Friday, 13th December 2024

ಕೇಂದ್ರ ಆರೋಗ್ಯ ಸಚಿವರ ಜತೆ ಶ್ರೀ ರಾಮುಲು ಚರ್ಚೆ

ವಿಶ್ವವಾಣಿ ಸುದ್ದಿಮನೆ

ಬೆಂಗಳೂರು

ದ್ರ ಸಚಿವರಾದ ಶ್ರೀ ಹರ್ಷವರ್ಧನ್ ಅವರು ಈಗ ತಾನೆ ಆರೋಗ್ಯ ಸಚಿವರಾದ ಶ್ರೀ ಬಿ. ಶ್ರೀ ರಾಮುಲು ಅವರಿಗೆ ಕರೆ ಮಾಡಿದ್ದರು. ರಾಜ್ಯದಲ್ಲಿ ಕೊರೋನಾ ವೈರಸ್ ಪೀಡಿತರ ಬಗ್ಗೆ ಕೈಗೊಂಡ ಕಾರ್ಯಗಳು ಹಾಗೂ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿದ ವಿವರ ಕೇಳಿದರು.

ಅದಕ್ಕಾಗಿ ಮಾನ್ಯ ಆರೋಗ್ಯ ಸಚಿವರಾದ ಶ್ರೀ ಬಿ. ರಾಮುಲು ಅವರು ಎಲ್ಲ ವಿವರಗಳನ್ನು ನೀಡಿದರು. ವಿವರ ಇಂತಿದೆ…

* ಈಗಾಗಲೇ ನಾನು ಕಲಬುರ್ಗಿ, ಬೆಳಗಾವಿ, ಮಂಗಳೂರು, ಮಂಡ್ಯ, ರಾಮನಗರ, ಕೋಲಾರ, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಗೆ ಬೇಟಿ ಕೊಟ್ಟಿದ್ದೇನೆ.

* ಕರ್ನಾಟಕದಲ್ಲಿರುವ 83 ಕೊರೋನಾ positive ಪ್ರಕರಣಗಳಲ್ಲಿ 3 ಮಂದಿ ಮೃತಪಟ್ಟಿದ್ದಾರೆ.

* ಈ ಕೊರೋನಾ ಸೋಂಕಿತರಲ್ಲಿ ಶೇ 80% ರೋಗಿಗಳು ಗುಣಮುಖರಾಗ್ತಾರೆ.

* ಶೇ 20 ರಷ್ಟು ರೋಗಿಗಳಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸಬೇಕು.

* ಅದರಲ್ಲಿ ಶೇ.3 ರಷ್ಟು ಕೊರೋನಾ ಸೋಂಕಿತರಿಗೆ ಮಾತ್ರ ವೆಂಟಿಲೇಟರ್ ನಲ್ಲಿಡಬೇಕು.

* ನಮ್ಮಲ್ಲಿ 2 ರೋಗಿಗಳಿಗೆ ಮಾತ್ರ ಇಲ್ಲಿವರೆಗೆ ವೆಂಟಿಲೇಟರ್ ಬೇಕಿದೆ.

* ಆದ್ರೆ ಕೊರೋನಾ ಸೋಂಕು ತಗಲಿದ 3 ರೋಗಿಗಳು ಸೋಂಕು ಹಾಗೂ ಇತರ ಅನಾರೋಗ್ಯ ಕಾರಣದಿಂದ ಮೃತಪಟ್ಟಿದ್ದಾರೆ.

* ನಮ್ಮಲ್ಲಿ 734 ವೆಂಟಿಲೇಟರ್ ಗಳು ಇವೆ.

* ನಂಜನಗೂಡು, ಶಿರಾ positive ಪ್ರಕರಣಗಳ travel history ಕೂಟ track ಮಾಡ್ತಿದ್ದೇವೆ.

* ನಮ್ಮಲ್ಲಿ ರೋಗಿಗಳ ಸಂಖ್ಯೆ ಹೆಚ್ಚಿದ್ದರೂ ಅದರ ತೀವ್ರತೆ ಕಡಿಮೆ ಇದೆ ಎಂಬ ಸಮಗ್ರ ಮಾಹಿತಿ ನೀಡಿದರು.