Saturday, 20th April 2024

ಸಂಕಷ್ಟದಲ್ಲಿರುವ ಅರ್ಚಕರ ಕುಟುಂಬಕ್ಕೆ ನೆರವು ನೀಡಲು ಮನವಿ

ಬೆಂಗಳೂರು:

ಕರೋನಾ ವೈರಸ್ ಹಿನ್ನೆಲೆಯಲ್ಲಿ ದೇಶದಾಧ್ಯಂತ ಲಾಕ್‍ಡೌನ್ ಮಾಡಲಾಗಿದೆ.  ಇದರಿಂದ ರಾಜ್ಯದಲ್ಲಿರುವ ಮುಜರಾಯಿ ಇಲಾಖೆಗೆ ಒಳಪಡದ ದೇವಸ್ಥಾನಗಳ ಅರ್ಚಕರು ಮತ್ತು ಪುರೋಹಿತರಿಗೆ ಯಾವುದೇ ಆದಾಯವಿಲ್ಲದೆ ಜೀವನ ಸಾಗಿಸುವುದು ಕಷ್ಟಕರವಾಗಿದೆ ಅಗತ್ಯ ನೆರವು ನೀಡುವಂತೆ ಮುಖ್ಯಮಂತ್ರಿ ಬಿಎಸ್. ಯಡಿಯೂಪ್ಪ ಅವರಿಗೆ  ವೈಧಿಕ ಚಾರಿಟಬಲ್ ಟ್ರಸ್ಟ್ ಶ್ರೀ ಮಹಾಲಕ್ಷ್ಮಿ ಗುರುಕುಲ ಸಂಸ್ಥಾಪಕ ಅಧ್ಯಕ್ಷರಾದ ಡಾ. ಕೆ. ಎನ್. ರಾಜಕುಮಾರ್ ಶಾಸ್ತ್ರಿ ಅವರು ಮನವಿ ಮಾಡಿದ್ದಾರೆ.

ಸಣ್ಣ ಪುಟ್ಟ ದೇವಸ್ಥಾನಗಳಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುವ ಹಾಗೂ ಭಕ್ತ ಮನೆಗಳಲ್ಲಿ ನಿತ್ಯ ಪೂಜಾ ಕಾಯಕವನ್ನು ಮಾಡುತ್ತ ಕಷ್ಟದಲ್ಲಿ ಜೀವನವನ್ನು ಸಾಗಿಸುತ್ತಿದ್ದೆವು. ನಗರ ಪ್ರದೇಶ ಹಾಗೂ ಹಳ್ಳಿಗಾಡುಗಳಲ್ಲಿ ಮನೆ ಬಾಡಿಗೆ, ನೀರು, ವಿದ್ಯುತ್ ಬಿಲ್, ಮಕ್ಕಳ ವಿದ್ಯಾಭ್ಯಾಸ ಇತರೆ ಖರ್ಚು ವೆಚ್ಚಗಳಿಗೆ ಭಕ್ತಾಧಿಗಳು ನೀಡುವ ಕಾಣಿಕೆಗಳಿಂದ  ಸಾಮಾನ್ಯ ದಿನಗಳಲ್ಲೇ ಜೀವನ ಸಾಗಿಸುವುದು ಕಷ್ಟ ಸಾಧ್ಯ.

ಈಗ ಕರೋನಾ ವೈರಸ್ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಸಹ ಲಾಕ್‍ಡೌನ್ ಮಾಡಲಾಗಿದೆ. ಹಾಗಾಗಿ ಬಡ ಅರ್ಚಕರು, ಪುರೋಹಿತರು, ಬ್ರಾಹ್ಮಣರು ಜೀವನ ಸಾಗಿಸಲು ಕಷ್ಟವಾಗಿ ಕಂಗಾಲಾಗಿದ್ದಾರೆ.
ಮುಜರಾಯಿ ಇಲಾಖೆ ಒಳಪಟ್ಟಿರುವ ದೇವಸ್ಥಾನಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಲವು ಅರ್ಚಕರು ಮತ್ತು ಪುರೋಹಿತರಿಗೆ ಮಾಸಿಕ ಧನ ಸರಕಾರ ಕೊಡುತ್ತಿಲ್ಲ. ಇಂಥವರಿಗೂ ಜೀವನ ಸಾಗಿಸುವುದು ಕಷ್ಟಕರವಾಗಿದೆ.

ಹಾಗಾಗಿ ಹತ್ತಾರು ವರ್ಷಗಳ ಮೇಲೆ ಸೇವೆಯನ್ನು ಸಲ್ಲಿಸಿರುವ ಬಡ ಪುರೋಹಿತರಿಗೆ, ಅರ್ಚಕರಿಗೆ ಸರಕಾರದಿಂದ ಏನಾದರು ನೆರವು, ಸೌಲಭ್ಯಗಳನ್ನು ಒದಗಿಸಬೇಕೆಂದು ಕರ್ನಾಟಕ ರಾಜ್ಯ ವೀರಶೈವ ಜಂಗಮ ಅರ್ಚಕ ಮತ್ತು ಪುರೋಹಿತರ ಸಂಘದ ರಾಜ್ಯಾಧ್ಯಕ್ಷರಾದ ವಿದ್ವಾನ್ ಚಂದ್ರಶೇಖರ ಶಾಸ್ತ್ರಿಗಳು,  ಹಾಗೂ ಬ್ರಾಹ್ಮ್ಮಣ ಅರ್ಚಕ ಪುರೋಹಿತರ ಒಕ್ಕೂಟದ ಅಧ್ಯಕ್ಷರಾದ ನರಸಿಂಹ ಗೋಪಾಲಕೃಷ್ಣ ಭಟ್ಟರು, ವೀರಶೈವ ಲಿಂಗಾಯಿತ ಸಂಘಟನಾ ವೇದಿಕೆ (ರಿ) ರಾಜ್ಯಾಧ್ಯಕ್ಷರಾದ ಚಂದ್ರಶೇಖರ ಶಾಸ್ತ್ರಿ ಕೋಡಿ ಕೊಪ್ಪಲು ಅವರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!