Saturday, 14th December 2024

ವಿಧಾನಸೌಧದ ನೌಕರ ಕರೋನಾಕ್ಕೆೆ ಬಲಿ

 

ಬೆಂಗಳೂರು

ಕೆಲದಿನಗಳ ಹಿಂದಷ್ಟೇ ವಿಧಾನಸೌಧಕ್ಕೆೆ ಕಾಲಿಟ್ಟಿಿದ್ದ ಕರೋನಾ ಇದೀಗ, ವಿಧಾನಸೌಧದಲ್ಲಿ ಕಾರ್ಯನಿರ್ವಹಿಸುತ್ತಿಿದ್ದ ನೌಕರರನ್ನು ಬಲಿ ತಗೆದುಕೊಂಡಿದೆ.

ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿಿದ್ದ 36 ವರ್ಷದ ವ್ಯಕ್ತಿಿ ಸೋಮವಾರ ರಾತ್ರಿಿ ಕರೋನಾಕ್ಕೆೆ ಬಲಿಯಾಗಿದ್ದಾಾರೆ. ವ್ಯಕ್ತಿಿ ಮೈಸೂರಿನ ಕರೋನಾ ಆಸ್ಪತ್ರೆೆಯಲ್ಲಿ ಚಿಕಿತ್ಸೆೆ ಪಡೆಯುತ್ತಿಿದ್ದರು. ಆದರೆ ಚಿಕಿತ್ಸೆೆ ಫಲಕಾರಿಯಾಗದೆ ಮೈಸೂರಿನ ಕೋವಿಡ್ ಆಸ್ಪತ್ರೆೆಯಲ್ಲಿ ಮೃತಪಟ್ಟಿಿದ್ದಾರೆ ಎಂದು ತಿಳಿದುಬಂದಿದೆ.

ಈ ನೌಕರನಿಗೆ ಕರೋನಾ ಸೋಂಕು ಕಾಣಿಸಿಕೊಂಡ ಹಿನ್ನೆೆಲೆಯಲ್ಲಿ ರಜೆ ತೆಗೆದುಕೊಳ್ಳಲು ಸೂಚನೆ ಕೊಡಲಾಗಿತ್ತು. ಅದರಂತೆ ಆತ ಮೈಸೂರಿಗೆ ತೆರಳಿ ಕೋವಿಡ್-19 ನಿಗದಿತ ಆಸ್ಪತ್ರೆೆಯಲ್ಲಿ ಚಿಕಿತ್ಸೆೆ ಪಡೆಯುತ್ತಿಿದ್ದರು. ಇದೀಗ ಸೋಂಕಿತ ವ್ಯಕ್ತಿಿ ಸಾವನ್ನಪ್ಪಿಿರುವುದರಿಂದ ಆತನ ಟ್ರಾಾವೆಲ್ ಹಿಸ್ಟರಿ(ಪ್ರವಾಸದ ಹಿನ್ನೆೆಲೆ)ಯನ್ನು ಪತ್ತೆೆಹಚ್ಚಲು ಅಧಿಕಾರಿಗಳು ಮುಂದಾಗಿದ್ದಾರೆ.