Saturday, 14th December 2024

ಕೋವಿಡ್-19 : ಗದಗ ಜಿಲ್ಲೆಯಲ್ಲಿ 24 ಸೋಂಕು ಧೃಡ

ಗದಗ:

ಗದಗ ಜಿಲ್ಲೆಯಲ್ಲಿ ಶನಿವಾರ ದಿನಾಂಕ 27 ರಂದು 24 ಜನರಲ್ಲಿ ಕೊವಿಡ್-19 ಸೋಂಕು ದೃಢ ಪಟ್ಟಿದೆ.
ಗದಗ ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 140 ಸೋಂಕು ದೃಢಪಟ್ಟಿವೆ. ಅವುಗಳಲ್ಲಿ 3 ವ್ಯಕ್ತಿಗಳು ಮೃತಪಟ್ಟಿದ್ದು 51 ಜನ ಗುಣಮುಖರಾಗಿದ್ದು 86 ಕೊವಿಡ್-19 ಸೋಂಕಿನ ಸಕ್ರಿಯ ಪ್ರಕರಣಗಳಿವೆ.

ದೆಹಲಿಯಿಂದ ಜಿಲ್ಲೆಗೆ ಆಗಮಿಸಿದ 3 ಜನರಲ್ಲಿ ಸೋಂಕು ದೃಢಪಟ್ಟಿದೆ. ಶಿರಹಟ್ಟಿ ಪಟ್ಟಣದ ವಿದ್ಯಾನಗರದ ನಿವಾಸಿಗಳಾದ 12 ವರ್ಷದ ಪುರುಷ ಪಿ-11,224, 47 ವರ್ಷದ ಪುರುಷ ಪಿ-11,225 ಹಾಗೂ 39 ವರ್ಷದ ಮಹಿಳೆ ಪಿ-11,226 ಇವರಿಲ್ಲಿ ಸೋಂಕು ದೃಢಪಟ್ಟಿರುತ್ತದೆ. ಹರ್ತಿ ಗ್ರಾಮದ 40 ವರ್ಷದ ಪುರುಷ ಪಿ-7832 ಸಂಪರ್ಕದಿಂದಾಗಿ 4 ಜನರಿಗೆ ಸೋಂಕು ದೃಢಪಟ್ಟಿದೆ. ಹರ್ತಿ ಗ್ರಾಮದ 32 ವರ್ಷದ ಮಹಿಳೆ ಪಿ-11,227, 82 ವರ್ಷದ ಮಹಿಳೆ ಪಿ-11,228, 22 ವರ್ಷದ ಮಹಿಳೆ ಪಿ-11,229 ಹಾಗೂ ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ಗ್ರಾಮದ 26 ವರ್ಷದ ಪುರುಷ ಪಿ-11,232  ಇವರಿಗೆ ಸೋಂಕು ದೃಢಪಟ್ಟಿದೆ.

ಅಂತರಜಿಲ್ಲಾ (ಬೆಂಗಳೂರು,ಧಾರವಾಡ) ಪ್ರಯಾಣದಿಂದ ಶಿರಹಟ್ಟಿ ತಾಲೂಕಿನ ಲಕ್ಷ್ಮೇಶ್ವರದ 39 ವರ್ಷದ ಪುರುಷ ಪಿ-11,230 ಇವರಿಗೆ ಸೋಂಕು ದೃಡಪಟ್ಟಿದೆ.  ರೋಣ ತಾಲೂಕಿನ ನಿಡಗುಂದಿಕೊಪ್ಪ ಗ್ರಾಮದ 95 ವರ್ಷದ ಮಹಿಳೆ ಪಿ-11,231 (ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ) ಇವರಿಗೆ ಸೋಂಕು ದೃಡಪಟ್ಟಿದೆ. ಶಿರಹಟ್ಟಿ ತಾಲ್ಲೂಕಿನ ಮಜ್ಜೂರುತಾಂಡ ನಿವಾಸಿ 29 ವರ್ಷದ ಮಹಿಳೆ ಪಿ-8723 ಸೋಂಕಿತರ ಸಂಪರ್ಕದಿಂದಾಗಿ ಶಿರಹಟ್ಟಿ ತಾಲೂಕಿನ ಮಜ್ಜೂರ ತಾಂಡಾದ 14 ವರ್ಷದ ಬಾಲಕಿ ಪಿ-11,233  ಇವರಿಗ ಸೋಂಕು ದೃಢಪಟ್ಟಿದೆ.

ಶಿರಹಟ್ಟಿ ತಾಲೂಕಿನ ಛಬ್ಬಿ ಗ್ರಾಮದ 24 ವರ್ಷದ ಮಹಿಳೆ ಪಿ-11,234 ಹಾಗೂ ಬಾಳೆಹೊಸೂರ ಗ್ರಾಮದ 26 ವರ್ಷದ ಪುರುಷ ಪಿ-11,235 ಇವರಿಗೆ ಇನ್‌ಪ್ಲೂಯೆಂಜಾ ರೋಗ ಲಕ್ಷಣದಿಂದಾಗಿ ಸೋಂಕು ಇರುವುದು ದೃಢವಾಗಿದೆ. 55 ವರ್ಷದ ಪುರುಷ ಪಿ-8732 ಇವರ ಸಂಪರ್ಕದಿಂದಾಗಿ 3 ಜನರಿಗೆ ಸೋಂಕು ದೃಢಪಟ್ಟಿದೆ. ಶಿರಹಟ್ಟಿ ತಾಲೂಕಿನ ಶಿವಾಜಿನಗರದ 22 ವರ್ಷದ ಮಹಿಳೆ ಪಿ-11,236, 60 ವರ್ಷದ ಪುರುಷ ಪಿ-11,237 ಹಾಗೂ 80 ವರ್ಷದ ಮಹಿಳೆ ಪಿ-11,238 ಸೋಂಕು ದೃಢಪಟ್ಟಿದೆ. ಮಹಾರಾಷ್ಟ್ರದಿಂದ ಜಿಲ್ಲೆಗೆ ಆಗಮಿಸಿದ 5 ಜನರಲ್ಲಿ ಸೋಂಕು ದೃಢಪಟ್ಟಿದೆ.

ಗದಗ-ಬೆಟಗೇರಿ ನಗರ ಸಭೆ ವ್ಯಾಪ್ತಿಯ ಬೆಟಗೇರಿಯ ರಾಮಕೃಷ್ಣ ಪರಮಾನಂದ ರಸ್ತೆಯ 67 ವರ್ಷದ ಪುರುಷ ಪಿ-11,239, 65 ವರ್ಷದ ಮಹಿಳೆ ಪಿ-11,240, ಜಾಕೀರ ಹುಸೇನ ಕಾಲನಿಯ 22 ವರ್ಷದ ಯುವಕ ಪಿ-11,241, 19 ವರ್ಷದ ಯುವಕ ಪಿ-11,242, ಲಕ್ಷ್ಮೀ ಚಾಳದ 44 ವರ್ಷದ ಮಹಿಳೆ ಪಿ-11,243 ಸೋಂಕು ದೃಢಪಟ್ಟಿದೆ. ಗದಗ-ಬೆಟಗೇರಿ ನಗರದ 26 ವರ್ಷದ ಮಹಿಳೆ 7386 ಸಂಪರ್ಕದಿಂದಾಗಿ ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ ಗಾಂಧೀ ನಗರದ 30 ವರ್ಷದ ಪುರುಷ ಪಿ-11,244 ಇವರಿಗೆ ಸೋಂಕು ದೃಢಪಟ್ಟಿರುತ್ತದೆ.

ಅಂತರಜಿಲ್ಲಾ (ಬೆಂಗಳೂರು, ಧಾರವಾಡ) ಪ್ರಯಾಣದ ಹಿನ್ನಲೆಯಲ್ಲಿ ಮುಂಡರಗಿಯ ನೇಕಾರ ನಗರದ 65 ವರ್ಷದ ಮಹಿಳೆ ಪಿ-11,245, ರೋಣ ತಾಲೂಕಿನ ಬೆಳವಣಕಿ ಗ್ರಾಮದ 12 ವರ್ಷದ ಬಾಲಕಿ ಪಿ-11,246,  ಸೋಂಕು ದೃಢಪಟ್ಟಿದೆ.
ಬಾಗಲಕೋಟೆ ಜಿಲ್ಲೆಯ 54 ವರ್ಷದ ಪುರುಷ ಪಿ-9153 ಸಂಪರ್ಕದಿಂದಾಗಿ ರೋಣ ತಾಲೂಕಿನ ಮೆಣಸಗಿ ಗ್ರಾಮದ 34 ವರ್ಷದ ಮಹಿಳೆ ಪಿ-11,247 ಇವರಿಗೆ ಸೋಂಕು ದೃಢಪಟ್ಟಿದೆ. ಇವರೆಲ್ಲರಿಗೂ ಗದಗ ನಿಗದಿತ ಜಿಮ್ಸ ಕೊವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.