Friday, 13th December 2024

ಇನ್ಫೋಸೀಸ್ ನಿಂದ ಉಡುಪಿ ಜಿಲ್ಲೆಗೆ ನೆರವು

ವಿಶ್ವವಾಣಿ ಸುದ್ದಿಮನೆ

ಸುಧಾ ಮೂರ್ತಿ ಇವರು ತಮ್ಮ ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಉಡುಪಿ ಜಿಲ್ಲೆಗೆ ಸುಮಾರು ೫೪ ಲಕ್ಷ ರುಪಾಯಿ ಮೌಲ್ಯದ ಅಗತ್ಯ ವೈದ್ಯಕೀಯ ಪರಿಕರಗಳನ್ನು ಒದಗಿಸಿ ಕೊಟ್ಟಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಉಡುಪಿ ಜಿಲ್ಲಾಧಿಕಾರಿ ಗಳಾದ ಜಿ. ಜಗದೀಶ್ ಇವರು “ಉಡುಪಿ ಜಿಲ್ಲೆಗೆ ಕೆಲವೊಂದು ವೈದ್ಯಕೀಯ ಪರಿಕರಗಳು ಅಗತ್ಯವಾಗಿ ಬೇಕಿತ್ತು. ಇದಕ್ಕಾಗಿ ನಾವು ಸುಧಾ ಮೂರ್ತಿ ಇವರಲ್ಲಿ ಕೇಳಿಕೊಂಡಾಗ ತಕ್ಷಣವೇ ಜಿಲ್ಲೆಗೆ‌‌ ಬೇಕಾದ ಎನ್ ೯೫ ಮಾಸ್ಕ್, ಹ್ಯಾಂಡ್ ಸ್ಯಾನಿಟೈಜರ್, ಟ್ರಿಪಲ್ ಲೇಯರ್ ಮಾಸ್ಕ್ ಹಾಗೂ ಸುಮಾರು ೧೦೦೦ ದಷ್ಟು ‌ಪಿಪಿಇ ಕಿಟ್ ಗಳನ್ನು ಒದಗಿಸಿ ಕೊಟ್ಟಿದ್ದಾರೆ. ಇದಕ್ಕಾಗಿ ಸುಧಾ ಮೂರ್ತಿ ಹಾಗೂ ಇನ್ಫೋಸಿಸ್ ನ ಡಾಕ್ಟರ್ ರಾಮದಾಸ್ ಕಾಮತ್ ಇವರಿಗೆ ಅಭಾರಿಯಾಗಿದ್ದೇನೆ” ಎಂದಿದ್ದಾರೆ.
4000 ಎನ್ 95 ಮಾಸ್ಕ್, 4000 ಸ್ಯಾನಿಟೈಜರ್‌ಗಳು, 25000 ಟ್ರಿಪಲ್ ಲೇಯರ್ ಮಾಸ್ಕ್, 10000 ಸರ್ಜಿಕಲ್ ಗ್ಲೌಸ್, 1500 ಪಿಪಿಇ ಕಿಟ್ ಗಳನ್ನು ನೀಡಲಾಗಿದೆ.