Friday, 13th December 2024

ವೈದ್ಯಕೀಯ ಸಿಬ್ಬಂದಿಗಳ ಮೇಲೆ ಹಲ್ಲೆ ಪ್ರಕರಣ ಎರಡು ದಿನಗಳ ವಿನೂತನ ಪ್ರತಿಭಟನೆ ಐಎಂಎ ಕರೆ.

ಬೆಂಗಳೂರು:
ಬೆಂಗಳೂರಿನ‌ ಪಾದರಾಯನಪುರದ ಘಟನೆಯನ್ನು ಭಾರತೀಯ ವೈದ್ಯಕೀಯ ಸಂಘ ತೀವ್ರವಾಗಿ ಖಂಡಸಿದ್ದು, ವಿನೂತನ ಪ್ರತಿಭಟನೆಗೆ ಮುಂದಾಗಿದೆ.
ಈ ಕುರಿತು ಮಾಹಿತಿ ನೀಡಿದ ಐಎಂಎ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಶ್ರೀನಿವಾಸ ಅವರು , ವೈದ್ಯರು, ವೈದ್ಯಕೀಯ ಸಿಬ್ಬಂದಿ ಮತ್ತು ಆಸ್ಪತ್ರೆಗಳ ಮೇಲೆ ಹಲ್ಲೆಗಳು ನಡೆಯುತ್ತಲೆ ಇವೆ. ದೇಶಾದ್ಯಂತ  ಈ ಹಲ್ಲೆ ಪ್ರಕರಣಗಳು ಹೆಚ್ಚುತ್ತಿರುವುದು ನಿಜಕ್ಕೂ ಕಳವಳಕಾರಿ ಹಾಗೂ ನಾಗರೀಕ ಸಮಾಜಕ್ಕೆ ಶೊಭೆ ತರುವಂತಹುದ್ದಲ್ಲ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಶಾಖೆಯು ನಡೆಸಲು‌ ನಿರ್ಧರಿಸಿರುವ ಮೌಲ್ಯಯುತ ವಿನೂತನ ಪ್ರತಿಭಟನೆಯನ್ನು ರಾಜ್ಯದ ಐಎಂಎಯು ಬೆಂಬಲಿಸುತ್ತಿದೆ. ಹೀಗಾಗಿ, ಕರ್ನಾಟದ ಎಲ್ಲಾ ಸದಸ್ಯರುಗಳು ಭಾಗವಹಿಸಿ ಈ ರೀತಿಯ ಹಲ್ಲೆ ನಡೆಸುವವರನ್ನು ಕಠಿಣವಾಗಿ ಶಿಕ್ಷಿಸುವ ಕಾನೂನು ತರಬೇಕೆಂದು ಕೇಂದ್ರ ಸರರ್ಕಾರವನ್ನು  ಒತ್ತಾಯಿಸುತ್ತೇನೆ ಎಂದರು‌.
ದೇಶಕ್ಕೆ ಬಿಳಿಯ ಸಂಕೇತದ ಎಚ್ಚರಿಕೆಯಾಗಿ ಮೊದಲು ಏಪ್ರಿಲ್ 22 ರಂದು ಬಿಳಿಯ ಏಪ್ರಾನ್ ಧರಿಸಿ  ರಾತ್ರಿ 9ಗಂಟೆಗೆ ಆಸ್ಪತ್ರೆಯ ಮುಂದೆ ದೀಪ ಬೆಳಗಿಸುವುದು. 23 ರಂದು ಕಪ್ಪು ಪಟ್ಟಿಧರಿಸಿ ಕೆಲಸ ಮಾಡಿ ದಿನಾಚರಣೆ ಆಚರಿಸಲು ನಿರ್ಧರಿಸಲಾಗಿದೆ‌ ಎಂದು ತಿಳಿಸಿದ್ದಾರೆ.