Friday, 13th December 2024

ರಾಜ್ಯದಲ್ಲಿ ಹೆಚ್ಚಿದ ಸೋಂಕಿತರ ಸಂಖ್ಯೆ: ಲಾಕ್ ಡೌನ್ ಮುಂದುವರಿಕೆ ಸಾಧ್ಯತೆ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು : ಕರೊನಾ ಸೋಂಕು ನಿಯಂತ್ರಣಕ್ಕಾಗಿ ವಿಧಿಸಲಾಗಿರುವ ಲಾಕ್​ಡೌನ್ ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ತೆರವು ಮಾಡಲ್ಲ ಎನ್ನುವ ಸುಳಿವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿದ್ದು, ಕೋವಿಡ್ ಹಾಟ್ ಸ್ಪಾಟ್ ಆಗಿರುವ ಜಿಲ್ಲೆಗಳಲ್ಲಿ ಮತ್ತೆ 14 ದಿನದ ಲಾಕ್​ಡೌನ್ ಮುಂದುವರೆಸುವ ಸಾದ್ಯತೆ ಹೆಚ್ಚಾಗಿದೆ.

ಏಪ್ರಿಲ್ 14ರ ನಂತರ ಕರ್ನಾಟಕ ರಾಜ್ಯದಲ್ಲಿ ಸೇರಿದಂತೆ ದೇಶಾದ್ಯಂತ ಲಾಕ್‌ಡೌನ್‌ ಹಂತ ಹಂತವಾಗಿ ತೆರವುಗೊಳ್ಳುತ್ತೆ ಎಂಬ ನಿರೀಕ್ಷೆ ಮಾಡಲಾಗುತ್ತಿದೆ. ಈ ಬಗ್ಗೆ ಇದುವರೆಗೂ ಕೇಂದ್ರ ಸರಕಾರ ಆಗಲಿ ಅಥವಾ ರಾಜ್ಯ ಸರಕಾರಿ ಆಗಲಿ ಸ್ಪಷ್ಟ ಮಾಹಿತಿ ನೀಡಿರಲಿಲ್ಲ.ಲಾಕ್​ಡೌನ್ ಏಪ್ರಿಲ್ 14ರಂದು ವಾಪಸ್ ಪಡೆದರೆ ಇಷ್ಟು ದಿನದ ಶ್ರಮ ವ್ಯರ್ಥವಾಗಲಿದೆ.

ಹೊಳೆಯಲ್ಲಿ ಹುಣಿಸೇಹಣ್ಣು ತೊಳೆದಂತಾಗಲಿದೆ ಎನ್ನುವ ನಿಲುವಿಗೆ ಬಂದಿರುವ ಸಿಎಂ,, ಹಂತ ಹಂತವಾಗಿ ಲಾಕ್​ಡೌನ್ ಸಡಿಲಿಕೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.ಹಾಗಾಗಿ ಏಪ್ರಿಲ್ 14ಕ್ಕೆ ಲಾಕ್​ಡೌನ್ ಮುಗಿಯಲಿದೆ ಎನ್ನುವ ನಿರೀಕ್ಷೆಯಲ್ಲಿರುವ ರಾಜ್ಯದ ಜನರು ಮತ್ತೊಂದಷ್ಟು ದಿನ ಮನೆಯಲ್ಲೇ ಇರಲು ಮಾನಸಿಕವಾಗಿ ಸಿದ್ಧರಾದರೆ ಒಳಿತು ಎನ್ನಲಾಗುತ್ತಿದೆ.

ಕೋವಿಡ್ ಹಾಟ್ ಸ್ಪಾಟ್ ಆಗಿರುವ ಜಿಲ್ಲೆಗಳಲ್ಲಿ ಮತ್ತೆ 14 ದಿನದ ಲಾಕ್​ಡೌನ್ ಮುಂದುವರೆಸುವ ಸಾದ್ಯತೆ ಹೆಚ್ಚಾಗಿದೆ.ಲಾಕ್​ಡೌನ್ ಏಪ್ರಿಲ್ 14ರಂದು ವಾಪಸ್ ಪಡೆದರೆ ಇಷ್ಟು ದಿನದ ಶ್ರಮ ವ್ಯರ್ಥವಾಗಲಿದೆ. ಹೊಳೆಯಲ್ಲಿ ಹುಣಿಸೇಹಣ್ಣು ತೊಳೆದಂತಾಗಲಿದೆ ಎನ್ನುವ ನಿಲುವಿಗೆ ಬಂದಿರುವ ಸಿಎಂ, ಹಂತ ಹಂತವಾಗಿ ಲಾಕ್​ಡೌನ್ ಸಡಿಲಿಕೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಹಾಗಾಗಿ ಏಪ್ರಿಲ್ 14ಕ್ಕೆ ಲಾಕ್​ಡೌನ್ ಮುಗಿಯಲಿದೆ ಎನ್ನುವ ನಿರೀಕ್ಷೆಯಲ್ಲಿರುವ ರಾಜ್ಯದ ಜನರು ಮತ್ತೊಂದಷ್ಟು ದಿನ ಮನೆಯಲ್ಲೇ ಇರಲು ಮಾನಸಿಕವಾಗಿ ಸಿದ್ಧರಾದರೆ ಒಳಿತು ಎನ್ನಲಾಗುತ್ತಿದೆ. ಕೊರೊನಾ ವೈರಸ್‌ ಹರಡುವಿಕೆ ನಿಯಂತ್ರಿಸಲು ಲಾಕ್‌ಡೌನ್‌ ಮಾಡಿದ್ದರೂ ಜನರು ಅನಗತ್ಯ ಓಡಾಟವನ್ನು ನಿಲ್ಲಿಸುತ್ತಿಲ್ಲ. ಮಂಗಳವಾರದಿಂದ ಲಾಕ್ ಡೌನ್ ನಿಯಮ ಇನ್ನಷ್ಟು ಬಿಗಿಗೊಳಿಸುತ್ತೇವೆ.

ಬಂದೋಬಸ್ತ್ ಹೆಚ್ಚಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆ ಎಂದು ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿದ್ದಾರೆ.ಈ ಹಿಂದೆಯೂ ಸಿಎಂ ಲಾಕ್‌ಡೌನ್‌ ಕುರಿತು ಜನರಿಗೆ ಎಚ್ಚರಿಕೆ ನೀಡಿದ್ದರು. ಅನಗತ್ಯವಾಗಿ ಓಡಾಡುವುದನ್ನು ನಿಲ್ಲಿಸಿ, ಲಾಕ್‌ಡೌನ್‌ಗೆ ನೀವು ಹೇಗೆ ನಡೆದುಕೊಳ್ಳುತ್ತೀರಾ ಎಂಬುದನ್ನು ನೋಡಿ, ಮುಂದಿನ ದಿನಗಳಲ್ಲಿ ಮುಂದುವರಿಸಬೇಕಾ ಅಥವಾ ತೆರೆವುಗೊಳಿಸಬೇಕಾ ಎಂದು ನಿರ್ಧರಿಸಲಾಗುತ್ತೆ ಎಂದಿದ್ದರು.

ಸದ್ಯದ ಪರಿಸ್ಥಿತಿ ನೋಡಿದ್ರೆ, ಲಾಕ್‌ಡೌನ್‌ ಏಪ್ರಿಲ್ 14ರ ನಂತರವೂ ಮತ್ತಷ್ಟು ದಿನಗಳು ಮುಂದುವರಿಯ ಎಲ್ಲ ಲಕ್ಷಣಗಳು ಕಾಣುತ್ತಿದೆ. ಇದಕ್ಕೆ ರಾಜ್ಯ ಸರ್ಕಾರವೂ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂಬುದನ್ನು ಯಡಿಯೂರಪ್ಪ ಅವರ ಈ ನಿರ್ಧಾರ ಗಮನಿಸಿದ್ರೆ ತಿಳಿಯುತ್ತಿದೆ.

ದೇಶದಲ್ಲಿ ಕರೊನಾ ಸೋಂಕು ಹರಡುವಿಕೆ ಹೆಚ್ಚಾಗುತ್ತಿರುವ ಕಾರಣ, ಲಾಕ್‌ಡೌನ್‌ ದಿನಗಳನ್ನು ಮತ್ತಷ್ಟು ದಿನ ಮುಂದುವರಿಸಬೇಕು ಎಂದು ತೆಲಂಗಾಣ ಮುಖ್ಯಮಂತ್ರಿ ಕೆಸಿ ಚಂದ್ರಶೇಖರ್ ರಾವ್, ಪ್ರಧಾನಿ ಮೋದಿಗೆ ಮನವಿ ಮಾಡಿದ್ದಾರೆ. ಇನ್ನು ಅಂಕಿ ಅಂಶಗಳನ್ನು ನೋಡುತ್ತಿದ್ದರೂ ಲಾಕ್‌ಡೌನ್‌ ಮುಂದುವರಿಸುವುದು ಅಗತ್ಯ ಎಂದು ತಜ್ಞರು
ಅಭಿಪ್ರಾಯಪಟ್ಟಿದ್ದಾರೆ.