Wednesday, 11th December 2024

ಲಾಕ್ ಡೌನ್ ನಡುವೆಯೂ ಸರಣಿ ಕಳ್ಳತನ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು:
ಲಾಕ್ ಡೌನ್ ನಡುವೆಯೂ ನಗರದ 15ಕ್ಕೂ ಹೆಚ್ಚು ಮನೆಗಳಲ್ಲಿ ಸರಣಿ ಕಳ್ಳತನ ನಡೆದಿದೆ.

ಲಾಕ್ ಡೌನ್ ಅನ್ನೇ ಬಂಡವಾಳ ಮಾಡಿಕೊಂಡ ಖದೀಮರು ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಕನ್ನ ಹಾಕುತ್ತಿದ್ದಾರೆ. ಲಾಕ್ ಡೌನ್ ನಿಂದ ಮನೆಮಾಲೀಕರು ಊರಿಗೆ ತೆರಳಿದ್ದಾರೆ.
ಖಾಲಿ ಇರುವ ಮನೆಗಳನ್ನು ಗುರುತಿಸಿಕೊಳ್ಳುತ್ತಿದ್ದ ಖದೀಮರು ರಾತ್ರಿ ವೇಳೆ ಕರಾಮತ್ತು ಪ್ರದರ್ಶಿಸುತ್ತಿದ್ದಾರೆ. ರಾತ್ರೋ ರಾತ್ರಿ ಬಂದು ಹಣ ಮತ್ತು ಚಿನ್ನಾಭರಣವನ್ನು ದೋಚಿ ಪರಾರಿಯಾಗುತ್ತಿದ್ದಾರೆ.

ಮಂಗಳವಾರ ರಾತ್ರಿ ಟಿ.ದಾಸರಹಳ್ಳಿ ಮಾರುತಿ ಬಡಾವಣೆಯಲ್ಲಿ ಮಳೆ ಬಂದ ಸಮಯದಲ್ಲೂ ಮನೆಯೊಂದಕ್ಕೆ ಕನ್ನ ಹಾಕಲಾಗಿದ್ದು,30 ರಿಂದ 40 ಲಕ್ಷಕ್ಕೂ ಅಧಿಕ ಮೌಲ್ಯದ ಹಣ ಹಾಗೂ ಚಿನ್ನಾಭರಣವನ್ನು ಕದ್ದು ಪರಾರಿಯಾಗಿದ್ದಾರೆ.