Saturday, 14th December 2024

4 ಜಿ ಅಂರ್ತಜಾಲ ಸೇವೆ ಮರುಸ್ಥಾಪನೆಗೆ ಸುಪ್ರೀಂಕೋರ್ಟ್ ನಕಾರ

ಶ್ರೀನಗರ:

4ಜಿ ವೇಗದ ಅಂರ್ತಜಾಲ ಮರುಸ್ಥಾಪನೆ  ಮಾಡುವಂತೆ ಜಮ್ಮು ಕಾಶ್ಮೀರ ಆಡಳಿತಕ್ಕೆ ಸೂಚಿಸಲು ಸುಪ್ರೀಂಕೋರ್ಟ್ ನಿರಾಕರಿಸಿರುವುದು ಕೇಂದ್ರಾಡಳಿತ ಪ್ರದೇಶದ ಜನತೆ ಭಾರೀ ನಿರಾಸೆ ಮೂಡಿಸಿದೆ ಎಂದು ಸಿಪಿಎಂ ಹಿರಿಯ ನಾಯಕ ಮೊಹಮದ್ ಯೂಸುಫ್ ತಾರಿಗಾಮಿ ತಿಳಿಸಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ 4ಜಿ ಇಂಟರ್ ನೆಟ್ ಸೇವೆಗಳನ್ನು ಮರುಸ್ಥಾಪಿಸುವ ಯಾವುದೇ ಆದೇಶಗಳನ್ನು ನೀಡಲು ನಿರಾಕರಿಸಿರುವ ಸುಪ್ರೀಂಕೋರ್ಟ್, ಅರ್ಜಿದಾರರು ಎತ್ತಿರುವ ವಿಷಯವನ್ನು ಪರಿಶೀಲಿಸಲು ವಿಶೇಷ ಸಮಿತಿಯೊಂದನ್ನು ರಚಿಸಲು ಕೇಂದ್ರಕ್ಕೆ ಸೂಚಿಸುವುದಾಗಿ ಸೋಮವಾರ ತಿಳಿಸಿದೆ.

ಇಡೀ ಪ್ರಪಂಚ ಕರೋನಾ ಸಾಂಕ್ರಾಮಿಕ ಸೋಂಕಿನಿಂದ ಬಾಧಿತವಾಗಿರುವಾಗ ಜನರು ಅಂರ್ತಜಾಲವನ್ನು ಅವಲಂಭಿಸಿದ್ದಾರೆ. ಇದೇ ವೇಳೆ ಜಮ್ಮು ಕಾಶ್ಮೀರ ಜನರಿಗೆ ಈ ಸೌಲಭ್ಯವನ್ನು ನಿರಾಕರಿಸಲಾಗಿದೆ. ಕಡಿಮೆ ವೇಗದ ಇಂಟರ್ ನೆಟ್‌ನಿಂದಾ ಕರೋನಾ ಕುರಿತ ಮಾಹಿತಿ ಮತ್ತು ಪರಿಹಾರ ಕ್ರಮಗಳನ್ನು ತಿಳಿಯಲು ಜನರಿಗೆ ಸಾಧ್ಯವಾಗುತಿಲ್ಲ ಎಂದು ದೂರಿದ್ದಾರೆ.