Wednesday, 11th December 2024

ನೂತನ ಶಿಕ್ಷಣ ನೀತಿಯಲ್ಲಿ ಕ್ರೀಡೆ ಪಠ್ಯ:ಕಿರಣ್ ರಿಜಿಜು

ಮುಂಬೈ,
ದೇಶದ ನೂತನ ಶಿಕ್ಷಣ ನೀತಿಯಲ್ಲಿ ಕ್ರೀಡೆಯು ಪಠ್ಯಕ್ರಮದ ಒಂದು ಭಾಗವಾಗಲಿದ್ದು, ಪಠ್ಯೇತರ ಚಟುವಟಿಕೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಗುರುವಾರ ಹೇಳಿದ್ದಾರೆ.

21 ನೇ ಶತಮಾನದಲ್ಲಿ ಒಲಿಂಪಿಸಂ ಮತ್ತು ಒಲಿಂಪಿಕ್ ಶಿಕ್ಷಣ ಕುರಿತ ಅಂತಾರಾಷ್ಟ್ರೀಯ ವೆಬ್‌ನಾರ್ ‘ ಉದ್ಘಾಟನಾ ಅಧಿವೇಶನದಲ್ಲಿ ರಿಜಿಜು ಈ ಮಾಹಿತಿ ನೀಡಿದ್ದಾರೆ. ” ಭಾರತದ ನೂತನ ಶಿಕ್ಷಣ ನೀತಿಯು ಶಿಕ್ಷಣದಲ್ಲಿ ಕ್ರೀಡೆಯನ್ನು ಒಂದು ಭಾಗವಾಗಿ ಹೊಂದಿರಲಿದೆ. ಹೀಗಾಗಿ ಕ್ರೀಡೆ ಪಠ್ಯೇತರ ಚಟುವಟಿಕೆಯಾಗಿರುವುದಿಲ್ಲ, ” ಎಂದು ಅವರು ಗುರುವಾರ ತಿಳಿಸಿದ್ದಾರೆ.
ಜತೆಗೆ ಈವರೆಗೂ ಶಿಕ್ಷಣ ಒಂದು, ಕ್ರೀಡೆ ಒಂದು ಎಂಬುದಾಗಿತ್ತು. ಆದರೆ ಇದೆರಡು ಒಂದೆ ಎಂಬುದನ್ನು ನಾನು ಯಾವಾಗಲು ನಂಬುತ್ತೇನೆ ಎಂದಿದ್ದಾರೆ.

ಕ್ರೀಡೆಯನ್ನು ಐಚ್ಛಿಕ ವಿಷಯವಾಗಿ ಪರಿಗಣಿಸಲು ಸಾಧ್ಯವಿಲ್ಲ ಮತ್ತು ಅದನ್ನು ಶಿಕ್ಷಣದ ಒಂದು ಭಾಗವಾಗಿ ಸ್ವೀಕರಿಸಬೇಕಾಗಿದೆ ಎಂದು  ಪ್ರತಿಪಾದಿಸಿರುವ ರಿಜಿಜು, ” ಕ್ರೀಡೆ ಕೂಡ ಒಂದು ಶಿಕ್ಷಣ. ಆದ್ದರಿಂದ ಕ್ರೀಡೆ ಪಠ್ಯೇತರ ಚಟುವಟಿಕೆಗಳಾಗಿರಬಾರದು. ಈ ಮೂಲಕ ಕ್ರೀಡೆಯನ್ನು ಐಚ್ಛಿಕ  ವಿಷಯವಾಗಿ ಪರಿಗಣಿಸಲಾಗುವುದಿಲ್ಲ.  ಶಿಕ್ಷಣದ ಭಾಗವಾಗಿ ಕ್ರೀಡೆಯನ್ನು ಎಲ್ಲರೂ ಒಪ್ಪಿಕೊಳ್ಳಬೇಕು,” ಎಂದು ಅವರು ಹೇಳಿದ್ದಾರೆ.

” ಭಾರತದ ಹೊಸ ಶಿಕ್ಷಣ ನೀತಿಯನ್ನು ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ. ಆದರೆ ಇದು ಬಹುತೇಕ ಅಂತಿಮ ರೂಪದಲ್ಲಿದೆ. ಕ್ರೀಡೆಯನ್ನು ಶಿಕ್ಷಣ ವ್ಯವಸ್ಥೆಯಲ್ಲಿ ಅವಿಭಾಜ್ಯ ಅಗವಾಗಿಸುವ ಸಂಬಂಧ ಕರೆಯಲಾಗಿದ್ದ ರಾಷ್ಟ್ರೀಯ ಸಮಿತಿಯಲ್ಲಿ ತಮ್ಮ ಸಚಿವಾಲಯ ಕ್ರೀಡೆಯನ್ನು ಶಿಕ್ಷಣದ ಭಾಗವಾಗಿಸುವ ಸಂಬಂಧ ಬಲವಾದ ವಾದ ಮಂಡಿಸಿದೆ,”  ಅವರು ನುಡಿದಿದ್ದಾರೆ.

ರಾಷ್ಟ್ರೀಯ ಕ್ರೀಡಾ ಶಿಕ್ಷಣ ಮಂಡಳಿ ರಚನೆಗೆ ಉನ್ನತ ಮಟ್ಟದ ಸಮಿತಿಯನ್ನು ರಚಿಸಿರುವ ಬಗ್ಗೆ ಮಾಹಿತಿ ನೀಡಿರುವ ಸಚಿವರು, “ನಾವು ಈಗಾಗಲೇ ನಮ್ಮ ರಾಷ್ಟ್ರೀಯ ಕ್ರೀಡಾ ಶಿಕ್ಷಣ ಮಂಡಳಿಯನ್ನು ಘೋಷಿಸಿದ್ದೇವೆ ಎಂಬ ವಿಷಯವನ್ನು ಹಂಚಿಕೊಳ್ಳಲು ತಮಗೆ ತುಂಬಾ ಸಂತಸವಾಗುತ್ತದೆ. ಈಗ ಅದು ರಚನೆಯ ಹಂತದಲ್ಲಿದೆ ಮತ್ತು ತಾವು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದ್ದೇನೆ ಹಾಗೂ ರಾಷ್ಟ್ರೀಯ ಕ್ರೀಡಾ ಶಿಕ್ಷಣ ಮಂಡಳಿಯನ್ನು ಯಾವ ರೂಪದಲ್ಲಿ ತರಬೇಕು ಎಂಬುದರ ಕುರಿತು ಈ ಸಮಿತಿಯು ಚರ್ಚೆಯಲ್ಲಿದೆ ತೊಡಗಿದೆ, ” ಎಂದು ತಿಳಿಸಿದ್ದಾರೆ.

ಇದೇ ವೇಳೆ ದೇಶದಲ್ಲಿ ಒಲಿಂಪಿಕ್ ಮ್ಯೂಸಿಯಂ ಸ್ಥಾಪಿಸುವ ಆಸಕ್ತಿಯಿದ್ದು, ಕೋವಿಡ್-19 ತಹಬದಿಗೆ ಬಂದ ಬಳಿಕ ಈ ಬಗ್ಗೆ ಚರ್ಚಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.