Friday, 13th December 2024

ತಬ್ಲಿಘಿ‌ ಪ್ರಕರಣ: 19 ಜನರ ವಿರುದ್ಧ ಕೇಸ್

ವಿಶ್ವವಾಣಿ ಸುದ್ದಿಮನೆ ಬೆಂಗಳೂರು:

ತಬ್ಲಿಘೀ ಜಮಾತ್ ಧಾರ್ಮಿಕ ಸಭೆಗೆ ಜನರನ್ನು ಸಂಘಟಿಸಲು ನಗರ ಸಂಚಾರ ನಡೆಸಿದ್ದ ೧೯ ಮಂದಿ ವಿರುದ್ದ ನಗರ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.
ಇಂಡೋನೇಷಿಯಾ ಸೇರಿದಂತೆ ವಿವಿಧ ದೇಶಗಳ ೧೯ ಪ್ರಜೆಗಳ ವಿರುದ್ದ ಜೀವನ್ ಭೀಮಾ ನಗರ ಪೋಲಿಸರು ಸ್ವಯಂಪ್ರೇರಿತ ದೂರು ದಾಖಲಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮಾ.೬ ರಂದು ನಗರಕ್ಕೆ ಬಂದಿದ್ದ ೧೯ ಮಂದಿ ವೀಸಾ ನಿಯಮಗಳನ್ನು ಉಲ್ಲಂಘಿಸಿ ಮಾ.೧೯ರ ತನಕ ನಗರದಲ್ಲಿ ಸಂಚರಿಸಿದ್ದು, ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ತಬ್ಲಿಘಿ ಜಮಾತ್ ಸಭೆಗೆ ಜನರನ್ನು ಸಂಘಟಿಸಿದ್ದರು.
ಪಾದರಾಯನಪುರದ ಮಸೀದಿಯೊಂದರಲ್ಲಿ ವಾಸ್ತವ್ಯ ಹೂಡಿದ್ದ ೧೯ ಮಂದಿಯನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಗೆ ಕಳುಹಿಸಲಾಗಿದೆ.
ಮಾ.೩೦ ಕ್ವಾರಂಟೈನಲ್ಲಿದ್ದ ಎಲ್ಲರನ್ನು ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆ ನಡೆಸಿ ಮತ್ತೆ ಹಜ್ ಭವನದಲ್ಲಿನ ಕ್ವಾರಂಟೈನ್ ಗೆ ಕಳುಹಿಸಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.
ಪ್ರವಾಸಿ ವೀಸಾ ಪಡೆದು ನಗರಕ್ಕೆ ಬಂದಿದ್ದ ೧೯ ಮಂದಿ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವುದು ಪತ್ತೆಯಾಗಿದ್ದು,ಅವರನ್ನು ಗಡಿಪಾರು ಮಾಡಲು ಒಪ್ಪಿಗೆ ನೀಡಬೇಕೆಂದು ಸರಕಾರಕ್ಕೆ ಮನವಿ ಮಾಡಲಾಗಿದೆ.