Friday, 13th December 2024

ಅರ್ನಬ್‌ ಗೋಸ್ವಾಮಿ ಬಂಧನ ಖಂಡಿಸಿ ಎಬಿವಿಪಿ ಪ್ರತಿಭಟನೆ

ಗಂಗಾವತಿ: ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಬ್‌ ಗೋಸ್ವಾಮಿ ಬಂಧನ ಖಂಡಿಸಿ ಎಬಿವಿಪಿ ಕಾರ್ಯಕರ್ತರು ಶನಿವಾರ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಎಂ.ರೇಣುಕಾ ಅವರಿಗೆ ಮನವಿ ಸಲ್ಲಿಸಿದರು.

ಎಬಿವಿಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಸರ್ವಜ್ಞಮೂರ್ತಿ ಮಾತನಾಡಿ,’2018 ರ ಆತ್ಮಹತ್ಯೆ ಪ್ರಕರಣ ಅಂತ್ಯ ಕಂಡಿತ್ತು. ಸೇಡು ತೀರಿಸಿಕೊಳ್ಳುವ ಉದ್ದೇಶಕ್ಕಾಗಿ ಆ ಪ್ರಕರಣದ ಮರು ತನಿಖೆ ಆರಂಭಿಸಿದೆ. ಮಹಾರಾಷ್ಟ್ರ ಸರ್ಕಾರ ತನ್ನ ಪ್ರಜಾಪ್ರಭುತ್ವ ವಿರೋಧಿ ಮುಖವಾಡ ಬಯಲು ಮಾಡಿಕೊಂಡಿದೆ’ ಎಂದರು.

ಅರ್ನಬ್‌ ಗೋಸ್ವಾಮಿ ಬಂಧನದ ವೇಳೆ ಪೊಲೀಸರು ನಡೆದುಕೊಂಡ ರೀತಿ ತುರ್ತು ಪರಿಸ್ಥಿಯ ದಿನಗಳನ್ನು ನೆನಪಿಸುತ್ತದೆ. ತಕ್ಷಣ ಅರ್ನಬ್ ಅವರನ್ನು ಬಿಡುಗಡೆ ಮಾಡಬೇಕು ಎಂದು ಹೇಳಿದರು. ಎಬಿವಿಪಿ ಕಾರ್ಯಕರ್ತರಾದ ಲಕ್ಷ್ಮೀ ಬೋಸ್ಲೆ, ಶ್ರೀನಿವಾಸ, ಮಹಾರಾಜ ಹಾಗೂ ಉಮೇಶ ಇದ್ದರು.