Wednesday, 11th December 2024

ಅಶಾ ಕಾರ್ಯಕರ್ತೆಯರಿಂದ ಎಚ್ಚರಿಕೆ

ವಿಶ್ವವಾಣಿ ಸುದ್ದಿಮನೆ

ಬೆಂಗಳೂರು
ಗುತ್ತಿಗೆ ವೈದ್ಯರ ಉಪವಾಸದ  ಬೆನ್ನಲ್ಲೇ ಅಶಾ ಕಾರ್ಯಕರ್ತೆಯರ ಬೇಡಿಕೆ  ಧರಣಿ ಕೆಲಸ  ಸ್ಥಗಿತ  ಬೆದರಿಕೆ ಸರಕಾರಕ್ಕೆ ಧರ್ಮ ಸಂಕಟ, ತಲೆ ನೋವನ್ನು ಒಟ್ಟಿಗೆ ತಂದಿಟ್ಟಿದೆ.
ಮಾಸಿಕ ಗೌರವ ಧನ 12 ಸಾವಿರ ಹೆಚ್ಚಳ ಸೇರಿದಂತೆ ಇನ್ನಿತರೆ  ಬೇಡಿಕೆ ಈಡೇರಿಸುವಂತೆ ರಾಜ್ಯಾಾದ್ಯಂತ ಅಶಾ ಕಾರ್ಯಕರ್ತೆಯರು  ಇದೆ 10 ರಿಂದ ಸೇವೆ ಸ್ಥಗಿತಗೊಳಿಲು  ತೀರ್ಮಾನಿಸಿದ್ದಾರೆ.  ಜನವರಿಯಿಂದ ಸರಕಾರಕ್ಕೆೆ 10 ಬಾರಿ ಮನವಿ ಮಡಿದರೂ  ಯಾವುದೇ ಪ್ರಯೋಜನಾಗಿಲ್ಲ ಹೀಗಾಗಿ ಇದೆ  10 ರಿಂದ ಆರೋಗ್ಯ ಸೇವೆ ಸ್ಥಗಿತಗೊಳಿಸಿ ಬೀದಿಗಿಳಿದು  ಹೋರಾಟ ಮಾಡುವುದು
ಅನಿವಾರ್ಯವಾಗಲಿದೆ ಎಂದು  ಆಶಾ ಕಾರ್ಯಕರ್ತೆಯರು ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿ 42ಸಾವಿರ ಆಶಾ ಕಾರ್ಯಕರ್ತೆಯರು ಕೆಲಸ ಮಾಡುತ್ತಿಿದ್ದಾರೆ. ಕರೋನಾ ಸೋಂಕು  ತಡೆಗಟ್ಟುವಲ್ಲಿ  ಹಗಲೂ ರಾತ್ರಿಿ ಶ್ರಮಿಸುತ್ತಿಿದ್ದಾರೆ. ಮನೆ ಮನೆಗೆ  ತೆರಳಿ ಸಮೀಕ್ಷೆ, ಮಾಡಿ  ಸೋಂಕು ಪತ್ತೆೆ ಹಚ್ಚುವಲ್ಲಿ  ಇವರ ಪಾತ್ರ ಅತಿ ಮುಖ್ಯವಾಗಿದೆ. ಇಂತಹ ಸಮಯದಲ್ಲಿ  ಆಶಾ ಆಶಾ ಕಾರ್ಯಕರ್ತೆಯರು  ಕೆಲಸ ಬಿಟ್ಟು ಬೀದಿಗಿಳಿದರೆ  ಪರಿಸ್ಥಿಿತಿ  ಮತ್ತಷ್ಟು ಭಯಾನಕವಾಗಲಿದೆ .ರಾಜ್ಯದ ಆಶಾ ಕಾರ್ಯಕರ್ತರ ಕೆಲಸವನ್ನು  ಕೇಂದ್ರ ಸರಕಾರ  ಮೆಚ್ಚಿಿಕೊಂಡಿತ್ತು .