ವಿಶ್ವವಾಣಿ ಸುದ್ದಿಮನೆ
ಬೆಂಗಳೂರು:
ಗುಜರಾತ್‍ನ ಅಹಮದಾಬಾದ್‍ನಿಂದ ಮೇ5ರಂದು ಚಿತ್ರದುರ್ಗ ಹಾಗೂ ದಾವಣಗೆರೆಗೆ ಬಂದಿದ್ದವರ ಪೈಕಿ 6 ಜನರಿಗೆ ಶನಿವಾರ ಕರೋನಾ ದೃಢಪಟ್ಟಿದೆ.
ಇವರೆಲ್ಲರಿಗೂ ಗುಜರಾತ್‍ನಲ್ಲಿ ಕರೋನಾ ಪರೀಕ್ಷೆ ಮಾಡಿಸಿದಾಗ ರಿಪೋರ್ಟ್ ನೆಗೆಟಿವ್ ಬಂದಿತ್ತು. ಆದರೆ ಇಂದು ಚಿತ್ರದುರ್ಗ ಹಾಗೂ ತುಮಕೂರಿನ ತಲಾ ಮೂವರಿಗೆ ಸೋಂಕು ದೃಢಪಟ್ಟಿದೆ.
ರಾಜ್ಯದಲ್ಲಿ ಕರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆರಡು ಹೆಚ್ಚಾಗುತ್ತಲೇ ಇದೆ. ಶನಿವಾರ ಒಂದೇ ದಿನದಲ್ಲಿ 41 ಮಂದಿಗೆ ಕರೋನಾ ಬಂದಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 794ಕ್ಕೆ ಏರಿಕೆಯಾಗಿದೆ.
ರಾಜ್ಯ ಕುಟುಂಬ ಕಲ್ಯಾಣ ಹಾಗೂ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಬುಲೆಟಿನ್‍ನಲ್ಲಿ, ಬೆಂಗಳೂರಿನಲ್ಲಿ 12, ಚಿತ್ರದುರ್ಗ 3, ದಕ್ಷಿಣ ಕನ್ನಡ 3, ಉತ್ತರ ಕನ್ನಡ 8, ತುಮಕೂರು 4, ಬೀದರ್ 3, ಚಿಕ್ಕಬಳ್ಳಾಪುರ 1, ಬೀದರ್ ಹಾಗೂ ದಾವಣಗೆರೆಯಲ್ಲಿ 6 ಮಂದಿಗೆ ಸೋಂಕು ದೃಢಪಟ್ಟಿದೆ.
ಬೆಂಗಳೂರಿನ ಹೊಂಗಸಂದ್ರದಲ್ಲಿ ಬಿಹಾರ್ ಮೂಲದ ಕರೋನಾ ರೋಗಿ 419 ಸಂಖ್ಯೆ ಸುಮಾರು ಆರು ಮಂದಿಗೆ ಕರೋನಾ ಸೋಂಕು ಹಬ್ಬಿಸಿದ್ದಾನೆ. ಪಾದರಾಯನಪುರ ಗಲಭೆಯ ಆರೋಪಿಗಳನ್ನು ರಾಮನಗರಕ್ಕೆ ತೆಗೆದುಕೊಂಡು ಹೋಗಿದ್ದ ಐವರಿಗೆ ಕರೋನಾ ಪಾಸಿಟಿವ್ ಬಂದಿತ್ತು ಆ ಐವರಲ್ಲಿ 454 ಹಾಗೂ 449 ನೇ ರೋಗಿಗಳ ಮನೆಯವರಿಗೂ ಸೋಂಕು ಹರಡಿರುವುದು ದೃಢಪಟ್ಟಿದೆ.
ಐವರಿಗೆ ಕರೋನಾ ಸೋಂಕು ಪತ್ತೆಯಾದ ಕೂಡಲೇ ಅವರ ಪ್ರಥಮ ಸಂಪರ್ಕದಲ್ಲಿದ್ದ ಮನೆಯವರನ್ನೂ ಕೂಡಾ ಕ್ರಾರಂಟೈನ್ ಮಾಡಲಾಗಿತ್ತು. ಹೀಗಾಗಿ 449 ಪ್ರಥಮ ಸಂಪರ್ಕಿತರಾಗಿದ್ದ ಅವನ 31 ವರ್ಷದ ಪತ್ನಿ (ರೋಗಿ-775) ಹಾಗೂ 55 ವರ್ಷದ ಅವನ ತಾಯಿ (ರೋಗಿ-761) ಗೂ ಕರೋನಾ ಹಬ್ಬಿದೆ.
ಇಷ್ಟೇ ಅಲ್ಲದೆ ಕಂಟೈನ್ ಮೆಂಟ್ ಝೂನ್‌ನಲ್ಲಿ ವಾಸಿಸುತ್ತಿದ್ದ 20 ವರ್ಷದ ಗರ್ಭಿಣಿ ಮಹಿಳೆ (765) ಗೂ ಕೊರೊನಾ ಸೋಂಕು ಹಬ್ಬಿದೆ. ಆದ್ರೆ ಅದೃಷ್ಟವಶಾತ್ ಇಂದು ಆಕೆಗೆ ಅವಳಿ ಜವಳಿ ಮಕ್ಕಳ ಹೆರಿಗೆಯಾಗಿದ್ದು ಮಕ್ಕಳಿಗೆ ಕರೋನಾ ಹಬ್ಬಿಲ್ಲ.
ಒಟ್ಟಿನಲ್ಲಿ ಪಾದರಾಯನಪುರದ ಗಲಭೆಯ ಆರೋಪಿಗಳ ಆರು ಜನ ಮನೆಯವರಿಗೆ ಹಾಗೂ ಒಬ್ಬ ಮಹಿಳೆ ಸೇರಿ ಏಳು ಜನಕ್ಕೆ ಕೊರೊನಾ ಸೋಂಕು ದೃಢಪಟ್ಟಿದೆ. 33 ಜನ ಪ್ರಥಮ ಸಂಪರ್ಕಿತರ ಟೆಸ್ಟ್ ನಲ್ಲಿ ಆರು ಜನಕ್ಕೆ ಕೊರೊನಾ ದೃಢಪಟ್ಟಿದೆ. ಇನ್ನು ಸೆಕೆಂಡರಿ ಕಾಂಟ್ಯಾಕ್ಸ್ ನಲ್ಲಿದ್ದ 108 ಜನರ ಟೆಸ್ಟ್ ರಿಸಲ್ಟ್ ಬರುವುದು ಬಾಕಿ ಇದೆ. ಇದೇ ವೇಳೆ ಆರೋಪಿಗಳ ಪ್ರಥಮ ಸಂಪರ್ಕದಲ್ಲಿದ್ದ 59 ಪೊಲೀಸರ ಈ ವರದಿ ನೆಗೆಟಿವ್ ಬಂದಿದೆ, ಪಾದರಾಯನಪುರ ವಾರ್ಡ್ ನಲ್ಲಿ ಈ ವರೆಗೆ 45 ಜನರಿಗೆ ಕೊರೊನಾ ವೈರಸ್ ಹರಡಿರುವುದು ದೃಢಪಟ್ಟಿದೆ. ಸೋಮವಾರದಿಂದ ವಾರ್ಡ್ ಜನರ ರ್ಯಾಂಡಮ್ ಚೆಕಪ್ ನಡೆಸಲಾಗುವುದು ಎಂದು ಬಿಬಿಎಂಪಿ ಆರೋಗ್ಯಾಧಿಕಾರಿ ತಿಳಿಸಿದರು.
……..
ಭಟ್ಕಳದಲ್ಲಿ ಮಹಿಳೆಗೆ ಕೋವಿಡ್ ದೃಢ
ಭಟ್ಕಳದಲ್ಲಿ ಶನಿವಾರ ಮತ್ತೊಬ್ಬರು ಮಹಿಳೆಗೆ ಕೋವಿಡ್ 19 ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಈಗ 21 ಸಕ್ರಿಯ ಪ್ರಕರಣಗಳಿದ್ದು, ಒಟ್ಟು ಸೋಂಕಿತರ ಸಂಖ್ಯೆ 32ಕ್ಕೇರಿದೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಬುಲೆಟಿನ್‌ನಲ್ಲಿ 32 ವರ್ಷದ ಮಹಿಳೆಗೆ (ರೋಗಿ ಸಂಖ್ಯೆ 791) ಸೋಂಕು ಖಚಿತವಾಗಿದ್ದಾಗಿ ತಿಳಿಸಲಾಗಿದೆ. ಅವರು 750ನೇ ಸಂಖ್ಯೆಯ ರೋಗಿಯ ಸಂಪರ್ಕಕ್ಕೆ ಬಂದಿದ್ದರು.