Friday, 13th December 2024

ಕಲಬುರಗಿಯಲ್ಲಿ ಸಾವಿ‌ನ ಸಂಖ್ಯೆ 6ಕ್ಕೆ ಏರಿಕೆ

ಕಲಬುರಗಿ:
ಕಲಬುರಗಿಯಲ್ಲಿ ಕರೋನಾಗೆ ಬಲಿಯಾದವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಈ ವರೆಗೂ ಆರು ಮಂದಿ ಮೃತಪಟ್ಟಿದ್ದಾರೆ‌.
ಭಾನುವಾರ ಕಲಬುರಗಿಯಲ್ಲಿ ಏಪ್ರಿಲ್ 29 ರಂದು ಕಲಬುರಗಿ ನಿವಾಸಿ ಇಲ್ಲಿನ ಇಎಸ್ ಐ ಆಸ್ಪತ್ರೆಗೆ ದಾಖಲಾಗಿದ್ದು, ಕರೋನಾ ಇರುವುದು ದೃಢಪಟ್ಟಿತು‌. ರಕ್ತದೊತ್ತಡ, ಹೃದಯ ತೊಂದರೆ ಮುಂತಾದ ಕಾಯಿಲೆಯೂ ಇತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ರಾಜ್ಯದಲ್ಲಿ ಕರೋನಾಗೆ ಬಲಿಯಾದವರ ಸಂಖ್ಯೆ  26 ಕ್ಕೆ ಏರಿಕೆಯಾಗಿದೆ.