Friday, 13th December 2024

ವಾರ್ಡ್‌ಗೊಂದು ಜ್ವರ ತಪಾಸಣಾ ಕೇಂದ್ರ

ಬೆಂಗಳೂರು:
 ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್‌ 19 ವೈರಸ್‌ ಹಾವಳಿ ತೀವ್ರಗೊಂಡಿದೆ. ಹೀಗಾಗಿ ಪ್ರತಿ ವಾರ್ಡ್‌ಗೊಂದು ಜ್ವರ ತಪಾಸಣಾ ಕೇಂದ್ರಗಳನ್ನು ರಾಜ್ಯ ಸರಕಾರ ತೆರೆಯುತ್ತಿದೆ.
ಇದರ ಭಾಗವಾಗಿಯೇ ನಗರದಲ್ಲಿ ಮತ್ತೆ 60 ಫೀವರ್​​ ಕ್ಲಿನಿಕ್ಸ್​​​ ಶುರು ಮಾಡಲಾಗಿದೆ. ಈಗಾಗಲೇ 50 ಫೀವರ್​​​ ಕ್ಲಿನಿಕ್​​​ಗಳು ಇವೆ. ಇದೀಗ ಖಾಸಗಿ ಆಸ್ಪತ್ರೆ ಸೇರಿದಂತೆ ಮೆಡಿಕಲ್​​​ ಕಾಲೇಜುಗಳಲ್ಲಿಯೂ ಮತ್ತೆ 60 ಫೀವರ್​​ ಕ್ಲಿನಿಕ್ಸ್​​ ಸ್ಥಾಪಿಸಿದ ಪರಿಣಾಮ ಇದರ ಸಂಖ್ಯೆ 110 ಆಗಿದೆ.
ಇನ್ನು, ನಗರದಾದ್ಯಂತ ಜ್ವರ ಚಿಕಿತ್ಸಾಲಯಗಳನ್ನು 24*7 ಕಾರ್ಯನಿರ್ವಹಣೆ ಮಾಡಲಿವೆ. ಕೊರೋನಾ ಶಂಕಿತರಿಗೆ ಜ್ವರ ತಪಾಸಣಾ ಕೇಂದ್ರದಲ್ಲಿ ಸ್ವಾಬ್ ಶೇಖರಣೆ ಮಾಡಲಾಗುವುದು. ನಂತರ ಅದನ್ನು ಕೋವಿಡ್-19 ಟೆಸ್ಟಿಂಗ್ ಲ್ಯಾಬ್​ಗೆ ಕಳಿಸಿಕೊಡಲಾಗುವುದು. ಇದಾದ ಬಳಿಕ ಶಂಕಿತ ರೋಗಿಯ ಕೋವಿಡ್-19 ರಿಪೋರ್ಟ್​ ಬರಲಿದೆ.
ರಾಜ್ಯ ಸರಕಾರ,ವೂ​ ಸ್ವಾಬ್ ಶೇಖರಣೆ ಮತ್ತು ಅದನ್ನು ಲ್ಯಾಬ್​​ಗೆ ತಲುಪಿಸುವ ಸಲುವಾಗಿ ರೋಗಿಯಿಂದ ಗರಿಷ್ಠ 350 ರೂಪಾಯಿ ಪಡೆಯಬಹುದು. ಜ್ವರ ಚಿಕಿತ್ಸಾಲಯಕ್ಕೆ ಜಿಲ್ಲೆಯ ಸಮುದಾಯ ಕೇಂದ್ರಗಳನ್ನು ಶೇ.100ರಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಶೇ.50ರಷ್ಟು ಮೀಸಲಿಟ್ಟಿವೆ. ಇಲ್ಲಿ ಈ ಎಲ್ಲಾ ಟೆಸ್ಟ್​ಗಳನ್ನು ಮಾಡಲಾಗುತ್ತದೆ.
ಕ್ಲಿನಿಕ್​ಗಳು ಬೆಳಗ್ಗೆ 9 ಗಂಟೆಯಿಂದ ಸಂಜೆ 4.30ರವರೆಗೆ ಕಾರ್ಯನಿರ್ವಹಿಸುತ್ತವೆ. ಫೀವರ್ ಕ್ಲಿನಿಕ್​ಗಳಲ್ಲಿ ಜ್ವರ, ಕಫ ಹಾಗೂ ಸ್ಕ್ರೀನಿಂಗ್ ಟೆಸ್ಟ್​​ ಮಾಡಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಒಂದೊಂದು ಕ್ಲಿನಿಕ್​ನಲ್ಲೂ ವೈದ್ಯಾಧಿಕಾರಿ, ಶುಶ್ರೂಶಕಿ, ಹಿರಿಯ ಹಾಗೂ ಕಿರಿಯ ಆರೋಗ್ಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.
ಸ್ಯಾನಿಟೈಸರ್, ಒಬ್ಬರಿಂದ ಒಬ್ಬರು ಸಾಕಷ್ಟು ದೂರದಲ್ಲಿ ನಿಲ್ಲುವುದು, ಮುಂತಾದ ಜಾಗರೂಕ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಕ್ಲಿನಿಕ್​ಗೆ ಬರುವ ರೋಗಿಗಳಿಗೆ ಜ್ವರ ಇದ್ದಾಗ ಅವರಿಗೆ ಅಗತ್ಯವಾದ ಪ್ಯಾರಾಸಿಟಮಾಲ್, ಓಆರ್​​​ಎಸ್ ಮತ್ತು ನೆಗಡಿಯ ಔಷಧಗಳನ್ನು ಸಿದ್ದ ಮಾಡಿಟ್ಟುಕೊಳ್ಳಲಾಗಿದೆ. ಸಾಮಾನ್ಯ ಜ್ವರವಾದರೆ ಈ ಔಷಧಗಳನ್ನು ನೀಡಿ ಸ್ವಲ್ಪ ಸಮಯ ಕಾದು ನೋಡುವಂತೆ ತಿಳಿಸಲಾಗುತ್ತದೆ. ಪ್ರತಿಯೊಬ್ಬ ರೋಗಿಯ ಸಂಪೂರ್ಣ ವಿವರ ಪಡೆಯಲಾಗುತ್ತದೆ.