Friday, 13th December 2024

ರಾಜ್ಯದಲ್ಲಿ ಒಂದೇ ದಿನ 19 ಪ್ರಕರಣ ಪತ್ತೆ

ವಿಶ್ವವಾಣಿ ಸುದ್ದಿಮನೆ
ಬೆಂಗಳೂರು:
ರಾಜ್ಯದಲ್ಲಿ  ಬುಧವಾರ ಒಂದೇ ದಿನ 19 ಮಂದಿಗೆ ಕರೋನಾ ಬಂದಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಸೋಂಕಿತರ ಸಂಖ್ಯೆ 279ಕ್ಕೆ ಏರಿಕೆಯಾಗಿದೆ.
ನಂಜನಗೂಡು ಫಾರ್ಮಾ ಕಂಪನಿಯ 9 ಮಂದಿ ನೌಕರರಿಗೆ ಪಾಸಿಟಿವ್ ಬಂದಿದೆ. ಬಾಗಲಕೋಟೆಯ ಮುದೋಳದಲ್ಲಿ ಕರ್ತವ್ಯದ ಹಿನ್ನೆಲೆಯಲ್ಲಿ ಮಸೀದಿಗೆ ತೆರಳಿದ್ದ ಪೊಲೀಸ್ ಪೇದೆಗೆ ಕರೋನಾ ಬಂದಿದ್ದರೆ, ಕಲಬುರಗಿಯ ಒಂದು ವರ್ಷದ ಗಂಡು ಮಗುವಿಗೆ ಪಾಸಿಟಿವ್ ಬಂದಿದೆ. ವಿಜಯಪುರ ಮತ್ತು ಬಾಗಲಕೋಟೆ, ಬೆಂಗಳೂರಿನ ಇಬ್ಬರಿಗೆ ಕರೋನಾ ಬಂದಿದೆ. ಒಟ್ಟು ಕರ್ನಾಟಕದಲ್ಲಿ 12 ಮಂದಿ ಮೃತಪಟ್ಟಿದ್ದು,  80 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
ಕರೋನಾ ವೈರಸ್‍ಗೆ ಚಿಕ್ಕಬಳ್ಳಾಪುರ ನಗರದ ನಿವಾಸಿ 65 ವರ್ಷದ ವೃದ್ಧ ಬಲಿಯಾಗಿದ್ದಾರೆ. ಈ ಜಿಲ್ಲೆಯಲ್ಲಿ ಇದು ಸೋಂಕಿನಿಂದ ಸಾವನ್ನಪ್ಪಿದ ಎರಡನೇ ಪ್ರಕರಣವಾಗಿದೆ. ಈ ಮೊದಲು ಗೌರಿಬಿದನೂರಿನ 70 ವರ್ಷದ ವೃದ್ಧೆ ಕೊರೊನಾ ವೈರಸ್‍ನಿಂದ ಮೃತಪಟ್ಟಿದ್ದರು. ಇಂದು ಚಿಕ್ಕಬಳ್ಳಾಪುರ ನಗರದ 65 ವರ್ಷದ ವೃದ್ಧ ಮೃತಪಟ್ಟಿದ್ದಾರೆ. ವೃದ್ಧ ಮೊದಲೇ ಅಸ್ತಮಾ, ಬಿಪಿ, ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಇವರನ್ನು ಏಪ್ರಿಲ್ 08ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರವಷ್ಟೇ ಇವರಿಗೆ ಕರೋನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಆದರೆ ಇಂದು ಸೋಂಕಿತ ವೃದ್ಧ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬೆಳಗಾವಿಯ  ಹಿರೇ ಬಾಗೇವಾಡಿಯ  80 ವರ್ಷದ ವೃದ್ದೆಗೆ ರೋಗಿ 224 ರಿಂದ ಕರೋನಾ ಸೋಂಕು ತಗುಲಿರುವ ದಿನವೇ ಅಂದರೆ ಬುಧವಾರ ಸಾವನ್ನಪ್ಪಿದ್ದಾಳೆ.
ಬಾಗಲಕೋಟೆ ಜಿಲ್ಲೆಯಲ್ಲಿ ಬುಧವಾರ ಮತ್ತೆ ಎರಡು ಕೋವಿಡ್-19 ಸೋಂಕು ದೃಢಪಟ್ಟಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಮುಧೋಳದ ಮದರಸಾದಲ್ಲಿ ತಪಾಸಣೆ ಕಾರ್ಯ ಕೈಗೊಂಡಿದ್ದ ಹಾಗೂ ಅಲ್ಲಿ ಕರ್ತವ್ಯಕ್ಕೆ ನಿಯೋಜಿತರಾಗಿದ್ದ 37 ವರ್ಷದ ಹೆಡ್ ಕಾನ್‌ಸ್ಟೆಬಲ್‌ಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಮದರಸಾದಲ್ಲಿ ಇತ್ತೀಚೆಗೆ ಗುಜರಾತ್ ಹಾಗೂ ದೆಹಲಿಯಿಂದ ಬಂದಿದ್ದ 25 ಮಂದಿ ಧರ್ಮಪ್ರಚಾರಕರು ತಂಗಿದ್ದರು. ಸುದ್ದಿ ತಿಳಿದು ತಹಶೀಲ್ದಾರ್ ನೇತೃತ್ವದಲ್ಲಿ ಪೊಲೀಸರ ತಂಡ ಅಲ್ಲಿಗೆ ತೆರಳಿ ತಪಾಸಣೆ ಕಾರ್ಯ ನಡೆಸಿತ್ತು. ಈ ವೇಳೆ ಲಾಠಿ ಪ್ರಹಾರ ಕೂಡ ನಡೆದಿತ್ತು. ಆ ತಂಡದಲ್ಲಿ ಹೆಡ್ ಕಾನ್‌ಸ್ಟೆಬಲ್‌ಕೂಡ ಇದ್ದರು.
ಮದರಸಾದಲ್ಲಿ ತಂಗಿದ್ದ ಗುಜರಾತ್ ಮೂಲದ ಧರ್ಮ ಪ್ರಚಾರಕರೊಬ್ಬರಿಗೆ  ಕಳೆದ ವಾರ ಕರೋನಾ ಸೋಂಕು ದೃಢಪಟ್ಟಿತ್ತು. ಬಾಗಲಕೋಟೆ ನಗರದಲ್ಲಿ ಸೋಂಕಿತ ಗುಜರಾತಿ ಕುಟುಂಬದ ಮೂವರು ಮಕ್ಕಳಿಗೆ ಟ್ಯೂಶನ್ ಹೇಳಿಕೊಡುತ್ತಿದ್ದ ಶಿಕ್ಷಕಿಯ 52 ವರ್ಷದ ಪತಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ವಿಶೇಷವೆಂದರೆ ಶಿಕ್ಷಕಿಗೆ ಸೋಂಕು ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ.
……………
ಬಾಕ್ಸ್….
ಬೆಂಗಳೂರಿನಲ್ಲಿ ಕರೋನಾ ಹಾಟ್‌ಸ್ಪಾಟ್‌ಗಳು!
ಬೊಮ್ಮನಹಳ್ಳಿ ವಲಯದಲ್ಲಿ ಸಿಂಗಸಂದ್ರ ಮತ್ತು ಬೇಗೂರು. ಮಹದೇವಪುರ ವಲಯದಲ್ಲಿ ಹಗದೂರು, ಗರುಡಾಚಾರ್ ಪಾಳ್ಯ, ವರ್ತೂರು, ಹೂಡಿ, ಹೊರಮಾವು, ರಾಮಮೂರ್ತಿ ನಗರ. ಬೆಂಗಳೂರು ಪೂರ್ವ, ವಸಂತನಗರ, ಗಂಗಾನಗರ, ಲಿಂಗರಾಜಪುರ, ಜೀವನ್‌ಬಿಮಾ ನಗರ, ರಾಧಾಕೃಷ್ಣ ದೇವಸ್ಥಾನ, ಸಿ.ವಿ.ರಾಮನ್‌ನಗರ, ರಾಮಸ್ವಾಮಿ ಪಾಳ್ಯ, ಮಾರುತಿ ಸೇವಾ ನಗರ, ಸಂಪಂಗಿ ರಾಮನಗರ. ಬೆಂಗಳೂರು ದಕ್ಷಿಣದಲ್ಲಿ: ಗಿರಿನಗರ, ಆಡುಗೋಡಿ, ಸುದ್ದಗುಂಟೆ ಪಾಳ್ಯ, ಶಾಕಂಬರಿ ನಗರ, ಜೆ.ಪಿ.ನಗರ, ಗುರ್ರಪ್ಪನಪಾಳ್ಯ, ಬಾಪೂಜಿನಗರ, ಹೊಸಹಳ್ಳಿ, ಸುಧಾಮನಗರ, ಮಡಿವಾಳ, ಅತ್ತಿಗುಪ್ಪೆ, ಕರಿಸಂದ್ರ. ಬೆಂಗಳೂರು ಪಶ್ಚಿಮದಲ್ಲಿ ಅರಮನೆ ನಗರ, ನಾಗರಬಾವಿ, ನಾಗಪುರ, ಶಿವನಗರ, ಆಜಾದ್‌ನಗರ, ಜಗಜೀವನ್‌ರಾಮ್‌ ನಗರ, ಸುಹಾಸ ನಗರ. ಯಲಹಂಕದ ಥಣಿಸಂದ್ರ, ಬ್ಯಾಟರಾಯನಪುರ. ಇವು ಡೇಂಜರ್ ಝೋನ್ ನಲ್ಲಿದೆ.
ರೋಗಿಗಳ ವಿವರ:
ರೋಗಿ 261 – 59 ವರ್ಷ, ಅನಂತಪುರದಿಂದ ಮರಳಿದ್ದ ಬೆಂಗಳೂರಿನ ವ್ಯಕ್ತಿ, ಉಸಿರಾಟದ ಸಮಸ್ಯೆ.
ರೋಗಿ 262 – ಬಾಗಲಕೋಟೆಯ 52 ವರ್ಷ ವ್ಯಕ್ತಿ ರೋಗಿ 186ರ ಸಂಪರ್ಕ.
ರೋಗಿ 263 – 39 ವರ್ಷದ ಬಾಗಲಕೋಟೆಯ ಪೊಲೀಸ್ ಪೇದೆ, ಮುದೋಳ ಮಸೀದಿಯಲ್ಲಿ ಕರ್ತವ್ಯ.
ರೋಗಿ 264 – 41 ವರ್ಷದ ವ್ಯಕ್ತಿ, ನಂಜನಗೂಡು ಫಾರ್ಮಾ ಕಂಪನಿಯ ನೌಕರ.
ರೋಗಿ 265 – 30 ವರ್ಷದ ವ್ಯಕ್ತಿ, ನಂಜನಗೂಡು ಫಾರ್ಮಾ ಕಂಪನಿಯ ನೌಕರ.
ರೋಗಿ 266 – 27 ವರ್ಷದ ವ್ಯಕ್ತಿ, ನಂಜನಗೂಡು ಫಾರ್ಮಾ ಕಂಪನಿಯ ನೌಕರ.
ರೋಗಿ 267 -35 ವರ್ಷದ ವ್ಯಕ್ತಿ, ನಂಜನಗೂಡು ಫಾರ್ಮಾ ಕಂಪನಿಯ ನೌಕರ.
ರೋಗಿ 268 – 26 ವರ್ಷದ ವ್ಯಕ್ತಿ, ನಂಜನಗೂಡು ಫಾರ್ಮಾ ಕಂಪನಿಯ ನೌಕರ.
ರೋಗಿ 269 – 23 ವರ್ಷದ ವ್ಯಕ್ತಿ, ನಂಜನಗೂಡು ಫಾರ್ಮಾ ಕಂಪನಿಯ ನೌಕರ.
ರೋಗಿ 270 – 35 ವರ್ಷದ ವ್ಯಕ್ತಿ, ನಂಜನಗೂಡು ಫಾರ್ಮಾ ಕಂಪನಿಯ ನೌಕರ.
ರೋಗಿ 271 – 28 ವರ್ಷದ ವ್ಯಕ್ತಿ, ನಂಜನಗೂಡು ಫಾರ್ಮಾ ಕಂಪನಿಯ ನೌಕರ.
ರೋಗಿ 272 – 32 ವರ್ಷದ ವ್ಯಕ್ತಿ, ನಂಜನಗೂಡು ಫಾರ್ಮಾ ಕಂಪನಿಯ ನೌಕರ.
ರೋಗಿ 273 – 72 ವರ್ಷದ ಮೈಸೂರಿನ ವೃದ್ಧ, ಉಸಿರಾಟದ ಸಮಸ್ಯೆ.
ರೋಗಿ 274 – ಕಲಬುರಗಿಯ ಒಂದು ವರ್ಷ ಗಂಡು ಮಗು, ಅನಾರೋಗ್ಯ.
 ರೋಗಿ 275 – ವಿಜಯಪುರದ 38 ವರ್ಷದ ಮಹಿಳೆ, ರೋಗಿ 221ರ ಸಂಪರ್ಕ.
ರೋಗಿ 276 – ವಿಜಯಪುರದ 25 ವರ್ಷದ ವ್ಯಕ್ತಿ, ರೋಗಿ 221ರ ಸಂಪರ್ಕ.
ರೋಗಿ 277 – ಬೆಂಗಳೂರಿನ 32 ವರ್ಷದ ಮಹಿಳೆ, ರೋಗಿ 252ರ ಸಂಪರ್ಕ.
 ರೋಗಿ 278-ವಿಜಯಪುರದ 28 ವರ್ಷದ ಮಹಿಳೆಗೆ ಕರೋನಾ ಸೋಂಕು  ಕಾಣಿಸಿಕೊಂಡಿದೆ.
 ರೋಗಿ 279- ಬೆಳಗಾವಿಯ ಹಿರೇ ಬಾಗೇವಾಡಿಯ   80 ವರ್ಷದ ವೃದ್ದೆಗೆ ರೋಗಿ 224 ರಿಂದ ಕರೋನಾ ಸೋಂಕು ತಗುಲಿದೆ. ವೃದ್ದೆ ಸಾವನ್ನಪ್ಪಿದ್ದಾಳೆ.
,……,.,
ಜಿಲ್ಲಾವಾರು ಕರೋನಾ ಸೋಂಕಿತರ ಪಟ್ಟಿ
ಜಿಲ್ಲೆ ಪ್ರಕರಣ ಗುಣಮುಖ ಸಕ್ರಿಯ ಪ್ರಕರಣ ಸಾವು
ಬೆಂಗಳೂರು ನಗರ 71 35 34  2
ಮೈಸೂರು 58 12 46  0
ಬೆಳಗಾವಿ19 0 18 1
ಕಲಬುರಗಿ17 2 12 03
ಬೀದರ್‌13 0 13 0
6.ಚಿಕ್ಕಬಳ್ಳಾಪುರ13 8 3 2
7.ಬೆಂಗಳೂರು ಗ್ರಾ.12 0 12 0
8.ಬಾಗಲಕೋಟೆ 14 4 13 01
9.ದಕ್ಷಿಣ ಕನ್ನಡ11 8 3 0
10.ಉತ್ತರ ಕನ್ನಡ 11 8 3 0
11.ಮಂಡ್ಯ 8 0 8 0
12.ವಿಜಯಪುರ 10 0 9 1
13.ಬಳ್ಳಾರಿ 6 0 6 0
14.ಧಾರವಾಡ 6 1 5 0
15.ಉಡುಪಿ 3 2 1 0
16.ದಾವಣಗೆರೆ 2 2 0 0
17.ತುಮಕೂರು 2 0 1 1
18.ಚಿತ್ರದುರ್ಗ 1 1 0  0
20.ಗದಗ 1 0 0 1
21.ಕೊಡಗು 1 1 0 0
ಒಟ್ಟು 279  80  187 12