Saturday, 14th December 2024

ಟಾಟಾ ಮೋಟಾರ್ಸ್’ಗೆ ಹರಿಯಾಣ ರೋಡ್‍ವೇಸ್‍ನಿಂದ 1000 ಬಸ್‍ಗಳ ಆರ್ಡರ್

ಬೆಂಗಳೂರು: ಭಾರತದ ವಾಣಿಜ್ಯ ವಾಹನಗಳ ತಯಾರಕ ಟಾಟಾ ಮೋಟಾರ್ಸ್, ಹರಿಯಾಣ ರೋಡ್‍ವೇಸ್‍ನಿಂದ 1000 ಬಸ್‍ಗಳ ಪ್ರತಿಷ್ಠಿತ ಆರ್ಡರ್ ಅನ್ನು ಪಡೆದುಕೊಂಡಿದೆ ಎಂದು ಈ ದಿನ ಪ್ರಕಟಿಸಿದೆ.

ಟಾಟಾ ಮೋಟಾರ್ಸ್ ಒಪ್ಪಂದದ ಪ್ರಕಾರ 52 ಆಸನಗಳ ಸಂಪೂರ್ಣ ನಿರ್ಮಾಣದ BS6 ಡೀಸೆಲ್ ಬಸ್‍ಗಳನ್ನು ಹಂತ ಹಂತ ವಾಗಿ ಪೂರೈಸುತ್ತದೆ. ಟಾಟಾ ಮೋಟಾರ್ಸ್ ಬಸ್‍ಗಳು ಉತ್ತಮ ಪ್ರಯಾಣಿಕ ಆರಾಮ, ಹೆಚ್ಚಿನ ಇಂಧನ ದಕ್ಷತೆ, ವಿಶ್ವಾಸಾರ್ಹತೆ ಮತ್ತು ಮಾಲೀಕತ್ವದ ಒಟ್ಟಾರೆ ಕಡಿಮೆ ವೆಚ್ಚವನ್ನು ನೀಡುತ್ತವೆ. ಇ-ಬಿಡ್ಡಿಂಗ್ ಪ್ರಕ್ರಿಯೆಯನ್ನು ಸರ್ಕಾರದ ಟೆಂಡರ್ ಪ್ರಕ್ರಿಯೆಯ ಮೂಲಕ ನಡೆಸಲಾಯಿತು.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಶ್ರೀ. ನವದೀಪ್ ಸಿಂಗ್ ವಿರ್ಕ್, IPS, ಸರ್ಕಾರದ ಪ್ರಧಾನ ಕಾರ್ಯದರ್ಶಿ, ಸಾರಿಗೆ ಇಲಾಖೆ, ಹರಿಯಾಣ, ರವರು ಹೀಗೆಂದರು, “ಟಾಟಾ ಮೋಟಾರ್ಸ್‍ಗೆ 1000 ಬಸ್‍ಗಳ ಆರ್ಡರ್ ಅನ್ನು ಖಚಿತಪಡಿಸಲು ನಮಗೆ ಸಂತೋಷ ವಾಗಿದೆ.

ಆಧುನಿಕ ಮತ್ತು ಮಿತವ್ಯಯದ BS6 ಬಸ್‍ಗಳು ಎಲ್ಲಾ ಪಾಲುದಾರರಿಗೆ ಸಮಾನವಾಗಿ ಪ್ರಯೋಜನಗಳನ್ನು ನೀಡುತ್ತವೆ ಮತ್ತು ಪ್ರಯಾಣಿಕರಿಗೆ ಸಾಟಿಯಿಲ್ಲದ ಸೌಕರ್ಯವನ್ನು ನೀಡುತ್ತವೆ. ಹೊಸ ಬಸ್‍ಗಳ ಪ್ರವೇಶವು ಅಂತರ-ರಾಜ್ಯ ಸಾರ್ವಜನಿಕ ಸಾರಿಗೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲು ಸಹಾಯ ಮಾಡುತ್ತದೆ ಮತ್ತು ಹರಿಯಾಣ ರಾಜ್ಯದಾದ್ಯಂತ ಸುಗಮ ಪ್ರಯಾಣಕ್ಕೆ ಅವಕಾಶ ನೀಡುತ್ತದೆ. ”

ಮಹತ್ವದ ಸಂದರ್ಭದಲ್ಲಿ, ಟಾಟಾ ಮೋಟಾರ್ಸ್ ನ ಪ್ರಾಡಕ್ಟ್ ಲೈನ್ – ಬಸ್‍ಗಳ ಉಪಾಧ್ಯಕ್ಷರಾದ ಶ್ರೀ. ರೋಹಿತ್ ಶ್ರೀವಾಸ್ತವ ರವರು ಹೇಳಿದರು, “ಹರಿಯಾಣ ರೋಡ್‍ವೇಸ್‍ನಿಂದ ಅತಿದೊಡ್ಡ ಮತ್ತು ಪ್ರತಿಷ್ಠಿತ ಆರ್ಡರ್ ಅನ್ನು ಗೆದ್ದಿರುವುದಕ್ಕೆ ನಾವು ಸಂತೋಷಪಡುತ್ತೇವೆ. ಈ ಬಸ್ಸುಗಳ ವಿತರಣೆಯು ಹರಿಯಾಣ ರಾಜ್ಯ ಸರ್ಕಾರದೊಂದಿಗಿನ ನಮ್ಮ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ ಮತ್ತು ರಾಜ್ಯದ ನಾಗರಿಕರಿಗೆ ಆಧುನಿಕ ಸಾರ್ವಜನಿಕ ಸಾರಿಗೆಯನ್ನು ಒದಗಿಸುವಲ್ಲಿ ಸಹಾಯ ಮಾಡುತ್ತದೆ. ಭಾರತದಲ್ಲಿ ಸಾರ್ವಜನಿಕ ಸಾರಿಗೆಯನ್ನು ಆಧುನೀಕರಿಸಲು ಮತ್ತು ನಮ್ಮ ಬಸ್‍ಗಳೊಂದಿಗೆ ಉತ್ತಮ ದರ್ಜೆಯ ಸೌಕರ್ಯ ಮತ್ತು ದಕ್ಷತೆಯನ್ನು ನೀಡಲು ನಾವು ಬದ್ಧರಾಗಿದ್ದೇವೆ. ”

ಟಾಟಾ ಮೋಟಾರ್ಸ್ ವಾಣಿಜ್ಯ ವಾಹನಗಳನ್ನು ‘ಪವರ್ ಆಫ್ 6’ ತತ್ವಶಾಸ್ತ್ರದ ಮೇಲೆ ವಿನ್ಯಾಸಗೊಳಿಸಲಾಗಿದೆ ಮತ್ತು ತಯಾರಿಸಲಾಗಿದೆ, ಇದು ಸಾಟಿಯಿಲ್ಲದ ಚಾಲನೆ, ಒಟ್ಟು ಕಾರ್ಯಾಚರಣೆಯ ವೆಚ್ಚ, ಸೌಕರ್ಯ ಮತ್ತು ಅನುಕೂಲತೆ ಮತ್ತು ಸಂಪರ್ಕವನ್ನು ನೀಡುತ್ತದೆ. ಟಾಟಾ ಮೋಟಾರ್ಸ್ ರಿಪೇರ್ ಟೈಮ್ ಅಶ್ಯೂರೆನ್ಸ್, ಬ್ರೇಕ್‍ಡೌನ್ ಅಸಿಸ್ಟೆನ್ಸ್, ವಿಮೆ ಮತ್ತು ಆಕ್ಸಿಡೆಂಟಲ್ ರಿಪೇರ್ ಟೈಮ್, ವಿಸ್ತೃತ ವಾರಂಟಿ ಮತ್ತು ವಾಹನ ನಿರ್ವಹಣೆ ಮತ್ತು ಸಂರಕ್ಷಣೆಗಾಗಿ ಇತರ ಆಡ್-ಆನ್ ಸೇವೆಗಳನ್ನು ಒಳಗೊಂಡ ಸೇವಾ ಕೊಡುಗೆಗಳ ಸಂಗ್ರಹವಾದ ತನ್ನ ಪ್ರಮುಖ ಉಪಕ್ರಮ, ‘ಸಂಪೂರ್ಣ ಸೇವಾ’ ದ ಕೊಡುಗೆ ಯನ್ನು ಸಹ ನೀಡುತ್ತದೆ.