Friday, 13th December 2024

ನಿಯಮ ಉಲ್ಲಂಘಿಸಿದ ವಾಹನ ಜಪ್ತಿ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು:
ಕಾರ್​ನಲ್ಲಿ ಇಬ್ಬರು ಹಾಗೂ ಬೈಕ್​ನಲ್ಲಿ ಒಬ್ಬರು ಸಂಚರಿಸಬಹುದಾಗಿದೆ. ನಿಯಮ ಉಲ್ಲಂಘಿಸಿದವರ ವಾಹನಗಳನ್ನು ಜಪ್ತಿ ಮಾಡಿವಂತೆ ನಗರದ ಎಲ್ಲಾ ಠಾಣೆಗಳಿಗೂ ಮೌಖಿಕ ಆದೇಶವನ್ನು ಸಂಚಾರಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ನೀಡಿದ್ದಾರೆ.
ಸಂಚಾರಿ ನಿಯಮ ಮೀರಿದರೆ ವಾಹನ ಜಪ್ತಿಯಾಗಲಿದೆ.
ನಗರಾದ್ಯಂತ ಪೊಲೀಸ್​ ಕಣ್ಗಾವಲಿದ್ದು, ಸವಾರರು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ಪಾಸ್​ಗಳ ದುರ್ಬಳಕೆಯಾಗದಂತೆ ಎಚ್ಚರಿಕೆ ವಹಿಸಬೇಕು. ಪಾಸ್​ ಪಡೆದು ಹಲವರು ರಸ್ತೆಗಿಳಿಯುತ್ತಿದ್ದಾರೆ. ಅನವಶ್ಯಕ ಸುತ್ತಾಟಕ್ಕೆ ಸಂಪೂರ್ಣ ಬ್ರೇಕ್​ ಬೀಳಬೇಕಿದೆ ಎಂದು ಹೇಳಿದರು.ಹೆಚ್ಚಿನ ಸವಾರರು ಕಂಡು ಬಂದಲ್ಲಿ ರಸ್ತೆ ಮಧ್ಯೆ ಕೆಳಗಿಳಿಸಿ. ಇದಕ್ಕೆ ಹಿಂದೇಟು ಹಾಕಿದ ಸವಾರರ ವಾಹನವನ್ನು ಯಾವುದೇ ಮುಲಾಜಿಲ್ಲದೆ ವಶಕ್ಕೆ ಪಡೆಯುವಂತೆ ಸೂಚಿಸಿದ್ದಾರೆ.