Wednesday, 11th December 2024

ರಾಜಧಾನಿಯಲ್ಲಿ ಕಾಂಗ್ರೆೆಸ್ ಕಾರ್ಯಕರ್ತನ ಬರ್ಬರ ಹತ್ಯೆೆ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರಗಳಿಂದ ಕೊಚ್ಚಿ  ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆೆ ಮಾಡಿರುವ ಘಟನೆ ನಗರದ
ಯಲಹಂಕ ಬಳಿಯ  ಪಾಲನಹಳ್ಳಿಯಲ್ಲಿ ಗುರುವಾರ  ರಾತ್ರಿ ನಡೆದಿದೆ.
35 ವರ್ಷದ ಚನ್ನಕೇಶವ ಅಲಿಯಾಸ್ ಕೇಶವ ಕೊಲೆಯಾದವರು. ಗುರುವಾರ  ರಾತ್ರಿ 10.30ರ ಸುಮಾರಿಗೆ  ದುಷ್ಕರ್ಮಿಗಳ ತಂಡವೊಂದು ಸ್ವಿಫ್‌ಟ್‌ ಕಾರಿನಲ್ಲಿ ತೆರಳುತ್ತಿದ್ದ ಚನ್ನಕೇಶವ ಅವರನ್ನು ತಡೆದು ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಹಳೇ ದ್ವೇಷದ ಹಿನ್ನೆೆಲೆಯಲ್ಲಿ ಕೊಲೆ ಮಾಡಿರಬಹುದು ಎಂದು ಪೊಲೀಸರು  ಶಂಕಿಸಿದ್ದಾರೆ. ಕೊಲೆಯಾದ  ಕೇಶವ್ ಅವರು ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದು, ಮುಂಬರುವ  ಕಾರ್ಪೊರೇಟರ್ ಚುನಾವಣೆಗೆ ಸ್ಪರ್ಧಿಸಲು ಸಜ್ಜಾಗಿದ್ದರು ಎನ್ನಲಾಗಿದೆ. ಘಟನೆಗೆ ಸಂಬಂಧಿಸಿ ಯಲಹಂಕ  ಫೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.