Friday, 13th December 2024

ಉದ್ಯಮಿಗಳಿಂದ ಕೆಲಸದ ಅವಧಿ ವಿಸ್ತರಣೆಗೆ ಪಟ್ಟು

ವಿಶ್ವವಾಣಿ ಸುದ್ದಿಮನೆ ಬೆಂಗಳೂರು

ಕರೋನಾ ಲಾಕ್‌ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಕಾರ್ಮಿಕ ಕಾನೂನಿನಲ್ಲಿ ಕೆಲವು ರಿಯಾಯಿತಿ ನೀಡಲು ಉದ್ಯಮಿಗಳು
ಒತ್ತಾಯಿಸುತ್ತಿದ್ದು  8 ಗಂಟೆಯ ಪಾಳಿಯನ್ನು ಬದಲಿಸಿ 12 ಗಂಟೆಯವರೆಗೆ ದುಡಿಯಲು ಅವಕಾಶ ನೀಡಬೇಕೆಂದು ಕೋರಿದ್ದಾರೆ.

ಆರ್ಥಿಕ ರಂಗ ಚೇತರಿಕೆ ಕಾಣಬೇಕೆಂದರೆ ಈಗಿನ ಕಾರ್ಮಿಕ ಕಾಯ್ದೆಗೆ ಕೆಲವು ಬದಲಾವಣೆ ತರಬೇಕು. ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳು ಆರಂಭಗೊಳ್ಳುತ್ತಿದ್ದಂತೆ ಸಾಮಾಜಿಕ ಅಂತರ ಮತ್ತು ಕೆಲಸದ ಅವಧಿ ದೊಡ್ಡ ಸಮಸ್ಯೆಯಾಗಿದೆ. 8  ಗಂಟೆಗಳ ದುಡಿಮೆ ಎಂದರೆ ಎಲ್ಲರೂ ಒಟ್ಟಿಗೆ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಇದರಿಂದ ಪಾಳಿಗಳನ್ನು ಬದಲಿಸಬೇಕು. ಅಲ್ಲದೆ ಎಷ್ಟು ಗಂಟೆ ಕೆಲಸ ಮಾಡುತ್ತಾರೋ ಅದಕ್ಕೆ ತಕ್ಕಂತೆ ಕೂಲಿ ನೀಡಲು ಅವಕಾಶ ನೀಡಬೇಕು ಎಂದು ಉದ್ಯಮಿಗಳು ಒತ್ತಾಯಿಸುತ್ತಿದ್ದಾರೆ. ಇದಕ್ಕೆ  ಅಗತ್ಯ ಎನಿಸಿದರೆ ಸುಗ್ರೀವಾಜ್ಞೆ ತರಬೇಕೆಂಬುದು ಉದ್ಯಮಿಗಳ ಒತ್ತಾಯ.

ಇದಕ್ಕೆ ಕಾರ್ಮಿಕ ಆಯುಕ್ತರು ಒಪ್ಪಿಗೆ ಸೂಚಿಸಿರಲಿಲ್ಲ. ಈಗ ಕರೋನಾ ಭಯದಿಂದ ಕಾರ್ಮಿಕರು ಕೆಲಸಕ್ಕೆ ಬರುವುದೇ ಕಷ್ಟ. ಪ್ರತಿ ಕಾರ್ಮಿಕನಿಗೆ ಸ್ಯಾನಿಟೈಸರ್, ಮುಖಕ್ಕೆ ಮಾಸ್‌ಕ್‌ ನೀಡಬೇಕು ಎಂದರೆ ಹೆಚ್ಚುವರಿ ವೆಚ್ಚ ಬರುತ್ತದೆ. ಅದರೊಂದಿಗೆ ಪಾಳಿ ನಿಯಮಗಳನ್ನು ಪಾಲಿಸುವುದು ಕಷ್ಟ. ಬಹುತೇಕ ಕೈಗಾರಿಕೆಗಳು ಬಹಳ ಚಿಕ್ಕ ಕಟ್ಟಡದಲ್ಲಿ ಕೆಲಸ ಮಾಡುತ್ತಿವೆ. ಅಲ್ಲಿ ಸಾಮಾಜಿಕ ಅಂತರ ಕಾಯುವುದು ಕಷ್ಟದ. ಇದಕ್ಕೆ ಉಪಾಯ ಎಂದರೆ ಗಂಟೆಯ ಆಧಾರದ ಮೇಲೆ ಕೆಲಸ ಮಾಡಿಸುವುದು.
ಆಗ ಕಾರ್ಮಿಕರು ನಿಗದಿತ ಸಮಯದಲ್ಲಿ ಬಂದು ಕೆಲಸ ಮಾಡಿ ಹೀಗಬಹುದು. ಹೆಚ್ಚು ಉತ್ಪಾದನೆಗೆ ಇದು ಸಹಕಾರಿ ಎಂಬುದು ಉದ್ಯಮಿಗಳ ವಾದ.

ಕಾರ್ಮಿಕ ಕಾಯ್ದೆ ಕೇಂದ್ರದ ವ್ಯಾಪ್ತಿಗೆ ಬರಲಿದ್ದು ಅದಕ್ಕೆ ತಿದ್ದುಪಡಿ ತರುವುದು ಕಷ್ಟ ಎಂಬುದು ಉದ್ಯಮಿಗಳಿಗೂ ತಿಳಿದಿದೆ. ಅದಕ್ಕಾಗಿ ಅವರು ರಾಜ್ಯ ಕಾರ್ಮಿಕ ಇಲಾಖೆ ಮೇಲೆ ಒತ್ತಡ ಹೇರಲು ತೀರ್ಮಾನಿಸಿದ್ದಾರೆ. ರಾಜ್ಯದಲ್ಲಿ ಒಟ್ಟು 481763 ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳಿವೆ. ಇವು ಬೆಂಗಳೂರು ಮತ್ತು ಅತಿ ಸಣ್ಣ ಕೈಗಾರಿಕೆಗಳಿವೆ. ಇವು ಬೆಂಗಳೂರು ಮತ್ತು ಪ್ರಮುಖ ನಗರಗಳಲ್ಲಿ ಮಾತ್ರ ವ್ಯಾಪಿಸಿದೆ.

ಇದರ ನಡುವೆ ಕಾರ್ಮಿಕ ಆಯುಕ್ತ ಮಣಿವಣ್ಣನ್ ಅವರ ದಿಢೀರ್ ವರ್ಗಾವಣೆ ನಡೆದರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮಣಿವಣ್ಣನ್ ಕಾರ್ಮಿಕರ ಪರ ಇದ್ದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.