಯವರು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಕಂಡ ಅತ್ಯಂತ ದಿಮಂತ ನಾಯಕ ಅಭಿವೃದ್ದಿಯ ಹರಿಕಾರ ರಾಜ್ಯದ ಎಲ್ಲ ಬಡವರ್ಗದವರ ಪಾಲಿನ ಆಶಾಕಿರಣವಾಗಿರುವ ಸಿದ್ದರಾಮಯ್ಯನವರ ಅಮೃತ ಮಹೋತ್ಸವ ಈ ಕಾಲಗಟ್ಟದಲ್ಲಿ ನಡೆಯುತ್ತಿರುವದು ನಮ್ಮೆಲ್ಲರ ಸೌಭಾಗ್ಯವಾಗಿದೆ. ಸಮಾಜವಾದಿ ಚಿಂತನೆಯುಳ್ಳ ಸಿದ್ದರಾಮಯ್ಯನವರನ್ನು ಪಡೆದ ಕರ್ನಾಟಕ ರಾಜ್ಯದ ಜನತೆ ಅದೃಷ್ಟವಂತರಾಗಿದ್ದಾರೆ. ಸಿದ್ದರಾಮಯ್ಯನವರ ರಾಜಕೀಯ ಭವಿಷ್ಯ ಇನ್ನಷ್ಟು ಉಜ್ವಲವಾಗಿರಲಿ ಅವರ ಸೇವೆ ನಾಡಿನ ಜನತೆಗೆ ಮತ್ತೊಮ್ಮೆ ಲಬಿಸುವಂತಾಗಲಿ ಎಂದು ಅವರು ಹೇಳಿದರು.
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಮುದ್ದೇಬಿಹಾಳ ಮತಕ್ಷೇತ್ರಕ್ಕೆ ಸಾಕಷ್ಟು ಕೋಡುಗೆಗಳನ್ನು ನೀಡಿದ್ದಾರೆ. ನೀರಾವರಿ ಯೋಜನೆಗಳ ಸಹಿತ ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಸಾಕಷ್ಟು ಕೋಡುಗೆಗಳನ್ನು ನೀಡಿದ್ದಾರೆ. ಮತಕ್ಷೇತ್ರದಲ್ಲಿ ನಾಗರಬೇಟ್ಟ ಏತ ನೀರಾವರಿ ಯೋಜನೆ, ಆಲಮಟ್ಟಿ ರಸ್ತೆಯಲ್ಲಿ ನಿರ್ಮಾಣವಾಗಿರುವ ವಸತಿ ನಿಲಯಗಳು, ಹುನಗುಂದ-ತಾಳಿಕೋಟಿ ಹೆದ್ದಾರಿ ಕಾಮಗಾರಿ ಸೇರಿದಂತೆ ಮತಕ್ಷೆತ್ರದಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದಾರೆ ಎಂದು ಅವರು ಹೇಳಿದರು.
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಪ್ರತಿಯೋಂದು ಸಮುದಾಯದವರಿಗು ಅನುಕುಲವಾಗುವ ನಿಟ್ಟಿನಲಲ್ಲಿ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿದ್ದರು. ಇಡಿ ದೇಶಕ್ಕೆ ಮಾದರಿಯಾಗುವಂತಹ ಎಪಿಎಂಸಿ ಕಾಯ್ದೆ, ಎಸ್‌ಸಿಪಿ ಪಿಟಿಎಸ್ ಅಂತಹ ಐತಿಹಾಸಿಕ ಯೋಜನೆಗಳನ್ನು ರೂಪಿಸಿ ಇಡಿ ದೇಶದಲ್ಲಿಯೆ ಕರ್ನಾಟಕವನ್ನು ಮಾದರಿ ರಾಜ್ಯವಾಗುವ ನಿಟ್ಟಿನಲ್ಲಿ ಕೆಲಸ ಮಾಡಿದ್ದರು. ಸಿದ್ದರಾಮಯ್ಯನಂತಹವರನ್ನು ಮರಳಿ ಮುಖ್ಯಮಂತ್ರಿಯಾಗಿ ಕಾಣಬೇಕೆಂದು ರಾಜ್ಯದ ಜನತೆ ಕಾತುರವಾಗಿದ್ದಾರೆ ಎಂದು ಅವರು ಹೇಳಿದರು.
ಮುದ್ದೇಬಿಹಾಳ ತಾಲೂಕಿನಿಂದ ಪ್ರತಿ ಹಳ್ಳಿಯಲ್ಲಿಯು ಎಲ್ಲ ಸಮುದಾಯದವರು ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ತೆರಳಲು ಸ್ವ ಇಚ್ಚೆಯಿಂದ ತಯಾರಿ ನಡೆಸಿರುವದು ಸಿದ್ದರಾಮಯ್ಯನವರ ಮೇಲಿರುವ ಅಭಿಮಾನ, ಪ್ರೀತಿ ತೋರಿಸುತ್ತಿದೆ. ಪ್ರತಿ ಗ್ರಾಮದ ಜನತೆ ನಮ್ಮನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆದುಕೋಂಡಿದ್ದಾರೆ. ಕಾರ್ಯಕ್ರಮಕ್ಕೆ ಅಚ್ಚುಕಟ್ಟಾಗಿ ಹೋಗಿ ಬರಲು ಸಕಲ ಸಿದ್ದತೆಗಳನ್ನು ಮಾಡಿಕೋಳ್ಳಲಾಗಿದೆ ಎಂದು ಅವರು ತಿಳಿಸಿದರು.
—–
ಸಿದ್ದರಾಮೋತ್ಸವ ಕಾರ್ಯಕ್ರಮ ಯಶಶ್ವಿಗೆ ತಾಲೂಕಿನಿ ಪ್ರತಿ ಗ್ರಾಮದಿಂದ ತಮ್ಮ ಸ್ವಂತ ಖರ್ಚಿನಲ್ಲಿ ಕನಿಷ್ಟ ೫ ವಾಹನಗಳನ್ನು ಮಾಡಿಕೋಂಡು ಸಿದ್ದರಾಮಯ್ಯನವರ ಅಭಿಮಾನಿಗಳು ತಯಾರಿ ನಡೆಸಿದ್ದಾರೆ. ಇಗಾಗಲೆ ಬ್ಯಾನರ್, ಕಟೌಟಗಳು ಕಾರ್ಯಕ್ರಮಕ್ಕೆ ತೆರಳುವ ವಾಹನಗಳಿಗೆ ಸ್ಟಿಕರ್ ಅಂಟಿಸಿ ಸಿದ್ದರಾಮಯ್ಯನವರ ಅಭಿಮಾನಿಗಳು ಸಕಲ ಸಿದ್ದತೆ ಮಾಡಿಕೋಂಡಿದ್ದಾರೆ.- ಸಂಗಪ್ಪ ಮೇಲಿನಮನಿ ಸಿದ್ದರಾಮಯ್ಯನವರ ಅಭಿಮಾನಿ
—–
ತಾಲೂಕಿನ ಸರ್ವ ಜನಾಂಗದವರು ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ತೆರಳಲು ಸಕಲ ಸಿದ್ದತೆ ಮಾಡಿಕೋಂಡಿದ್ದಾರೆ. ನನ್ನ ಸ್ವಂತ ಖರ್ಚಿನಲ್ಲಿ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಪಾಲ್ಗೋಳ್ಳುವ ಅಭಿಮಾನಿಗಳಿಗೆ ೧೦೦ ಕ್ಕೂ ಅಧಿಕ ವಾಹನಗಳನ್ನು ಇಗಾಗಲೆ ಬುಕ್ ಮಾಡಲಾಗಿದೆ. ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ತಾಲೂಕಿನಿಂದ ಎಲ್ಲ ಸಮುದಾಯದವರು ಪಾಲ್ಗೋಳ್ಳುತ್ತಿರುವದು ಸಂತೋಷದಾಯಕವಾಗಿದೆ.- ಎಂ.ಎನ್.ಮದರಿ ಉದ್ಯಮಿ ಮುದ್ದೇಭಿಹಾಳ.