ವಿಶ್ವವಾಣಿ ಸುದ್ದಿಮನೆ
ಬೆಂಗಳೂರು :
ರಾಜ್ಯದಲ್ಲಿ ಕರೋನಾ ಆರ್ಭಟ ಮುಂದುವರಿದಿದ್ದು, ಇಡೀ ಕರುನಾಡು ಕರೋನಾ ಆತಂಕದಲ್ಲಿದೆ. ಗುರುವಾರ ಕರ್ನಾಟಕದಲ್ಲಿ ದಾಖಲೆ ಸಂಖ್ಯೆಯಲ್ಲಿ ಕರೋನಾ ಪ್ರಕರಣ ಪತ್ತೆಯಾಗಿದೆ.
ರಾಜ್ಯದಲ್ಲಿ 2282 ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 31,159 ಕ್ಕೆ ಏರಿಕೆಯಾಗಿದೆ. ಒಂದೇ ದಿನ ಕರ್ನಾಟಕದಲ್ಲಿ 17 ಬಲಿಯಾಗಿದ್ದು, ಈ ಮೂಲಕ ಕಿಲ್ಲರ್ ಕರೋನಾಗೆ ಬಲಿಯಾದವರ ಸಂಖ್ಯೆ 487 ಕ್ಕೇರಿಕೆಯಾಗಿದೆ.
2282 ಕರೋನಾ ಸೋಂಕಿತರಲ್ಲಿ ಬೆಂಗಳೂರಿನಲ್ಲಿ ಅತಿ ಹೆಚ್ಚು 1373 ಪ್ರಕರಣಗಳು ದಾಖಲಾಗಿವೆ. ದಕ್ಷಿಣ ಕನ್ನಡ 167, ಧಾರವಾಡ 75, ಕಲಬುರಗಿ 85, ಮೈಸೂರು 52 ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ 41 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
ರಾಜ್ಯಾದ್ಯಂತ 957 ರೋಗಿಗಳು ಗುಣಮುಖಗೊಂಡಿದ್ದಾರೆ. ಈವರೆಗೆ 12,833 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದಂತಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಆಕ್ಟಿವ್ ಕರೋನಾ ಕೇಸ್ಗಳ ಸಂಖ್ಯೆ 17,782 ಇದೆ. ಸದ್ಯ ರಾಜ್ಯದಲ್ಲಿ 457 ಜನ ಐಸಿಯುಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
……..
ಅಂಕಿ ಅಂಶ
-ರಾಜ್ಯದಲ್ಲಿ 17,782 ಸಕ್ರಿಯ ಪ್ರಕರಣಗಳು
-ಒಂದೇ ದಿನ 957 ಮಂದಿ ಕರೋನಾದಿಂದ ಮುಕ್ತಿ
-486ಕ್ಕೆ ಏರಿಕೆಯಾದ ಕರೋನಾಗೆ ಬಲಿಯಾದವರ ಸಂಖ್ಯೆ
-457 ಮಂದಿ ಐಸಿಯುನಲ್ಲೊ ಚಿಕಿತ್ಸೆ
……….
ಬೆಂಗಳೂರಿನಲ್ಲಿ ಗುಣಮುಖರ ಸಂಖ್ಯೆ ಇಳಿಕೆ
ಬೆಂಗಳೂರಿನಲ್ಲಿ ಕರೋನಾ ಸೋಂಕಿತರ ಸಂಖ್ಯೆ ದುಪ್ಪಟ್ಟು ಹೆಚ್ಚುತ್ತಿದ್ದು ನಿಯಂತ್ರಣಕ್ಕೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ಸೋಂಕಿತರಲ್ಲದೆ ಸಾವಿನ ಸಂಖ್ಯೆಯೂ ಹೆಚ್ಚಿದೆ. ಕರೋನಾದಿಂದ ಗುಣಮುಖರಾಗಿ ಡಿಸ್ಚಾರ್ಚ್ ಆಗುವವರ ಸಂಖ್ಯೆ ಇಳಿಕೆಯಾಗಿದೆ. ಇದಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳಲ್ಲೂ ಉತ್ತರ ಇಲ್ಲವಾಗಿದೆ. ಕರೋನಾ ಕೈಮೀರಿ ಹೋಗಿರುವ ಕಾರಣ, ಸ್ಪಷ್ಟತೆ ಸಿಗುತ್ತಿಲ್ಲ ಎಂಬುದಾಗಿ ತಿಳಿದು ಬಂದಿದೆ.
ಜಿಲ್ಲಾವಾರು ಸೋಂಕಿತರ ಸಂಖ್ಯೆ
ಜಿಲ್ಲೆ ಕರೋನಾ ಸೋಂಕಿತರು
ಬೆಂಗಳೂರು ನಗರ-13882
ದಕ್ಷಿಣ ಕನ್ನಡ-1701
ಧಾರವಾಡ-832
ಕಲಬುರಗಿ-1901
ಬಳ್ಳಾರಿ-1488
ಮೈಸೂರು-639
ಬೆಂಗಳೂರು ಗ್ರಾಮಾಂತರ-339
ರಾಮನಗರ-332
ಚಿಕ್ಕಬಳ್ಳಾಪುರ-332
ಉಡುಪಿ-1442
ಹಾವೇರಿ-231
ಬೀದರ್-894
ಬೆಳಗಾವಿ-450
ಹಾಸನ-614
ಬಾಗಲಕೋಟೆ-349
ತುಮಕೂರು-319
ಚಿಕ್ಕಮಗಳೂರು-130
ಮಂಡ್ಯ-630
ಉತ್ತರಕನ್ನಡ-512
ದಾವಣಗೆರೆ-423
ರಾಯಚೂರು-631
ಶಿವಮೊಗ್ಗ-372
ಕೋಲಾರ-240
ಯಾದಗಿರಿ-1043
ಕೊಪ್ಪಳ-157
ಗದಗ-243
ವಿಜಯಪುರ-631
ಚಿತ್ರದುರ್ಗ-94
|
|