Wednesday, 11th December 2024

ಶ್ರೀರಾಮುಲುರಿಂದ ಸಾಮಾಜಿಕ ಅಂತರ ಉಲ್ಲಂಘನೆ: ರಾಜೀನಾಮೆಗೆ ಕಾಂಗ್ರೆೆಸ್ ಆಗ್ರಹ

ವಿಶ್ವವಾಣಿ ಸುದ್ದಿಮನೆ
ಬೆಂಗಳೂರು
ಆರೋಗ್ಯ ಸಚಿವ ಬಿ.ಶ್ರೀರಾಮುಲು ಸಾಮಾಜಿಕ ಅಂತರ ಉಲ್ಲಂಸಿರುವುದರಿಂದ ಅವರು ತಮ್ಮ ಸಚಿವ ಸ್ಥಾಾನಕ್ಕೆೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆೆಸ್ ಆಗ್ರಹಿಸಿದೆ.
ಜನ ಸಾಮಾನ್ಯರು ಹೆಚ್ಚಿಿನ ಜನ  ಸೇರಿಸಿ ಮದುವೆ ಮಾಡಿದರೆ ಪ್ರಕರಣ ದಾಖಲಿಸುತ್ತಾಾರೆ. ಊರಿಗೆ ಯಾರಾದರೂ ಹೋದರೆ ಕ್ವಾಾರಂಟೈನ್  ಮಾಡುತ್ತಾಾರೆ. ಮಾಜಿ ಮುಖ್ಯಮಂತ್ರಿಿಗಳು ಮದುವೆ ಮಾಡಿದರೆ ಹೆಚ್ಚು ಜನ ಸೇರಿಸಿದ್ದರು ಎಂದು  ಪ್ರಕರಣ
ದಾಖಲಿಸುತ್ತಾಾರೆ. ಆದರೆ ಅವರದ್ದೇ ಸರಕಾರದ ಸಚಿವರು ಸಾಮಾಜಿಕ ಅಂತರ  ಉಲ್ಲಂಸಿ ಸಾವಿರಾರು ಜನರನ್ನು ಸೇರಿಸಿ ನದಿಗೆ ಬಾಗೀನ ಅರ್ಪಿಸಿದರೆ ಏನೂ ಕ್ರಮ  ಇಲ್ಲವೇ? ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಕೇಳಿದ್ದಾರೆ.
ಚಿತ್ರದುರ್ಗದ ನದಿಗೆ  ಸಚಿವ ಶ್ರೀರಾಮುಲು ಬಾಗೀನ ಅರ್ಪಣೆ ವಿಚಾರವಾಗಿ ಕೆಪಿಸಿಸಿ ಕಚೇರಿಯಲ್ಲಿ  ಸುದ್ದಿಗೋಷ್ಠಿಿಯಲ್ಲಿ ಪ್ರತಿಕ್ರಿಿಯಿಸಿದ ಉಗ್ರಪ್ಪ, ಕರೋನಾ ಹಿನ್ನೆೆಲೆಯಲ್ಲಿ ಸರಕಾರದಿಂದ  ಬಿಡುಗಡೆಯಾಗಿರುವ 48 ಮಾರ್ಗಸೂಚಿ
ಪಾಲನೆಯಾಗಿದೆಯೇ?ಸರಕಾರದ ಪ್ರತಿನಿಧಿಯಾಗಿರುವ  ಆರೋಗ್ಯ ಸಚಿವ ಶ್ರೀರಾಮುಲು ಸಾವಿರಾರು ಮಂದಿ ಸೇರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ  ಚಿತ್ರದುರ್ಗದ ವೇದಾವತಿ ನದಿಗೆ ಬಾಗೀನ ಅರ್ಪಿಸಿರುವುದು ಅವರದ್ದೇ ಸರಕಾರದ ಮಾರ್ಗಸೂಚಿ  ಉಲ್ಲಂಘನೆಯಲ್ಲವೇ? ಎಂದು ಪ್ರಶ್ನಿಿಸಿದರು.
ಚಿತ್ರದುರ್ಗ ಜಿಲ್ಲಾಡಳಿತ, ತಾಲೂಕಾಡಳಿತ ಏನು ಮಾಡುತ್ತಿಿವೆ ಎಂದು ಪ್ರಶ್ನಿಿಸಿದರು.
ಭಾರೀ ಗಾತ್ರದ ಸೇಬಿನ ಹಾರ ನೋಡಿದರೆ ಪೂರ್ವತಯಾರಿಯಿಂದಲೇ ಈ ಕಾರ್ಯಕ್ರಮ ನಡೆದಿರುವುದು  ಸ್ಪಷ್ಟವಾಗುತ್ತದೆ. ಶ್ರೀರಾಮುಲು ಸಂಪೂರ್ಣ ಕಾನೂನು ಉಲ್ಲಂಸಿದ್ದಾರೆ. ಶ್ರೀರಾಮುಲು  ವಿರುದ್ಧ ಪ್ರಕರಣ ದಾಖಲಿಸಬೇಕು. ಈ ಬಗ್ಗೆೆ ಜೈಲುಶಿಕ್ಷೆ, ದಂಡ ವಿಧಿಸಬೇಕು ಎಂದು  ಆಗ್ರಹಿಸಿದರು.
ಮಾ.9 ರಂದು ರಾಜ್ಯದಲ್ಲಿ ಒಂದೇ ಒಂದು ಕರೊನಾ ಪ್ರಕರಣ ದಾಖಲಾಗಿತ್ತು. ಆದರೀಗ ಮೂರುವರೆ ಸಾವಿರ ಕೇಸ್ ರಾಜ್ಯದಲ್ಲಿವೆ.  ಲಾಕ್ ಡೌನ್ ಇದ್ದರೂ ಇಷ್ಟೊೊಂದು ಕೇಸ್ ಹೇಗೆ? ಒಬ್ಬರಿಗೊಂದು ಕಾನೂನು ಇದೆಯಾ? ಎಂದು ಉಗ್ರಪ್ಪ ಪ್ರಶ್ನಿಿಸಿದರು.
ಶ್ರೀರಾಮುಲು ಸಮಾಜಕ್ಕೆೆ ಮಾರಕವಾದ ಕೆಲಸ ಮಾಡಿದ್ದಾರೆ. ಆರೋಗ್ಯಸಚಿವರಿಗೆ ಬದ್ಧತೆ ಇರುವುದೇ ಆದರೆ ಕ್ಷಮೆಯಾಚಿಸಬೇಕು.  ನೈತಿಕ  ಹೊಣೆಯನ್ನಹೊತ್ತು ಸಚಿವ ಸ್ಥಾಾನಕ್ಕೆೆ ರಾಜೀನಾಮೆ ನೀಡಬೇಕು.ಇಲ್ಲವೇ ಮುಖ್ಯಮಂತ್ರಿಿಗಳು ರಾಮುಲುರಿಂದ ರಾಜೀನಾಮೆ ಪಡೆದುಕೊಳ್ಳಬೇಕು ಎಂದು ಉಗ್ರಪ್ಪ ಒತ್ತಾಾಯಿಸಿದರು.
ಬಿಜೆಪಿ  ಶಾಸಕರು ಕಾಂಗ್ರೆೆಸ್ ಸಂಪರ್ಕದಲ್ಲಿ ಇದ್ದಾರೆ ಎಂಬ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆಗೆ  ಪ್ರತಿಕ್ರಿಿಯಿಸಿದ  ಉಗ್ರಪ್ಪ, ರಮೇಶ್ ಜಾರಕಿಹೊಳಿ ತಮ್ಮ ಸಹೋದರ. ತಾವಿಬ್ಬರೂ ಒಂದೇ  ಗೋತ್ರಕ್ಕೆೆ ಸೇರಿದವರು. ರಮೇಶ್ ಉಪಮುಖ್ಯ
ಮಂತ್ರಿಿಯಾಗಬೇಕೆಂದು ಕನಸು  ಕಂಡಿದ್ದರು. ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣವಿದೆ. ಅದಕ್ಕೆೆ ಅವರು  ನಮ್ಮ ಸಂಪರ್ಕದಲ್ಲಿದ್ದಾರೆ. ರಮೇಶ್ ಸೇರಿದಂತೆ ಇನ್ನೂ ಕೆಲವರು ನಮ್ಮ  ಸಂಪರ್ಕದಲ್ಲಿದ್ದಾರೆ. ನಮ್ಮ ಒಬ್ಬರೇ ಒಬ್ಬ ಶಾಸಕರು ಅವರ ಸಂಪರ್ಕದಲ್ಲಿದ್ದರೆ ತಿಳಿಸಲಿ  ಎಂದು ಬಹಿರಂಗ ಸವಾಲು ಹಾಕಿದರು.
ಬಿಜೆಪಿಯವರು ಯಾರು ಯಾರು ನಮ್ಮ ಸಂಪರ್ಕದಲ್ಲಿದ್ದಾರೆ  ಎನ್ನುವುದನ್ನು ಬಹಿರಂಗ ಪಡಿಸುತ್ತೇನೆ. ಕಾಂಗ್ರೆೆಸ್‌ನಿಂದ ಬಿಜೆಪಿಗೆ ಹೋದವರು ಬೇರೆಬೇರೆ  ದಾರಿ ಹುಡುಕುತ್ತಿಿದ್ದಾರೆ. ಸೂಕ್ತ ಸಂದರ್ಭದಲ್ಲಿ ಈ ಬಗ್ಗೆೆ ಬಹಿರಂಗಪಡಿಸುತ್ತೇನೆ ಎಂದರು.