Saturday, 14th December 2024

ಬೆಂಗಳೂರಿನ 30 ಹಾಟ್‍ಸ್ಪಾಟ್‍ಗಳಲ್ಲಿ ಟಫ್ ಲಾಕ್‍ಡೌನ್!

ವಿಶ್ವವಾಣಿ ಸುದ್ದಿಮನೆ
ಬೆಂಗಳೂರು:
ಕರೋನಾ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಸರಕಾರ ಆದೇಶಿಸಿದ್ದ ಲಾಕ್ ಡೌನ್ ಅನ್ನು ಮೇ 3ರವರೆಗೂ ವಿಸ್ತರಿಸಲಾಗಿದೆ. ಈ ಮಧ್ಯೆ ಕರೋನಾ ಪ್ರಕರಣ ಹೆಚ್ಚಾಗುತ್ತಲೇ ಇದ್ದರೂ, ಜನ ಯಾವುದೇ ಭಯವಿಲ್ಲದೇ ಒಡಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಬೆಂಗಳೂರಿನಲ್ಲಿ ಗುರುತಿಸಲಾಗಿರುವ 30 ಹಾಟ್ ಸ್ಪಾಟ್ ಗಳಲ್ಲಿ ಲಾಕ್ ಡೌನ್ ಅನ್ನು ಮತ್ತಷ್ಟು ಬಿಗಿಗೊಳಿಸಲಾಗುತ್ತಿದೆ.
ಬೆಂಗಳೂರಿನಲ್ಲಿ ಕರೋನಾ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ. 85 ಪ್ರಕರಣ ಪತ್ತೆಯಾಗುತ್ತಿದ್ದಂತೆಯೇ ಬಿಬಿಎಂಪಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದೆ. ಕಂಟೈನ್‍ಮೆಂಟ್ ಝೋನ್‍ಗಳ ಫಿಕ್ಸ್ ಗೆ ಸಿದ್ಧತೆ ನಡೆಸಲಾಗುತ್ತಿದೆ. ಕಂಟೈನ್‍ಮೆಂಟ್ ಝೋನ್ ಫಿಕ್ಸಿಂಗ್ ಭಾಗ ಫುಲ್ ಸೀಲ್‍ಡೌನ್ ಮಾಡಲಾಗುತ್ತದೆ. ಜನ ಹೊರಗೆ ಬಾರದ ಹಾಗೆ ಬ್ಯಾರಿಕೇಡ್ ಹಾಕಲಾಗುತ್ತಿದ್ದು, ಬೆಂಗಳೂರಿನ 30 ಹಾಟ್‍ಸ್ಪಾಟ್‍ಗಳು ಕಂಟೈನ್‍ಮೆಂಟ್ ಆಗಿ ಬದಲು ಮಾಡುವ ಸಾಧ್ಯತೆಗಳಿವೆ.
ಸೀಲ್‍ಡೌನ್ ಏರಿಯಾಗಳಿಗೆ ಪೊಲೀಸ್ ನಾಕಾಬಂಧಿ ಮಾಡಲಾಗುತ್ತಿದೆ. ಎಲ್ಲಾ ಪ್ರವೇಶದ್ವಾರಗಳಲ್ಲೂ ಶಾಶ್ವತವಾಗಿ ತಡೆಗೋಡೆ ಹಾಕಬೇಕು. ಯಾವುದೇ ವ್ಯಕ್ತಿ ಮನೆಯಿಂದ ಹೊರಬರುವಂತಿಲ್ಲ. ಸೀಲ್‍ಡೌನ್ ವಲಯದಲ್ಲಿ ಒಂದೇ ಒಂದು ನಿರ್ಗಮನ- ಮತ್ತು ಪ್ರವೇಶದ್ವಾರಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ನಿಯಂತ್ರಿತ ವಲಯದ ಒಳಗೆ ಖಾಸಗಿ ವಾಹನ ಸಂಚಾರಕ್ಕೆ ಅವಕಾಶವಿಲ್ಲ. ಅಗತ್ಯ ಸೇವೆಗಳು, ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಪೊಲೀಸರು ಎಮರ್ಜೆನ್ಸಿ ಪಾಸ್ ನೀಡುತ್ತಾರೆ. ಅಲ್ಲದೆ ಸೀಲ್‍ಡೌನ್ ಏರಿಯಾದಲ್ಲಿ ಹೆಚ್ಚು ನಿಗಾಕ್ಕೆ ಡ್ರೋಣ್ ಬಳಕೆ ಮಾಡಲಾಗುತ್ತದೆ.
ಬೆಂಗಳೂರು ನಿಯಂತ್ರಣ ವಲಯಕ್ಕೆ ಕಮಾಂಡರ್ ಗಳನ್ನು ನೇಮಿಸಲಾಗುತ್ತಿದೆ. ಸೀಲ್‍ಡೌನ್ ಏರಿಯಾಕ್ಕೆ ಎಕ್ಸ್ ಕ್ಯೂಟಿವ್ ಮ್ಯಾಜಿಸ್ಟ್ರೇಟ್‍ನ್ನು ಕಮಾಂಡರ್ ಆಗಿ ಆಯುಕ್ತರು ನೇಮಿಸಬೇಕು. ಈ ಕಮಾಂಡರ್ ಗೆ ಬಫರ್ ಝೋನ್‍ನ ಕಂಪ್ಲೀಟ್ ಜವಾಬ್ದಾರಿ ಹೊತ್ತಿರುತ್ತಾರೆ. ಬಿಬಿಎಂಪಿ ಹೊರತುಪಡಿಸಿದ ನಿಯಂತ್ರಿತ ವಲಯಗಳಿಗೆ ಡಿಸಿ ಕಮಾಂಡರನ್ನು ನೇಮಿಸಬೇಕು. ಬಿಬಿಎಂಪಿಯ ಹಿರಿಯ ಅಥವಾ ಕಿರಿಯ ಪ್ರಥಮ ದರ್ಜೆಯ ಅಧಿಕಾರಿಯಾಗಿರಬೇಕು.
ಸೀಲ್‍ಡೌನ್ ಏರಿಯಾದ ಕಂಪ್ಲೀಟ್ ಗಡಿಯನ್ನು ಗುರುತಿಸಬೇಕು. ಸೀಲ್‍ಡೌನ್ ಏರಿಯಾದ ಪ್ರವೇಶ ಹಾಗೂ ನಿರ್ಗಮನ ಗಡಿ ಗುರುತಿಸಬೇಕು. ಕಮಾಂಡರ್ ಗಡಿಕೇಂದ್ರವನ್ನು ಸ್ಥಾಪಿಸಬೇಕು. ಸೀಲ್‍ಡೌನ್ ಏರಿಯಾದ ಗರ್ಭಿಣಿ ಹೃದ್ರೋಗಿಗಳನ್ನು ಮೊದಲೇ ಗುರುತಿಸಿ ಚಿಕಿತ್ಸೆ ನೀಡಬೇಕು.
ಔಟ್‍ಪೋಸ್ಟ್ ಸ್ಥಾಪನೆ 
ವಲಯಗಳಲ್ಲಿ ಔಟ್‍ಪೋಸ್ಟ್ ಸ್ಥಾಪನೆ ಮಾಡಲಾಗುತ್ತದೆ. ಪ್ರತಿನಿತ್ಯವೂ ಜನರ ಆರೋಗ್ಯದ ನಿಯಮಿತ ತಪಾಸಣೆ ಮಾಡಲಾಗುತ್ತದೆ. ಪ್ರಾಥಮಿಕ ಸಂಪರ್ಕದ ವ್ಯಕ್ತಿಗಳನ್ನು ಹೋಮ್ ಕ್ವಾರಂಟೈನ್‍ನಲ್ಲಿಡದೇ ಸರಕಾರ ಸ್ವಾಧೀನದ ಕ್ವಾರಂಟೈನ್‍ಗೆ ಶಿಫ್ಟ್ ಮಾಡಲಾಗುತ್ತದೆ. ಸೆಕೆಂಡರಿ ಕಾಂಟೆಕ್ಟ್ ಗಳಿಗೆ ಮಾತ್ರ ಗೃಹಬಂಧನ ವಿಧಿಸಲಾಗುತ್ತದೆ. ಹೆಲ್ತ್ ಪ್ರೊಫೈಲಿಂಗ್ ಪಟ್ಟಿ ರೆಡಿ ಮಾಡಬೇಕು. ಇಡೀ ಪ್ರದೇಶದ ಜನರಲ್ಲಿ ಜ್ವರ, ಶೀತ ಕಂಡು ಬಂದ್ರೆ ಅವರ ಸಂಪೂರ್ಣ ದಾಖಲೆ ರೆಡಿ ಇಟ್ಟುಕೊಂಡಿರಬೇಕು.