Friday, 13th December 2024

ಗುತ್ತಿಗೆ ವೈದ್ಯರಿಗೆ ವೇತನ ಹೆಚ್ಚಳ

ಬೆಂಗಳೂರು:
ರಾಜ್ಯದಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ  ಗುತ್ತಿಗೆ ಆಧಾರಿತ ಸೇವೆ ಸಲ್ಲಿಸುತ್ತಿರುವ ವೈದ್ಯರ ವೇತನ 45 ಸಾವಿರದಿಂದ 60 ಸಾವಿರಕ್ಕೆ ಹೆಚ್ಚಳ ಮಾಡಿ ಸರಕಾರ ಆದೇಶಿಸಿದೆ.
ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯಡಿ ಬರುವ ಜಿಲ್ಲಾ, ಕೇಂದ್ರ, ನಗರ ಪಾಲಿಕೆ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ ವೈದ್ಯರಿಗೆ ವೇತನ ಹೆಚ್ಚಳ ಮಾಡಲಾಗಿದೆ. ಇದಲ್ಲದೆ ವೈದ್ಯರ ನೇಮಕ ಅಗತ್ಯವಿದ್ದಲ್ಲಿ ಆಯಾ ಜಿಲ್ಲಾಧಿಕಾರಿಗಳು ನೇಮಕ ಮಾಡಿಕೊಳ್ಳುವ ಅಧಿಕಾರ ನೀಡಲಾಗಿದೆ. ಗುತ್ತಿಗೆ ಸೇವೆಯನ್ನು ಸಕ್ರಮಗೊಳಿಸಿವ ಬೇಡಿಕೆಗೆ ಆಸ್ಪದ ನೀಡುತ್ತಿಲ್ಲವೆಂದು ಆದೇಶಿಸಿದೆ