Saturday, 14th December 2024

ಫುಡ್ ಡಿಲೆವರಿ ಮೂಲಕ ಎರಡು ತಲೆಯ ಹಾವು ಮಾರಾಟ ಯತ್ನ

ವಿಶ್ವವಾಣಿ ಸುದ್ದಿಮನೆ
ಬೆಂಗಳೂರು:

ಫುಡ್​ ಡೆಲಿವರಿ ಆ್ಯಪ್ ಮೂಲಕ ಎರಡು ತಲೆ ಹಾವನ್ನು ಮಾರಾಟ ಮಾಡಲು ಯತ್ನಿಸಿದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಹಮ್ಮದ್ ರಿಜ್ವಾನ್ ಮತ್ತು ಅಜರ್ ಖಾನ್ ಬಂಧಿತ ಆರೋಪಿಗಳು.

ಈ ಆರೋಪಿಗಳು ಲಾಕ್ ಡೌನ್ ನ ವೇಳೆಯಲ್ಲೇ ಹಾವನ್ನು ಮಾರಾಟ ಮಾಡಲು ಮುಂದಾಗಿದ್ದರು. ಫುಡ್ ಡೆಲಿವರಿ ಡನ್ಜೋ ಆ್ಯಪ್​​ನ ಬ್ಯಾಗ್ ನಲ್ಲಿ ಹಾವನ್ನ ಸಾಗಣೆ ಮಾಡುವಾಗ ಸಿಕ್ಕಿಬಿದ್ದಿದ್ದಾರೆ.

ತಲಘಟ್ಟಪುರ ಬಳಿ ಹಾವು ಸಾಗಿಸುತ್ತಿದ್ದ ವೇಳೆ ಸಿಸಿಬಿ ಪೊಲೀಸರು ಇವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಬೈಕ್, 3 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎರಡು ತಲೆ ಹಾವಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 50 ಲಕ್ಷ ರು. ಬೆಲೆ ಇದೆಯಂತೆ. ಹೀಗಾಗಿ ದಿಢೀರನೆ ಶ್ರೀಮಂತಿಕೆ ಹೊಂದಲು ಹಾವು ಮಾರಾಟಕ್ಕೆ ಮುಂದಾಗಿದ್ದರು ಎನ್ನಲಾಗಿದೆ.